ಆಸ್ಕರ್ ಪಡೆದ ತಕ್ಷಣವೇ ಮಗನಿಗೆ ಕರೆ ಮಾಡಿದೆ: ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಾತು

Published : Mar 14, 2023, 12:06 PM ISTUpdated : Mar 14, 2023, 12:37 PM IST
ಆಸ್ಕರ್ ಪಡೆದ ತಕ್ಷಣವೇ ಮಗನಿಗೆ ಕರೆ ಮಾಡಿದೆ: ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಾತು

ಸಾರಾಂಶ

ಆರ್‌ಆರ್‌ಆರ್‌ ಚಿತ್ರಕ್ಕೆ ಕಥೆ ಬರೆದು ಜವಾಬ್ದಾರಿ ಹೆಚ್ಚಾಗಿದೆ ಎಂದ ವಿಜಯೇಂದ್ರ ಪ್ರಸಾದ್. ಹಾಲಿವುಡ್‌ಗೆ ಪ್ರವೇಶ ಪಡೆದ ಸೌತ್‌ ಸಿನಿಮಾಗಳು ಎನ್ನುವ ಹೆಮ್ಮೆ ಇದೆ .....  

ಎಸ್‌ಎಸ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ ಕಳೆದ ಮೂರು ತಿಂಗಳುಗಳಿಂದ ಬ್ಯಾಕ್ ಟು ಬ್ಯಾಕ್ ಪ್ರತಿಷ್ಠಿತ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಎಂ ಎಂ ಕೀರವಾಣಿ ಮತ್ತು ಚಂದ್ರಬೋಸ್‌ ಕಾಂಬಿನೇಷನ್‌ನ ನಾಟು ನಾಟು ಹಾಡು ಓರಿಜಿಲ್‌ ಸಾಂಗ್‌ ವಿಭಾಗದಲ್ಲಿ ಆಯ್ಕೆ ಆಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಭಾರತದಲ್ಲಿ ಲೈವ್‌ ವೀಕ್ಷಿಸುತ್ತಿದ್ದ ರಾಜ್‌ಮೌಳಿ ತಂದೆ ಸಂತಸವನ್ನು ಹಂಚಿಕೊಂಡಿದ್ದಾರೆ. 

'ಆಸ್ಕರ್ ಪ್ರಶಸ್ತಿ ಪಡೆದಿರುವುದಕ್ಕೆ ತುಂಬಾನೇ ಸ್ಪೆಷಲ್ ಫೀಲ್ ಅಗುತ್ತಿದೆ. ಈ ಯಶಸ್ಸಿನ ಬಗ್ಗೆ ಎರಡು ರೀತಿಯಲ್ಲಿ ಹೇಳಬಹುದು..ಒಂದು ನಾನು ಸ್ಟೋರಿ ರೈಟರ್ ಆಗಿ ನನ್ನ ಮಗ ಸಿನಿಮಾ ಡೈರೆಕ್ಟರ್ ಮಾಡಿರುವುದು ಮತ್ತೊಂದು ನಮ್ಮ ಕಲ್ಚರ್‌ನಲ್ಲಿ ಅನೇಕ ರಿಚ್‌ ಸಿನಿಮಾಗಳಿಗೆ ಆರ್‌ಆರ್‌ಆರ್‌ ಮೂಲಕ ಹಾಲಿವುಡ್‌ಗೆ ಪ್ರವೇಶ ಸಿಕ್ಕಿರುವುದು ಹೆಮ್ಮೆಯ ವಿಚಾರ. ಇಡೀ ಭಾರತವೇ ಈ ಕ್ಷಣವನ್ನು ಸಂಭ್ರಮಿಸುತ್ತಿದೆ' ಎಂದು ಮಾತನಾಡಿದ್ದಾರೆ. 

Natu Natu ಆಸ್ಕರ್​ ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ಸುದ್ದಿಯಲ್ಲಿ ಶಾರುಖ್​ ಟ್ವೀಟ್​...

'ಆಸ್ಕರ್ ಪಡೆದ ನಂತರ ನನ್ನ ಮಗ ರಾಜಮೌಳಿ ಜೊತೆ ನಾನು ಮಾತನಾಡಿದೆ. ಪದಗಳನ್ನು ಆ ಭಾವನೆಗಳನ್ನು ವರ್ಣಿಸಲು ಆಗದು. ತಾಯಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ತುಂಬಾ ನೋವು ಎದುರಿಸುತ್ತಾರೆ ಅದೇ ಮಗು ಹೊರ ಪ್ರಪಂಚಕ್ಕೆ ಬಂದು ನನ್ನ ಮಡಿಲಿನಲ್ಲಿ ಮಲಗಿಕೊಂಡಾಗ ಆ ನೋವು ಮರೆತು ಬಿಡುತ್ತಾಳೆ. ಅದೇ ರೀತಿ ಕಳೆದ 6 ತಿಂಗಳು ನನ್ನ ಮಗ ತುಂಬಾ ಕಷ್ಟ ಪಟ್ಟಿದ್ದಾನೆ ಅದಕ್ಕೆ ಫಲವೇ ಈ ಆಸ್ಕರ್ ಪ್ರಶಸ್ತಿಗಳು. ಕೋಟಿಯಲ್ಲಿ ಹಣ ಖರ್ಚು ಮಾಡಿ ಸಿನಿಮಾ ಮಾಡಿದ್ದಾನೆ ದೇವರ ದಯೇ ಸಿನಿಮಾ ಗೆದ್ದಿದೆ.' ಎಂದು ವಿಜಯೇಂದ್ರ ಹೇಳಿದ್ದಾರೆ.

'ಆಸ್ಕರ್ ಪ್ರಶಸ್ತಿ ನನ್ನ ಮೇಲೆ ಯಾವುದೇ ಒತ್ತಡ ತಂದಿಲ್ಲ. ಹೆಚ್ಚಿನ ಜವಾಬ್ದಾರಿಯನ್ನು ತಂದಿದೆ. ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅಂತ ಅನಿಸುತ್ತಿದೆ. ಒಮ್ಮೆ ಸಾಬೀತು ಮಾಡಿದ್ದೇವೆ. ಮತ್ತೆ ಅವಕಾಶ ಸಿಕ್ಕರೆ ಮತ್ತೆ ಮತ್ತೆ ಸಾಬೀತು ಮಾಡಿಕೊಳ್ಳಬೇಕು ಅನಿಸುತ್ತಿದೆ. ಆಸ್ಕರ್‌ನಲ್ಲಿ ಒಂದೇ ಒಂದು ಪ್ರಶಸ್ತಿ ಗೆದ್ದಿದ್ದೇವೆ ಅಷ್ಟೇ. ಇನ್ನು ಅದರಲ್ಲಿ ಸಾಕಷ್ಟು ವಿಭಾಗಗಳಿವೆ ಅದರಲ್ಲಿ ಈಗ ಒಂದನ್ನು ಮಾತ್ರ ಗೆದ್ದಿದ್ದೇವೆ. ಎವರಿಥಿಂಗ್‌ ಎವರಿವರ್‌ ಆಲ್ ಆಟ್‌ ಓನ್ಸ್‌ ಸಿನಿಮಾ ನೋಡಿ ಹಲವು ವಿಭಾಗಗಳಲ್ಲಿ ಆಯ್ಕೆ ಆಗಿ 7 ಪ್ರಶಸ್ತಿಗಳನ್ನು ಗೆದ್ದಿದೆ. ಅದ್ಭುತ ಕಥೆ ಹೊಂದಿರುವ ಸಿನಿಮಾ. ಯಾವ ರೇಂಜ್‌ಗೆ ಸಿನಿಮಾ ಮಾಡಿದ್ದಾರೆ ಖುಷಿಯಾಗುತ್ತದೆ. ಆ ರೇಂಜ್‌ಗೆ ನಾನು ಬೆಳೆಯಬೇಕು. ಆರ್‌ಆರ್‌ಅರ್‌ ಚಿತ್ರದಲ್ಲೂ ರಾಮ್‌ ಚರಣ್‌ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟಿಸಿದ್ದಾರೆ' ಎಂದಿದ್ದಾರೆ ವಿಜಯೇಂದ್ರ.

ತೆಲುಗು ಗೊತ್ತಿದ್ದವರಿಗೆ 'ನಾಟು ನಾಟು' ಅರ್ಥ ಇಷ್ಟ, ಗೊತ್ತಿಲ್ಲದವರಿಗೆ ಮ್ಯೂಸಿಕ್‌ ಇಷ್ಟ: ಚಂದ್ರಬೋಸ್- ಕೀರವಾಣಿ ರಿಯಾಕ್ಷನ್

ಆಸ್ಕರ್ ಪ್ರಶಸ್ತಿ ಪಡೆದ ನಂತರ ರಾಜಮೌಳಿ 'ಜೈ ಹಿಂದ್' ಎಂದು ಪೋಸ್ಟ್ ಮಾಡಿದ್ದಾರೆ.ಬೇರೆ ಏನು ಹೇಳದೆ ಜೈ ಹಿಂದ್ ಪದದ ಮೂಲಕವೇ ಎಲ್ಲವನ್ನು ವಿವರಿಸಿದ್ದಾರೆ.  'ನಾವು ಗೆದ್ದಿದ್ದೇವೆ. ನಾವು ಭಾರತೀಯ ಚಿತ್ರರಂಗವಾಗಿ ಗೆದ್ದಿದ್ದೇವೆ. ನಾವೇ ಗೆದ್ದೆವು. ಆಸ್ಕರ್ ಪ್ರಶಸ್ತಿಗಳು ಮನೆಗೆ ಬರುತ್ತಿವೆ' ಎಂದು ರಾಮ್‌ ಚರಣ್‌ ಪೋಸ್ಟ್ ಮಾಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?