ಚಿತ್ರೀಕರಣ ಬಹುತೇಕ ಮುಕ್ತಾಯ, RRR ರಿಲೀಸ್ ಡೇಟ್ ಫಿಕ್ಸ್

Published : Jun 30, 2021, 12:15 PM ISTUpdated : Jun 30, 2021, 12:35 PM IST
ಚಿತ್ರೀಕರಣ ಬಹುತೇಕ ಮುಕ್ತಾಯ, RRR ರಿಲೀಸ್ ಡೇಟ್ ಫಿಕ್ಸ್

ಸಾರಾಂಶ

‘ಆರ್‌ಆರ್‌ಆರ್’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಅಕ್ಟೋಬರ್ 13ರಂದೇ ಪ್ರೇಕ್ಷಕರ ಮುಂದೆ ಬರಲಿದೆ ಸಿನಿಮಾ

ರಾಜಮೌಳಿ ನಿರ್ದೇಶನದ, ರಾಮ್ ಚರಣ್ ತೇಜ ಹಾಗೂ ಜ್ಯೂ.ಎನ್ ಟಿಆರ್ ಕಾಂಬಿನೇಷನ್‌ನ ‘ಆರ್‌ಆರ್‌ಆರ್’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ತ್ವರಿತಗತಿಯಲ್ಲಿ ಸಾಗುತ್ತಿದೆ.

ಚಿತ್ರದ ಇಬ್ಬರು ನಾಯಕರು ಎರಡು ಭಾಷೆಗಳಿಗೆ ಡಬ್ಬಿಂಗ್ ಮುಗಿಸಿದ್ದಾರೆ ಎಂಬುದು ಹೊಸ ಅಪ್‌ಡೇಟ್. ಇದರ ಜತೆಗೆ ಸಿನಿಮಾ ಯಾವಾಗ ತೆರೆಗೆ ಬರಬಹುದು ಎನ್ನುವ ಅಂತೆಕಂತೆಗಳ ಸುದ್ದಿಗೂ ಚಿತ್ರತಂಡ ತೆರೆ ಎಳೆದಿದೆ.

ನಟಿ ಮಂದಿರಾ ಬೇಡಿ ಪತಿ, ನಿರ್ದೇಶಕ ರಾಜ್‌ ಕೌಶಲ್ ಇನ್ನಿಲ್ಲ

ಈ ಹಿಂದೆ ಹೇಳಿದಂತೆ ಇದೇ ವರ್ಷ ಅಕ್ಟೋಬರ್ 13ರಂದೇ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ. ಒಂದು ವೇಳೆ ಕೊರೋನಾ ಸಂಕಷ್ಟ ಮತ್ತೆ ಮರುಕಳಿಸಿದರೆ 2022ರ ಜನವರಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ

ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ರೌದ್ರಾಮ್ ರಣಂ ರುಧಿರಾಮ್ (ಆರ್.ಆರ್.ಆರ್) 10 ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂಬತ್ತು ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್.

ಈ ಸಿನಿಮಾದಲ್ಲಿ ತೆಲುಗು ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರನ್ನು ಒಂದುಗೂಡಿಸುತ್ತದೆ, ಮತ್ತು ಅಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಅವರನ್ನೂ ಸಹಾ ಅಭಿನಯಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!