RRR ಪಾರ್ಟ್​-2 ಯಾವಾಗ ಬರುತ್ತೆ? ಅಪ್​ಡೇಟ್​ ನೀಡಿದ ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್

Published : Jul 30, 2023, 03:29 PM IST
RRR ಪಾರ್ಟ್​-2 ಯಾವಾಗ ಬರುತ್ತೆ? ಅಪ್​ಡೇಟ್​ ನೀಡಿದ ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್

ಸಾರಾಂಶ

RRR ಚಿತ್ರದ ಸೀಕ್ವೆಲ್​ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಕುರಿತು ಚಿತ್ರ ಲೇಖಕ ವಿಜಯೇಂದ್ರ ಪ್ರಸಾದ್ ಇದೀಗ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?   

ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ (RRR)ಗಲ್ಲಾಪೆಟ್ಟಿಗೆಯನ್ನು ಆಳಿತು. ಬ್ಲಾಕ್​ಬಸ್ಟರ್​ ಎಂದು ಸಾಬೀತಾದ ಈ ಚಲನಚಿತ್ರದ ಹಾಡು, ನಾಟು ನಾಟು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಯಾವುದೇ ಚಿತ್ರ ಸೂಪರ್​ಹಿಟ್ ಆದ ಬಳಿಕ ಅದಕ್ಕೆ ಸೀಕ್ವೆಲ್ ಅರ್ಥಾತ್​ ಪಾರ್ಟ್​-2 ಸಿದ್ಧವಾಗೋದು ಈಗಿನ ಟ್ರೆಂಡ್​.  ಅದೇ ರೀತಿ ‘ಆರ್​ಆರ್​ಆರ್​’ ಸಿನಿಮಾಗೆ ಸೀಕ್ವೆಲ್ ರೆಡಿ ಆಗಲಿದೆ ಎಂದು ಈಚೆಗಷ್ಟೇ ಚಿತ್ರತಂಡ ಹೇಳಿತ್ತು. ಅದರ ಬಗ್ಗೆ ಇನ್ನಷ್ಟು ಅಪ್​ಡೇಟ್​ ನೀಡಿದ್ದಾರೆ  ಚಿತ್ರದ ಲೇಖಕ ವಿಜಯೇಂದ್ರ ಪ್ರಸಾದ್. ಅವರು ಆರ್​ಆರ್​ಆರ್​ ಚಿತ್ರದ ಸೀಕ್ವೆಲ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಿವುಡ್ ಹಂಗಾಮಾಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, RRR ನ ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಚಿತ್ರದ ಮುಂದುವರಿದ ಭಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.  ಆರ್‌ಆರ್‌ಆರ್ ಬಿಡುಗಡೆಯಾದ ನಂತರ ನಾನು ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ್ (ಎನ್‌ಟಿಆರ್ ಜೂನಿಯರ್) ಜೊತೆಗೆ ಆಫ್ರಿಕಾದಲ್ಲಿ ಕಥೆಯನ್ನು ಮುಂದುವರಿಸುವ ಮುಂದಿನ ಭಾಗದ ಕಲ್ಪನೆಯನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.  

‘ಆರ್​ಆರ್​ಆರ್’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಅವಾರ್ಡ್ ಒಲಿಯಿತು. ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಈ ಕಾರಣದಿಂದಲೇ ಎಲ್ಲರೂ ‘ಆರ್​ಆರ್​ಆರ್ 2’ ನಿರೀಕ್ಷಿಸುತ್ತಿದ್ದಾರೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಎಸ್‌ಎಸ್ ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಅವರ ಎಸ್‌ಎಸ್‌ಎಂಬಿ 29 ನಲ್ಲಿ ನಿರತರಾಗಿದ್ದಾರೆ ಮತ್ತು ಅವರು ಚಿತ್ರವನ್ನು ಪೂರ್ಣಗೊಳಿಸಿದ ನಂತರ ಮಾತ್ರ ಮುಂದಿನ ಯೋಜನೆಯ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ.

ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​

'ನನ್ನ ಮಗನ ಸ್ವಭಾವವನ್ನು ತಿಳಿದ ಅವರು ಮಹೇಶ್ ಅವರೊಂದಿಗಿನ ಚಿತ್ರ ಮುಗಿಯುವವರೆಗೆ ಮುಂದಿನ ಭಾಗದ ಆಲೋಚನೆಯತ್ತ ಗಮನ ಹರಿಸುವುದಿಲ್ಲ. ಆ ನಂತರ ಅವರು ನನ್ನ ಸ್ಕ್ರಿಪ್ಟ್ ಇಷ್ಟಪಟ್ಟರೆ ಮತ್ತು ಇಬ್ಬರು ನಾಯಕರಿಗೂ ಸ್ಕ್ರಿಪ್ಟ್ ಇಷ್ಟವಾದರೆ ಮತ್ತು ಅವರಿಗೆ ಸಮಯವಿದ್ದರೆ ಅದನ್ನು ಮುಂದುವರಿಸಲಾಗುತ್ತದೆ. ಆದ್ದರಿಂದ ಆರ್​ಆರ್​ಆರ್​ ಸೀಕ್ವೆಲ್​ನ ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಹೌದು, ಇಲ್ಲ ಎಂಬ ಎರಡೂ ಉತ್ತರ ನೀಡಬಹುದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಸಿನಿಮಾದ ಕಥೆ ಆಫ್ರಿಕಾದಲ್ಲಿ ಸಾಗುತ್ತದೆ’ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್. ವಿಜಯೇಂದ್ರ ಪ್ರಸಾದ್ ಅವರು ‘ಆರ್​ಆರ್​ಆರ್’ ಸೀಕ್ವೆಲ್ ಬಗ್ಗೆ ಮಾತನಾಡುತ್ತಿರುವ ಬಗ್ಗೆ ರಾಜಮೌಳಿಗೆ ಬೇಸರ ಇದೆ ಎಂದು ವರದಿ ಆಗಿತ್ತು. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಆರ್ ಆರ್ ಆರ್ ಮೊದಲ ಭಾಗದಲ್ಲಿರುವಂತೆ ರಾಮ್ ಚರಣ್ (Ram  Charan) ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರ ನಿರ್ವಹಿಸುವಂತೆ ಸೀಕ್ವೆಲ್ ಬರೆಯಲಾಗಿದೆಯಂತೆ. ಆರ್ ಆರ್ ಆರ್ ಚಿತ್ರಕ್ಕೆ ಹೋಲಿಸಿದರೆ ಮಹೇಶ್ ಬಾಬು ಅವರೊಂದಿಗಿನ ರಾಜಮೌಳಿ ಅವರ ಮುಂದಿನ ಸಿನಿಮಾ ಹೆಚ್ಚಿನ ಸಾಹಸಮಯ ಸಿನಿಮಾ ಎಂದು ವಿಜಯೇಂದ್ರ ಬಹಿರಂಗಪಡಿಸಿದರು. ತಾತ್ಕಾಲಿಕವಾಗಿ ಈ ಚಿತ್ರಕ್ಕೆ  SSMB 29 ಎಂದು ಹೆಸರಿಡಲಾಗಿದ್ದು, ಈ ಚಿತ್ರದ ನಿರ್ಮಾಣ ಡಿಸೆಂಬರ್ 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಈ ಹಿಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದರು. 

Allu Arjun ಒಂದೇ ಒಂದು ಫೋಟೋಗೆ ಹೊಡೆಯಿತು ಲಾಟರಿ: ಇತಿಹಾಸ ಸೃಷ್ಟಿಸಿದ ನಟ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?