ಟ್ರೋಲರ್ಸ್ ಭಯ, ಮಗಳನ್ನು ಇನ್‌ಸ್ಟಾದಿಂದ ದೂರವಿಟ್ಟ ರಣಬೀರ್ ಕಪೂರ್ ಅಕ್ಕ!

By Roopa Hegde  |  First Published Jul 30, 2024, 11:36 AM IST

ದಿವಂಗತ ನಟ ರಿಷಿ ಕಪೂರ್ ಮಗಳು ರಿದ್ಧಿಮಾ ಕಪೂರ್ ತಮ್ಮ ಮಗಳ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡ್ತಿದ್ದಾರೆ. ಇನ್ಸ್ಟಾ ಖಾತೆಯನ್ನು ಖಾಸಗಿಗೊಳಿಸಿರುವ ಅವರು ಅದಕ್ಕೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.
 


ಸಾಮಾನ್ಯರಿಗಿಂತ ಸೆಲೆಬ್ರಿಟಿ ಕಿಡ್ಸ್ ಟ್ರೋಲ್ ಆಗೋದು ಹೆಚ್ಚು. ಚಿಕ್ಕ ವಯಸ್ಸಿನಲ್ಲೇ ಟ್ರೋಲರ್ ಗಳ ಬಾಯಿಗೆ ಆಹಾರವಾದ್ರೆ ಮಕ್ಕಳು ಅದನ್ನು ಸಹಿಸೋದು ಕಷ್ಟ. ಅನೇಕ ಬಾರಿ ಅದು ಅವರನ್ನು ಹರ್ಟ್ ಮಾಡುತ್ತೆ. ಹಾಗಾಗಿಯೇ ಕೆಲ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಗೌಪ್ಯವಾಗಿಡಲು ಬಯಸ್ತಾರೆ. ಕ್ಯಾಮರಾ ಮುಂದೆ  ಕರೆತರೋದಿಲ್ಲ. ಜೊತೆಗೆ ಸಾಮಾಜಿಕ ಜಾಲತಾಣದಿಂದಲೂ ದೂರವಿಡಲು ಬಯಸ್ತಾರೆ. ಈಗಿನ ಕಾಲದಲ್ಲಿ ಅದು ಸಾಧ್ಯವಿಲ್ಲದ ಕಾರಣ, ಮಕ್ಕಳಿಗೆ ಈ ಬಗ್ಗೆ ಬುದ್ಧಿ ಹೇಳೋದು ಸವಾಲು ಕೂಡ ಹೌದು. ಇದನ್ನು ದಿವಂಗತ ನಟ ರಿಷಿ ಕಪೂರ್ ಪುತ್ರಿ ಹಾಗೂ ರಣಬೀರ್ ಕಪೂರ್ ಸಹೋದರಿ ಉದ್ಯಮಿ ರಿದ್ಧಿಮಾ ಕಪೂರ್ ಒಪ್ಪಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಮಗಳು ಹಾಗೂ ಇನ್ಸ್ಟಾಗ್ರಾಮ್ ಖಾತೆ ಬಗ್ಗೆ ಅನೇಕ ವಿಷ್ಯಗಳನ್ನು ