ಜೆನಿಲಿಯಾ ನಟನೆ ಬಿಡಲು ಕಾರಣವೇನು? ಪದೇ ಪದೇ ರಿತೇಶ್ ಹೆಸರು ಹೇಳುತ್ತಿದ್ದವರಿಗೆ ಸ್ಪಷ್ಟನೆ ಕೊಟ್ಟ ಜೋಡಿ....
ಬಾಲಿವುಡ್ ಸೆಲೆಬ್ರಿಟಿ ಕಪಲ್ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಲವ್ ಸ್ಟೋರಿ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಹಲವು ವರ್ಷಗಳ ಕಾಲ ಲಾಂಗ್ ಡಿಸ್ಟೆನ್ಸ್‌ನಲ್ಲಿದ್ದ ಈ ಜೋಡಿ ಮದುವೆ ಆದ ಮೇಲೆ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ ರಿತೇಶ್ ರಾಜಕಾರಣಿ ಮಗ ಅನ್ನೋ ಕಾರಣ ಪತ್ನಿ ನಟಿಸಬಾರದು ಅಂತ ಕಂಡಿಷನ್ ಹಾಕಿದ್ರಾ? ಜೆನಿಲಿಯಾ ನಟನೆ ಬಿಟ್ಟಾಗ ರಿತೇಶ್ ಕಮ್‌ಬ್ಯಾಕ್ ಮಾಡಲು ಸಹಾಯ ಮಾಡಿದ್ದು ಹೇಗೆ ಗೊತ್ತಾ?
'ನಾವಿಬ್ಬರು ಪ್ರೀತಿಸುವಾಗ ಲಾಂಗ್ ಡಿಸ್ಟೆಂನ್ಸ್ ಇತ್ತು ಹೀಗಾಗಿ ಮದುವೆ ಆದ ಮೇಲೆ ಯಾವುದಕ್ಕೆ ಹೆಚ್ಚು ಪ್ರಮುಖ್ಯತೆ ನೀಡಬೇಕು ಅನ್ನೋದು ನನಗೆ ಗೊತ್ತಿತ್ತು. ಆದರೆ ಜನರು ಮದುವೆ ನಂತರ ಕೇಳಿದ ಮೊದಲ ಪ್ರಶ್ನೆಗೆ ಆಕ್ಟಿಂಗ್ ಮಾಡೋದು ಬೇಡ ಅಂದ್ರ ರಿತೇಷ್?' ಎಂದು ಕರೀನಾ ಕಪೂರ್ ನಡೆಸುವ ಕಪಲ್ ಸಂದರ್ಶನದಲ್ಲಿ ಜೆನಿಲಿಯಾ ಮಾತನಾಡಿದ್ದಾರೆ.
ಯಪ್ಪಾ! ಪ್ಯಾಂಟ್ ಇಷ್ಟೋಂದು ಹರಿಬಾರ್ದು; ನಟಿ ಜೆನಿಲಿಯಾ ಲುಕ್ ವೈಲರ್!
'ಹೌದು! ಅನೇಕರು ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಫ್ಯಾಮಿಲಿಗೆ ನಿನ್ನ ನಟನೆ ಅಥವಾ ದುಡಿಮೆ ಅಗತ್ಯವಿಲ್ಲ ಅಂತ ನೀನು ನಟನೆ ಬಿಟ್ಟಿದ್ದು ಅಂತ. ನಿಜ ಹೇಳಬೇಕು ಅಂದ್ರೆ ನನಗೆ ಫ್ಯಾಮಿಲಿ ಅಂದ್ರೆ ಜೆನಿಮಿಯಾ ಮಾತ್ರ. ನಾವು ರಾಜಕೀಯ ಹಿನ್ನಲೆ ಹೊಂದಿರುವವರು ಹೀಗಾಗಿ ಜನರು ನಮ್ಮನ್ನು ನೋಡುವ ರೀತಿ ಬೇರೆ ಇರಬಹುದು ಆದರೆ ನನಗೆ ಫ್ಯಾಮಿಲಿ ಅಂದ್ರೆ ಜೆನಿಲಿಯಾ ಮತ್ತು ಮಕ್ಕಳು. ಫ್ಯಾಮಿಲಿ ಜವಾಬ್ದಾರಿಗಳು ಹೆಚ್ಚಿಗೆ ಇರಬಹುದು ಆದರೆ ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಕೈಯಲ್ಲಿದೆ. ಜಿನಿಲಿಯಾ ಏನೇ ನಿರ್ಧಾರ ಬೇಕಿದ್ದರೂ ಆಕೆನೇ ತೆಗೆದುಕೊಳ್ಳಬಹುದು. ನಾನು ತೆಗೆದುಕೊಳ್ಳುವ ನಿರ್ಧಾರವನ್ನು ಜೆನಿಲಿಯಾ ಗೌರವಿಸುತ್ತಾಳೆ. ಈಗಳೂ ಜೆನಿಲಿಯಾ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳು ಇದೆ. ಅಲ್ಲದೆ ನೀನು ಮರಾಠಿಯಲ್ಲಿ ಸಿನಿಮಾ ಮಾಡಬೇಕು ನಾನೇ ನಿರ್ಮಾಣ ಮಾಡುತ್ತೀನಿ ಎಂದು ಕೂಡ ಹೇಳಿದ್ದೀನಿ. ಜೆನಿಲಿಯಾ ಸಿನಿಮಾ ಮಾಡಬೇಕು ಅನ್ನೋ ಆಸೆ ನನಗೆ ತುಂಬಾನೇ ಇದೆ. ಹೀಗೆ ಇರುವಾಗ ನಾನು ಯಾಕೆ ಆಕೆಯ ವೃತ್ತಿ ಬದುಕಿಗೆ ಬ್ರೇಕ್ ಹಾಕಬೇಕು?'ಎಂದು ರಿತೇಶ್ ಮಾತನಾಡಿದ್ದಾರೆ.
'ಒಂದು ದಿನ ರಿತೇಷ್ ಬಂದು ನೀನು ಸಿನಿಮಾ ಮಾಡಬೇಕು ಕಥೆ ಬಂದಿದೆ ಎಂದು ಹೇಳಿದಾಗ ಇಲ್ಲ ಆಲ್ಲ ನನ್ನ ಮಗ ರಾಯಲ್ ಕೇವಲ 5 ವರ್ಷ ಆತನನ್ನು ಒಬ್ಬನೆ ಬಿಡಲು ಆಗಲ್ಲ ಎಂದೆ. ನಾನು ಆಗಲ್ಲ ಎಂದು ಹೇಳಿದಾಗ ರಿತೇಷ್ ಕೋಪ ಮಾಡಿಕೊಂಡು 5 ವರ್ಷದ ಹುಡುಗ ಅವನೇ ಎಲ್ಲಾ ಕೆಲಸಗಳು ಮಾಡಿಕೊಳ್ಳಬಹುದು ನೀನು ಸಿನಿಮಾ ಮಾಡು ಎಂದು ಒತ್ತಾಯ ಮಾಡಿದರು. ನೀನು ಇಷ್ಟ ಪಡುವುದು ನಟನೆ ಮೊದಲು ಅದನ್ನು ಎಂಜಾಯ್ ಮಾಡು ಎಂದು ಹೇಳಿದ್ದೇ ನನ್ನ ಗಂಡ' ಎಂದು ಹೇಳಿದ ಜೆನಿಲಿಯಾ.
ಹೊಟ್ಟೆ ಮುಚ್ಚಿಕೊಳ್ಳಲು ಪ್ರಯತ್ನಿಸಿದ ನಟಿ; ಮೂರನೇ ಮಗುವಿನ ನಿರೀಕ್ಷೆಯಲ್ಲಿ ಜೆನಿಲಿಯಾ? ಫೋಟೋ ವೈರಲ್
'ನಾನು ಮತ್ತೊಂದು ವಿಚಾರವನ್ನು ಗಮನಿಸಿದೆ. ಮನೆಯಲ್ಲಿ ಜೆನಿಲಿಯಾ...ಜೆನಿಲಿಯಾ ಆಗಿ ಇರಲಿಲ್ಲ. ಮನೆಯಲ್ಲಿ ತುಂಬಾ ಕಂಫರ್ಟ್ ಆಗಿ ಆಕೆ ಕ್ಯಾಮೆರಾ ಮುಂದೆ ಬರಲು ಯೋಚನೆ ಮಾಡುತ್ತಿದ್ದರು ಆದರೆ ಆಕೆಗೆ ನಟನೆ ಇಷ್ಟ. ನೀನು ನೀನಾಗಿ ಇರಬೇಕು ಅಂದ್ರೆ ನಿನಗೆ ಏನು ಇಷ್ಟ ಅದನ್ನು ಎಂಜಾಯ್ ಮಾಡಬೇಕು. ಕೊರೋನಾ ಪ್ಯಾಂಡಮಿಕ್ ಬಂದ ಕಾರಣ ಆಕೆ ಹೊರ ಬರಲು ಶುರು ಮಾಡಿದಳು ಇಲ್ಲವಾದರೆ ಮನೆಯಲ್ಲಿ ಇರುತ್ತಿದ್ದಳ' ಎಂದು ರಿತೇಶ್.