ಕೊನೆಗೂ ಕ್ಯಾಮೆರಾಗೆ ಬೇಬಿ ಬಂಪ್ ತೋರಿಸಿದ ಚಿರಂಜೀವಿ ಸೊಸೆ ಉಪಾಸನಾ; ನೆಟ್ಟಿಗರು ಫುಲ್ ಕನ್ಫ್ಯೂಸ್

Published : Jan 17, 2023, 11:34 AM IST
ಕೊನೆಗೂ ಕ್ಯಾಮೆರಾಗೆ ಬೇಬಿ ಬಂಪ್ ತೋರಿಸಿದ ಚಿರಂಜೀವಿ ಸೊಸೆ ಉಪಾಸನಾ; ನೆಟ್ಟಿಗರು ಫುಲ್ ಕನ್ಫ್ಯೂಸ್

ಸಾರಾಂಶ

ಸಂಕ್ರಾಂತಿ ಹಬ್ಬದ ದಿನ ಬೇಬಿ ಬಂಪ್ ತೋರಿಸಿದ ಉಪಾಸನಾ ರಾಮ್ ಚರಣ್. ಯಾವ ಫೋಟೋ ನೋಡಿದ್ದರೂ ಫುಲ್ ಕನ್ಫ್ಯೂಷನ್ ಎಂದ ನೆಟ್ಟಿಗರು....   

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮಗ ರಾಮ್‌ ಚರಣ್ ಮತ್ತು ಸೊಸೆ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಷಕರಾಗುತ್ತಿರುವ ವಿಚಾರವನ್ನು ಬೇಗ ಹಂಚಿಕೊಂಡರು. ಹೀಗಾಗಿ ನೆಟ್ಟಿಗರು ಎಲ್ಲೇ ಉಪಾಸನಾ ನೋಡಿದರೂ ಬೇಬಿ ಬಂಪ್ ಕಾಣಿಸುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಸಂಕ್ರಾಂತಿ ಹಬ್ಬದ ದಿನ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. 

' ಈ ಸಂಕ್ರಾಂತಿ ಹಬ್ಬದಂದು ನನ್ನ ತಾಯಿತನವನ್ನು ಎಂಜಾಯ್ ಮಾಡುತ್ತಿರುವೆ. ಇದು ನಮ್ಮ ಜೀವನದ ಹೊಸ ಆರಂಭ' ಎಂದು ಉಪಾಸನಾ ಬರೆದುಕೊಂಡಿದ್ದಾರೆ. ಅನಿತಾ ಡಿಸೈನ್ ಮಾಡಿರುವ ಲೆಹೆಂಗಾ ಧರಿಸಿದ್ದಾರೆ ಈ ಸುಂದರಿ. ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹೊಸ ವರ್ಷ ಆರಂಭದಲ್ಲಿ ವೆರೈಟಿ ಊಟಗಳ ನಡುವೆ ಕುಳಿತುಕೊಂಡು ರುಚಿ ನೋಡುತ್ತಾ 'ಪ್ರೆಗ್ನೆನ್ಸಿ ಭಯಕೆಗಳನ್ನು ತೀರಿಸಿಕೊಳ್ಳುತ್ತಿರುವೆ. ಇಷ್ಟೊಂದು ತಂದು ಕೊಟ್ಟ ನನ್ನ ಸ್ನೇಹಿತರಿಗೆ ಧನ್ಯವಾದಗಳು' ಎಂದಿದ್ದರು. 

