​ಕಿರಿಕ್​ ಬ್ಯೂಟಿ ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ ಮದ್ವೆ ಫಿಕ್ಸ್​? ನಟ ಕೊಟ್ಟ ಹಿಂಟ್​ ಏನು?

By Suvarna News  |  First Published Mar 12, 2024, 12:27 PM IST

ರಶ್ಮಿಕಾ ಮಂದಣ್ಣ ಜೊತೆ ಬಹು ವರ್ಷಗಳಿಂದ ಡೇಟಿಂಗ್​ ಬಳಿಕ ರಿಲೇಷನ್​ಷಿಪ್​ ಮತ್ತು ಮದ್ವೆ ಬಗ್ಗೆ ನಟ ವಿಜಯ್​ ದೇವರಕೊಂಡ ಹೇಳಿದ್ದೇನು?
 


 ಕಿರಿಕ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ ಅವರ ಮದುವೆಯ ವಿಷಯವಂತೂ ಕೆಲ ವರ್ಷಗಳಿಂದ ಅಭಿಮಾನಿಗಳ ತಲೆ ಕೆಡಿಸುತ್ತಿದೆ. ಇದರ ನಡುವೆಯೇ ಇವರಿಬ್ಬರೂ ಬರುವ ಫೆಬ್ರುವರಿಯಲ್ಲಿ ಎಂಗೇಜ್​ಮೆಂಟ್​ ಆಗಲಿದ್ದಾರೆ ಎಂಬ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದೇ ವೇಳೆ,  ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಕೂಡ ಸಾಕಷ್ಟು ವೈರಲ್​ ಆಗಿತ್ತು.  ಸಂದರ್ಶನವೊಂದರಲ್ಲಿ, ವೇಣು ಸ್ವಾಮಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಈ ವಿಚಾರ ವೈರಲ್ ಆಗಿದೆ.  'ರಶ್ಮಿಕಾ ಹಾಗೂ ವಿಜಯ್ ದೇವರೊಂಡ  ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದು ತಿಳಿಸಿದ್ದರು. 

ಆದರೆ ಇದುವರೆಗೆ ಈ ಜೋಡಿ ತಮ್ಮ ರಿಲೇಷನ್​ಷಿಪ್​ ಮತ್ತು ಮದುವೆಯ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಇದೀಗ ವಿಜಯ್​ ದೇವರಕೊಂಡ ಅವರು ಸಂದರ್ಶನವೊಂದರಲ್ಲಿ ಆದಷ್ಟು ಬೇಗ ತಾವು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿಗೆ ಅವರು ಏನನ್ನೂ ಹೇಳದೇ ಇದ್ದರೂ ರಶ್ಮಿಕಾ ಬಿಟ್ಟು ಬೇರೆ ಯಾರನ್ನೂ ಅವರು ಮದುವೆಯಾಗುವುದು ಸುಳ್ಳು ಎಂಬ ಕಾರಣದಿಂದಾಗಿಯೇ ಇವರಿಬ್ಬರ ಮದುವೆ ಶೀಘ್ರದಲ್ಲಿ ನೆರವೇರಲಿದೆ ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಈ ಜೋಡಿ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿಜಯ ದೇವರಕೊಂಡ ಮದುವೆಯ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ರಶ್ಮಿಕಾ ಜೊತೆ ತಾವು ರಿಲೇಷನ್​ಷಿಪ್​ನಲ್ಲಿ ಇರುವುದು ನಿಜ ಎಂಬುದನ್ನು ಹೇಳಿದ್ದಾರೆ. ಇಷ್ಟೇ ಅಲ್ಲದೇ ಇವರಿಬ್ಬರೂ ತಮ್ಮ ತಮ್ಮ ಸೋಷಿಯಲ್​ ಮೀಡಿಯಾದ ಖಾತೆಯಲ್ಲಿ ಸುಂದರ ಫೋಟೋಗಳನ್ನು ಶೇರ್​ ಮಾಡಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲಿಯೇ ಜೋಡಿ ಗುಡ್​ ನ್ಯೂಸ್​ ಕೊಡಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

Tap to resize

Latest Videos

ಹುಟ್ಟುಹಬ್ಬಕ್ಕೆ ಮಂಚದ ಮೇಲೆ ಪೂನಂ ಪಾಂಡೆ ಹಾಟ್​ ವಿಡಿಯೋ: ಇದ್ಯಾವ ಅವೇರ್​ನೆಸ್​ ಕೇಳಿದ ನೆಟ್ಟಿಗರು!

ಅಷ್ಟಕ್ಕೂ, ಅನಿಮಲ್​ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್​ ಸುದ್ದಿಯಲ್ಲಿದ್ದಾರೆ. ನಟ ರಣಬೀರ್​ ಕಪೂರ್​ ಜೊತೆಗಿನ ಲಿಪ್​ಲಾಕ್​ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಜೀವನದಲ್ಲಿ ಯಾರೋ ಎಂಟ್ರಿ ಕೊಟ್ಟ ಹಾಗಿದೆ. ನಿಗೂಢ ಪೋಸ್ಟ್​ ಹಾಕುವ ಮೂಲಕ ನಟಿ, ಅಭಿಮಾನಿಗಳ ತಲೆಗೆ ಈಚೆಗೆ ಹುಳು ಬಿಟ್ಟಿದ್ದರು. ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ, ನನ್ನ ಲೈಫ್​ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್​ ಹಾಕಿದ್ದರು. ಇದು ವಿಜಯ ದೇವರಕೊಂಡ ಅನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಅಷ್ಟಕ್ಕೂ, ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ಇಬ್ಬರೂ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಅದೇನೇ ಇದ್ದರೂ ಈ ಜೋಡಿ ಮಾತ್ರ ಆಗಾಗ್ಗೆ ವಿದೇಶಗಳಿಗೆ ಜಾಲಿ ಟ್ರಿಪ್​ ಮಾಡುವುದು ನಡೆಯುತ್ತಲೇ ಇರುವುದು ಅವರ ಫೋಟೋಗಳಿಂದಲೇ ತಿಳಿದುಬರುತ್ತಿವೆ.
 
 ಲೈಫ್‌ಸ್ಟೈಲ್ ಏಷ್ಯಾಗೆ ನೀಡಿದ್ದ ಸಂದರ್ಶನದಲ್ಲಿ, ವಿಜಯ್ ದೇವರಕೊಂಡ ನಿಶ್ಚಿತಾರ್ಥ, ಮದುವೆ ಸುದ್ದಿಗಳನ್ನು ತಳ್ಳಿಹಾಕಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೆ ಶೀಘ್ರ ಮದ್ವೆಯೂ ಆಗುತ್ತಿಲ್ಲ, ಫೆಬ್ರುವರಿಯಲ್ಲಿ ನಿಶ್ಚಿತಾರ್ಥನೂ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು. ಮಾಧ್ಯಮಗಳು ನನ್ನ ಮತ್ತು ರಶ್ಮಿಕಾ ಮದುವೆಯನ್ನು ಆಗ್ಗಾಗ್ಗೆ ಮಾಡಿಸುತ್ತಲೇ ಇರುತ್ತವೆ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮದುವೆ ಮಾಡಿಸುತ್ತವೆ. ಪ್ರತಿ ಬಾರಿಯೂ ನನ್ನ ಮದುವೆ ಸುದ್ದಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಇರುತ್ತೇನೆ. ಇವೆಲ್ಲಾ ಸುಳ್ಳು ಎಂದಿದ್ದರು. ಆದರೆ ಇದೀಗ ಮೊದಲ ಬಾರಿಗೆ ಸಂಬಂಧದ ಕುರಿತು ಮಾತನಾಡಿದ್ದು, ಮದುವೆಯಾಗುತ್ತೇನೆ ಎಂದಿದ್ದಾರೆ. ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗುತ್ತಿದೆ. ಜೊತೆಗೆ ಜ್ಯೋತಿಷಿಯ ಮಾತನ್ನು ಕೇಳಿ ಹೆದರಿಕೆಯೂ ಆಗುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್​. 
ನಟ v/s ನಟಿ: ಲೋಕಸಭೆ ಕಣಕ್ಕಿಳಿದ 'ಪ್ರೀತ್ಸು ತಪ್ಪೇನಿಲ್ಲ' ಬೆಡಗಿ ರಚನಾ ಬ್ಯಾನರ್ಜಿ! ಯಾವ ಪಕ್ಷ ಗೊತ್ತಾ?

click me!