ಯಶ್ 'ಟಾಕ್ಸಿಕ್‌'ನಲ್ಲಿ ಮಿಂಚಿರೋ ನಯನತಾರಾ ಫಸ್ಟ್ ಲುಕ್ ರಿವೀಲ್.. 'ಗಂಗಾ' ಅವತಾರ ನೋಡಿ..!

Published : Dec 31, 2025, 12:11 PM IST
Nayanthara

ಸಾರಾಂಶ

ಬಹುಮುಖ ಪ್ರತಿಭೆಯಿಂದಾಗಿ ಭಾರತದ ಸ್ಟಾರ್‌ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಯನತಾರಾ ಅವರು 'ಟಾಕ್ಸಿಕ್' ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಉಪೇಂದ್ರ ಅವರ ಸೂಪರ್‌ ಸಿನಿಮಾದಲ್ಲಿ ನಯನತಾರಾ. ಇದೀಗ ‘ಟಾಕ್ಸಿಕ್’ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು, ಭಾರೀ ವೈರಲ್ ಆಗುತ್ತಿದೆ.

ಯಶ್ ‘ಟಾಕ್ಸಿಕ್’ ಚಿತ್ರದ ನಯನತಾರಾ ಫಸ್ಟ್‌ ಲುಕ್ ರಿವೀಲ್!

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವು ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ, ಇದೀಗ ನಟಿ ನಯನತಾರಾ ಅವರ 'ಗಂಗಾ' ಪಾತ್ರದ ಪೋಸ್ಟರ್ ಅನ್ನು ರಿಲೀಸ್‌ ಮಾಡಿದೆ. ಗಂಗಾ ಪಾತ್ರವು ಟಾಕ್ಸಿಕ್‌ ಸಿನಿಮಾದಲ್ಲಿನ ಪ್ರಬಲ ಪಾತ್ರ ಎಂದು ಹೇಳಲಾಗಿದೆ.

ಟಾಕ್ಸಿಕ್ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ನಯನತಾರಾ!

ಬಹುಮುಖ ಪ್ರತಿಭೆಯಿಂದಾಗಿ ಭಾರತದ ಸ್ಟಾರ್‌ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಯನತಾರಾ ಅವರು 'ಟಾಕ್ಸಿಕ್' ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಉಪೇಂದ್ರ ಅವರ ಸೂಪರ್‌ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು.

ಟಾಕ್ಸಿಕ್‌ ಸಿನಿಮಾದಲ್ಲಿನ ಅವರ ಪಾತ್ರವು ಪ್ರೇಕ್ಷಕರಿಗೆ ಸಂಪೂರ್ಣವಾಗಿ ಹೊಸ ನಯನತಾರಾ ಅವರನ್ನು ಪರಿಚಯ ಮಾಡಿಸಲಿದೆಯಂತೆ. ಗಂಗಾ ಪಾತ್ರದಲ್ಲಿ ನಯನತಾರಾ ಅವರ ರೂಪವು ಕಣ್ಮನ ಸೆಳೆಯುವಂತಿದೆ. ಜೊತೆಗೆ ಅವರ ಭಯರಹಿತ ವ್ಯಕ್ತಿತ್ವ ಈ ಫಸ್ಟ್‌ಲುಕ್‌ನಲ್ಲಿ ಎದ್ದು ಕಾಣುತ್ತಿದೆ. ಕೈಯಲ್ಲಿ ಗನ್ ಹಿಡಿದು ಅವರು ನೀಡಿರುವ ಪೋಸ್ ಆಕರ್ಷಕವಾಗಿದೆ.

ದಶಕಗಳಿಂದ ಅದ್ಭುತ ವೃತ್ತಿಜೀವನ ಹೊಂದಿರುವ ಪ್ರಖ್ಯಾತ ತಾರೆ

ತಿಳಿದಿರುವಂತೆ ನಯನತಾರಾ ಕಳೆದ ಎರಡು ದಶಕಗಳಿಂದ ಅದ್ಭುತ ವೃತ್ತಿಜೀವನ ಹೊಂದಿರುವ ಪ್ರಖ್ಯಾತ ತಾರೆ. ಆದರೆ ಪ್ರೇಕ್ಷಕರು ನೋಡಲು ಕಾಯುತ್ತಿದ್ದ ಅವರೊಳಗಿನ ಒಂದು ವಿಶೇಷ ಪ್ರತಿಭೆಯನ್ನು 'ಟಾಕ್ಸಿಕ್'ನಲ್ಲಿ ಕಾಣಲಿದ್ದಾರೆ. ನಯನತಾರಾ ಅವರನ್ನು ಹಿಂದೆಂದೂ ತೋರಿಸದ ರೀತಿಯಲ್ಲಿ ತೆರೆಯ ಮೇಲೆ ತರಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರೀಕರಣ ಸಾಗುತ್ತಿದ್ದಂತೆ, ಅವರ ಸ್ವಂತ ವ್ಯಕ್ತಿತ್ವವು ಪಾತ್ರದ ಆತ್ಮಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ಅರಿವಾಯಿತು" ಎಂದು ಗೀತು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಕ್ಯಾಶುವಲ್ ಸೆಕ್ಸಿ*ಸಂ’ ವಿರುದ್ಧ ಗುಡುಗಿದ ಟಾಲಿವುಡ್ ನಟಿಯರು.. ಇದನ್ನು 'ಹಾಸ್ಯ' ಅಂದ್ಕೊಳ್ಳೋಕಾಗಲ್ಲ.. ಬಾಯ್ಮುಚ್ಚಿ!
ವಾಮಾಚಾರ ಮಾಡಿಸಿ ಮುಸ್ಲಿಂ ಯುವಕನ ಮದ್ವೆಯಾದ ಸ್ಟಾರ್​ ನಟಿ: ಜ್ಯೋತಿಷಿ ಶಾಕಿಂಗ್​ ಹೇಳಿಕೆ- ಯಾರಾಕೆ?