ಕೆಲವು ದಿನಗಳ ಹಿಂದೆ ಉಪಾಸನಾ ಆರ್‌ಆರ್‌ಆರ್‌ ಟೀಂ ಜೊತೆ ಗೋಲ್ಡನ್ ಗ್ಲೋಬ್ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತವನ್ನು ಪ್ರತಿನಿಧಿಸುತ್ತಿರುವ ಕಾರಣ ಸಿಂಪಲ್ ಸೀರೆಯಲ್ಲಿ ಮಿಂಚಿದ್ದರು. 'ಆರ್‌ಆರ್‌ಆರ್‌ ಕುಟುಂಬಕ್ಕೆ ಸೇರಿರುವುದಕ್ಕೆ ಹೆಮ್ಮೆ ಇದೆ. ಇಂಡಿಯನ್ ಸಿನಿಮಾವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಉಕ್ರೇನ್‌ನಲ್ಲಿ ಚಿತ್ರೀಕರಣದಿಂದ ಗೋಲ್ಡನ್ ಗ್ಲೋಬ್ ಅವಾರ್ಡ್‌ ನನಗೆ ತುಂಬಾ ಕ್ಲಾರಿಟಿ ಕೊಟ್ಟಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಈ ಸಂಭ್ರಮವನ್ನು ನನ್ನ ಜೊತೆ ಮಗು ಕೂಡ ಅನುಭವಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದು ಎಮೋಷನಲ್‌ ಜರ್ನಿ' ಎಂದು ಉಪಾಸನಾ ಬರೆದುಕೊಂಡಿದ್ದಾರೆ. 

ಪತ್ನಿ ಜೊತೆ ಆಫ್ರಿಕಾ ಕಾಡಲ್ಲಿ ರಾಮ್ ಚರಣ್; ಪ್ರಾಣಿಗಳನ್ನು ನೋಡುತ್ತಾ ಅಡುಗೆ ಮಾಡಿ ಸಂಭ್ರಮಿಸಿದ ಸ್ಟಾರ್

 ಉದ್ಯಮಿಗಳ ಕುಟುಂಬದಿಂದ ಬಂದಿರುವ ಉಪಾಸನಾ ಅವರು ತಮ್ಮ ಮಾವ ಚಿರಂಜೀವಿ ಮತ್ತು ಪತಿ ರಾಮ್‌ ಚರಣ್‌ ಅವರನ್ನು ಮೊದಲು ಭೇಟಿ ಮಾಡಿದ್ದು ಸ್ಪೂರ್ಟ್ಸ್‌ ಕ್ಲಬ್‌ನಲ್ಲಿ ಎಂದಿದ್ದಾರೆ. ಆರಂಭದಲ್ಲಿ ರಾಮ್ ಮತ್ತು ಉಪಾಸನಾ ತುಂಬಾನೇ ಜಗಳವಾಡುತ್ತಿದ್ದರಂತೆ. ಅಪರಿಚಿತರು ಸ್ನೇಹಿತರಾಗಿ ಆನಂತರ ಪ್ರೀತಿಸಲು ಆರಂಭಿಸಿದ್ದರು.  5 ವರ್ಷಗಳ ಕಾಲ ರಾಮ್ ಚರಣ್ ಮತ್ತು ಉಪಾಸನಾ ಪ್ರೀತಿಸಿದ್ದಾರೆ. ಆನಂತರ ತಮ್ಮ ಎರಡೂ ಕುಟುಂಬಗಳಿಗೆ ಪ್ರೀತಿ ವಿಚಾರ ಹೇಳಿ ಒಪ್ಪಿಗೆ ಪಡೆದು ಮದುವೆಯಾಗಲು ಮುಂದಾದ್ದರು. ಡಿಸೆಂಬರ್ 11, 2011ರಂದು ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡರು. ಜೂನ್ 14, 2012ರಲ್ಲಿ ಗುರು ಹಿರಿಯ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ತೆಗುಲು ಚಿತ್ರರಂಗದಲ್ಲಿ ದುಬಾರಿ ಮದುವೆ ಇದಾಗಿತ್ತು. 

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಖರೀದಿಸಿದ ರಾಮ್‌ಚರಣ್‌ ಪತ್ನಿ ಉಪಾಸನಾ!

ಜೀವನಶೈಲಿ ಹಾಗೂ ಆರೋಗ್ಯ ನಿಯತಕಾಲಿಕ B Positive Magazineನ ಮುಖ್ಯ ಸಂಪಾದಕರು ಉಪಾಸನಾ ಹಾಗೂ ಅಪೊಲೋ ಲೈಫ್‌ನ ಚಾರಿಟಿ ವೈಸ್‌ ಪ್ರೆಸಿಡೆಂಟ್.2019ರಲ್ಲಿ philanthropist of the year ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ಉಪಾಸನಾ ತಮ್ಮ ಜೀವನದ ಪ್ರತಿಯೊಂದು ಅಪ್ಡೇಟ್‌ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!