
ಆರ್ ಆರ್ ಆರ್ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಗೆದ್ದು ಬೀಗಿರುವ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೀರವಾಣಿ ಸಂಯೋಜನೆ ಮಾಡಿರುವ ‘ನಾಟು ನಾಟು..’ ಹಾಡು ಸೂಪರ್ ಹಿಟ್ ಆಗಿದ್ದೂ ಅಲ್ಲದೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಕೀರವಾಣಿ ಅವರ ಈ ಸಾಧನೆಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇಡೀ ಭಾರತ ಹೆಮ್ಮೆ ಪಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಂ ಕೀರವಾಣಿ ತನಗೆ ಆಸ್ಕರ್ ಸಿಕ್ಕಿರುವುದು ಇದೇ ಮೊದಲೇನೂ ಅಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ‘ನನ್ನ ಪಾಲಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿ’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಅಕಾಡೆಮಿ ಅವಾರ್ಡ್ ಗೆದ್ದಿರುವ ಎಂಎಂ ಕೀರವಾಣಿ ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ‘ಗಲಾಟಾ ಪ್ಲಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೀರವಾಣಿ ಅನೇಕ ವಿಚರಾಗಳನ್ನು ಬಹಿರಂಗ ಪಡಿಸಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಕೀರವಾಣಿ ಧನ್ಯವಾದ ತಿಳಿಸಿದ್ದಾರೆ, ಅವರನೇ ತನಗೆ ಮೊದಲ ಆಸ್ಕರ್ ಎಂದು ಹೊಗಳಿದ್ದಾರೆ.
‘ರಾಮ್ ಗೋಪಾಲ್ ವರ್ಮಾ ಅವರೇ ನನ್ನ ಪಾಲಿನ ಮೊದಲ ಆಸ್ಕರ್. 2023ರಲ್ಲಿ ಬಂದಿರುವುದು ಎರಡನೇ ಆಸ್ಕರ್. ಯಾಕೆಂದರೆ, ಆರಂಭದ ದಿನಗಳಲ್ಲಿ ಸುಮಾರು 51 ಮಂದಿ ನನ್ನ ಆಡಿಯೋ ಕ್ಯಾಸೆಟ್ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು. ನನ್ನ ಹಾಡುಗಳನ್ನು ಯಾರೂ ಕೇಳಲೇ ಇಲ್ಲ. ಒಬ್ಬ ಹೊಸಬ ಬಂದಾಗ ಯಾರು ಗಮನಿಸ್ತಾರೆ? ಕೆಲವರಿಗೆ ನನ್ನ ಟ್ಯೂನ್ ಇಷ್ಟ ಆಗಿದ್ದರೂ ಕೂಡ ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಲಿಲ್ಲ’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ.
ಆಸ್ಕರ್ ಗೆದ್ದ ಬಳಿಕ ನಿರ್ಮಾಪಕಿ ಗುನೀತ್ ಮೊಂಗಾ ಆಸ್ಪತ್ರೆಗೆ ದಾಖಲಾಗಿದ್ರು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಕೀರವಾಣಿ
‘ನನಗೆ ಕ್ಷಣ ಕ್ಷಣಂ ಸಿನಿಮಾದಲ್ಲಿ ಕೆಲಸ ಮಾಡಲು ರಾಮ್ ಗೋಪಾಲ್ ವರ್ಮಾ ಅವಕಾಶ ನೀಡಿದರು. ಆ ಸಮಯದಲ್ಲಿ ಶಿವ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅವರ ಪಾಲಿಗೆ ಶಿವ ಚಿತ್ರವೇ ಆಸ್ಕರ್. ನನ್ನ ಪಾಲಿಗೆ ರಾಮ್ ಗೋಪಾಲ್ ವರ್ಮಾ ಅವರೇ ಆಸ್ಕರ್. ಅವರು ನನಗೆ ಅವಕಾಶ ಕೊಟ್ಟ ನಂತರ ಬೇರೆ ಬೇರೆ ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ. ಕೀರವಾಣಿ ಹೀಗೆ ಹೇಳುತ್ತಿದ್ದಂತೆ ರಾಮ್ ಗೋಪಾಲ್ ವರ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
'ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ; ವಿಡಿಯೋ ವೈರಲ್
ಕೀರವಾಣಿ ಹೇಳಿರುವ ವಿಡಿಯೋ ಕ್ಲಿಪ್ ಶೇರ್ ರಾಮ್ ಗೋಪಾಲ್ ವರ್ಮಾ ಅವರು, ‘ಹೇ ಕೀರವಾಣಿ.. ನನಗೆ ಸತ್ತಂತೆ ಫೀಲ್ ಆಗುತ್ತಿದೆ. ಯಾಕೆಂದರೆ ಕೇವಲ ಸತ್ತವರನ್ನು ಮಾತ್ರ ಈ ರೀತಿ ಹೊಗಳಲಾಗುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.