Kannada

ಮಲೈಕಾ ಜೀವನ

ಅರ್ಬಾಜ್‌ ಖಾನ್ ಜೊತೆ 19 ವರ್ಷಗಳ ದಾಂಪತ್ಯ, ನಂತರ ವಿಚ್ಛೇದನ ಬಳಿಕ ತನಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಬಳಿಕ 51ಕ್ಕೆ ಮತ್ತೆ ಒಂಟಿಯಾದ ಮಲೈಕಾ ಆರೋರಾದು ವರ್ಣರಂಜಿತ ಜೀವನ

Kannada

ಮಲೈಕಾ ಫಿಟ್‌ನೆಸ್

ಪ್ರತಿ ವರ್ಷ ಅಕ್ಟೋಬರ್ 23 ರಂದು ಹುಟ್ಟುಹಬ್ಬ ಆಚರಿಸುವ ಮಲೈಕಾಗೆ ಈಗ 51ರ ಹರೆಯ. ಈ ವಯಸ್ಸಲ್ಲೂ 20ರ ತರುಣಿಯಂತೆ ಕಂಗೊಳಿಸುವ ಮಲೈಕಾ ತಮ್ಮ ಫಿಟ್‌ನೆಸ್‌ನಿಂದ ಅನೇಕ ಮಹಿಳೆಯರನ್ನು ಸೆಳೆದಿದ್ದಾರೆ.

Image credits: instagram
Kannada

ಮಲೈಕಾ ವೃತ್ತಿಜೀವನ

ಮಲೈಕಾ ತಮ್ಮ ವೃತ್ತಿಜೀವನವನ್ನು ಜನಪ್ರಿಯ ಕಾರ್ಯಕ್ರಮ ಕ್ಲಬ್ MTV ಯ VJ ಆಗಿ ಪ್ರಾರಂಭಿಸಿದರು. ಅವರು ಸ್ಟೈಲ್ ಚೆಕ್ ಮತ್ತು ಲವ್ ಲೈನ್‌ನಂತಹ ಹಲವಾರು ಕಾರ್ಯಕ್ರಮಗಳನ್ನು ಸಹ ನಿರೂಪಿಸಿದ್ದಾರೆ.

Image credits: instagram
Kannada

ಮಲೈಕಾ ಬಾಲಿವುಡ್‌ಗೆ ಪಾದಾರ್ಪಣೆ

ಮಲೈಕಾ ಅರೋರಾ 1998ರ ರ ಚಿತ್ರ 'ದಿಲ್ ಸೆ' ನಲ್ಲಿ ಶಾರುಖ್ ಖಾನ್ ಅವರೊಂದಿಗಿನ ಚೈಯ್ಯ ಚೈಯ್ಯ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದರು. ಇದಾದ ನಂತರ ಕಾಂಟೆ, EMI ನಲ್ಲೂ ನಟಿಸಿದ್ದಾರೆ. 

Image credits: Instagram
Kannada

ಮಲೈಕಾ ಅರೋರಾ ನಿವ್ವಳ ಮೌಲ್ಯ

ಹೀಗಿರುವ ಮಲೈಕಾ ಆಸ್ತಿ ಮೌಲ್ಯ 98.98 ಕೋಟಿ ರೂ. ಒಂದು ಐಟಂ ಸಾಂಗ್‌ಗೆ 1.5 ಕೋಟಿಗಿಂತ ಹೆಚ್ಚು ಚಾರ್ಜ್ ಮಾಡ್ತಾರೆ. ಇದರ ಜೊತೆ ತೀರ್ಪುಗಾರರಾಗಿ ಭಾಗವಹಿಸುವ ಅವರು 6-8 ಲಕ್ಷ ಚಾರ್ಜ್ ಮಾಡ್ತಾರೆ.

Image credits: instagram
Kannada

ಮಲೈಕಾ ಐಷಾರಾಮಿ ಅಪಾರ್ಟ್‌ಮೆಂಟ್

ಹಾಗೆಯೇ ಮುಂಬೈನ ಬಾಂದ್ರಾದಲ್ಲಿ 14.5 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದರ ಜೊತೆ 30ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಪ್ರಮೋಟ್ ಮಾಡ್ತಿದ್ದು, ಸ್ವಂತ ಯೋಗ ಸ್ಟುಡಿಯೊವನ್ನು ಸಹ ಹೊಂದಿದ್ದಾರೆ. 

Image credits: Instagram
Kannada

ಮಲೈಕಾ ಕಾರು ಸಂಗ್ರಹ

ಹಾಗೆಯೇ ಮಲೈಕಾ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 3.28ಕೋಟಿಯ ರೇಂಜ್ ರೋವರ್ LWB ಕಾರು, 18.09 ರಿಂದ 23.83 ಲಕ್ಷದ ಆಡಿ ಕ್ಯು7 ಹಾಗೂ 1.42 ಕೋಟಿ ಮೌಲ್ಯದ  BMW7 ಕಾರನ್ನು ಹೊಂದಿದ್ದಾರೆ.

Image credits: Malaika Arora/instagram

ಮಹಿಳೆಗೆ ಈ 10 ಗುಣಗಳಿದ್ದರೆ ಒಳ್ಳೇ ಹೆಂಡ್ತಿ ಅಂತಾನೇ ಅರ್ಥ

ದೀಪಾವಳಿಗೆ ಡ್ರಾಯಿಂಗ್ ರೂಮಿಗೆ ಹೊಸ ಲುಕ್ ನೀಡಲು ಸ್ಟೈಲಿಶ್ ಕರ್ಟೈನ್ಸ್

ಡ್ರೈ ಕ್ಲೀನ್ ಮಾಡಿಸದೇ ಸೋಫಾ ಕುಶನ್ಸ್ ಕ್ಲೀನ್ ಮಾಡೋದು ಹೇಗೆ?

ಮೇಕಪ್: ಹೈಲೈಟ್ ಬಳಸಿ, ಚರ್ಮ ಹೊಳೆಯೋ ಹಾಗೆ ಮಾಡೋದು ಹೇಗೆ?