ಆಲಿಯಾ ಭಟ್ ಕಡೆಯಿಂದ Jr.NTRಗೆ ಸಿಕ್ತು ಸರ್ಪ್ರೈಸ್ ಗಿಫ್ಟ್; RRR ಸ್ಟಾರ್ ರಿಯಾಕ್ಷನ್ ಹೀಗಿತ್ತು

Published : Mar 26, 2023, 04:53 PM IST
ಆಲಿಯಾ ಭಟ್ ಕಡೆಯಿಂದ Jr.NTRಗೆ ಸಿಕ್ತು ಸರ್ಪ್ರೈಸ್ ಗಿಫ್ಟ್; RRR ಸ್ಟಾರ್ ರಿಯಾಕ್ಷನ್ ಹೀಗಿತ್ತು

ಸಾರಾಂಶ

ಆಲಿಯಾ ಭಟ್ ಕಡೆಯಿಂದ Jr.NTRಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಬಾಲಿವುಡ್ ಸ್ಟಾರ್‌ಗೆ ಧನ್ಯವಾದ ತಿಳಿಸಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ತನ್ನ ಸಹ ನಟ, ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಅವರಿಗೆ ವಿಶೇಷ ಉಡುಗೊರೆ ಕಳುಹಿಸಿದ್ದಾರೆ. ಈ ಬಗ್ಗೆ ಜೂ.ಎನ್ ಟಿ ಆರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಅಲಿಯಾ ಭಟ್ ವಿಶೇಷ ಉಡುಗೊರೆ ಕಳುಹಿಸಿದ್ದು ಆರ್ ಆರ್ ಆರ್ ಸ್ಟಾರ್ ಜೂ.ಎನ್ ಟಿ ಆರ್ ಅವರ ಮಕ್ಕಳಿಗೆ. ಜೂ.ಎನ್ ಟಿ ಆರ್ ಅವರಿಗೆ ಅಭಯ್ ಮತ್ತು ಭಾರ್ಗವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರೂ ಮದ್ದಾದ ಮಕ್ಕಳಿಗೆ ಬಾಲಿವುಡ್ ಸ್ಟಾರ್ ಅಲಿಯಾ ಭಟ್ ವಿಶೇಷ ಉಡುಗೊರೆ ಕಳುಹಿಸಿದ್ದಾರೆ. ಅಷ್ಟಕ್ಕೂ ಆಲಿಯಾ  ಕೊಟ್ಟ ಗಿಫ್ಟ್ ಏನು ಅಂತಿರಾ ಬಟ್ಟೆ. 

ಆಲಿಯಾ ಭಟ್ ತನ್ನದೆ ಆದ ಬಟ್ಟೆ ಬ್ರಾಂಡ್ ಹೊಂದಿದ್ದಾರೆ. ಮಕ್ಕಳಿಗಾಗಿಯೇ ವಿಶೇಷವಾಗಿ ಡಿಸೈನ್ ಮಾಡಿಸಲಾಗುತ್ತೆ. ಬಟ್ಟೆಯನ್ನು ಆಲಿಯಾ ತೆಲುಗು ಸ್ಟಾರ್ ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಕಳಿಹಿಸಿದ ಗಿಫ್ಟ್ ನ ಫೋಟೋ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ನನ್ನ ಹೆಸರಲ್ಲೂ ಒಂದು ಬ್ಯಾಗ್ ನಿರೀಕ್ಷಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತನಗೂ ಒಂದು ಗಿಫ್ಟ್ ಯಾವಾಗ ಎಂದು ಜೂ.ಎನ್ ಟಿ ಆರ್, ಅಲಿಯಾ ಕಾಲೆಳೆದಿದ್ದಾರೆ.   

ಜೂ.ಎನ್ ಟಿ ಆರ್ ಪೋಸ್ಟ್ ಅನ್ನು ಶೇರ್ ಮಾಡಿರುವ ಆಲಿಯಾ, ನಾನು ನಿಮಗಾಗಿ ವಿಶೇಷವಾಗಿ ಹಾರ್ಟ್ ಗಳನ್ನು ಕಳುಹಿಸುತ್ತೇನೆ. ಅತ್ಯಂತ ಸ್ವೀಟ್ ವ್ಯಕ್ತಿ' ಎಂದು ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ನಟಿ ಆಲಿಯಾ ಭಟಚ್ 2020ಯಲ್ಲಿ ಬಟ್ಟೆ ಬ್ರಾಂಡ್ ಪ್ರಾರಂಭಿಸಿದರು. ಈ ಬ್ರಾಂಡ್ 14ರಿಂದ ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಬಟ್ಟೆ ತಯಾರಿಸುತ್ತದೆ.

ನೀವು ಹಾಗೆ ಕೇಳಿದ್ರೆ ಸಿನಿಮಾ ಮಾಡೋದನ್ನೆ ನಿಲ್ಲಿಸುತ್ತೇನೆ; ಅಭಿಮಾನಿಗಳ ಮೇಲೆ ಜೂ.ಎನ್‌ಟಿಆರ್ ಗರಂ

ಅಂದಹಾಗೆ ಆಲಿಯಾ ಭಟ್ ಸೌತ್ ಸ್ಟಾರ್‌ಗಳ ಮಕ್ಕಳಿಗೆ ಬಟ್ಟೆ ಗಿಫ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಆರ್ ಆರ್ ಆರ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಟಾಲಿವುಡ್ ನ ಮತ್ತೋರ್ವ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಅವರಿಗೆ ಉಡುಗೊರೆ ಕಳಿಹಿಸಿದ್ದರು. ಆಲಿಯಾ ಗಿಫ್ಟ್ ಮಾಡಿದ್ದ ಉಡುಗೊರೆಯನ್ನು ಧರಿಸಿ ಸಿತಾರಾ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದರು. ಇದೀಗ ಜೂ.ಎನ್ ಟಿ ಆರ್ ಮಕ್ಕಳಿಗೆ ಕಳುಹಿಸಿದ್ದಾರೆ. 

ಕೊನೆಗೂ ಸೌತ್ ಸಿನಿರಂಗಕ್ಕೆ ಕಾಲಿಟ್ಟ ನಟಿ ಜಾನ್ವಿ ಕಪೂರ್; ಪೋಸ್ಟರ್ ರಿಲೀಸ್

ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾರಂಗದ ಕಡೆ ಮುಖಮಾಡಿದ್ದರು. ರಾಜಮೌಳಿ ಸಾರಥ್ಯದಲ್ಲಿ ಬಂದಿರುವ ಈ ಸಿನಿಮಾದಲ್ಲಿ ಆಲಿಯಾ ಸೀತಾ ಆಗಿ ಮಿಂಚಿದ್ದರು. ಈ ಸಿನಿಮಾ ಬಳಿಕ ಆಲಿಯಾ ಸೌತ್ ಸ್ಟಾರ್‌ಗಳ ಜೊತೆ ಬಾಂಧವ್ಯ ಬೆಳೆಸಿಕೊಂಡರು. ಇನ್ನೂ ಜೂ.ಎನ್ ಟಿ ಆರ್ ಸದ್ಯ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ 30ನೇ ಸಿನಿಮಾ ಸೆಟ್ ಏರಿದ್ದು ರಾಜಮೌಳಿ ಕ್ಲಾಪ್ ಮಾಡಿ ಶುಭಹಾರೈಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಜೂ.ಎನ್ ಟಿ ಆರ್ ಜೊತೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?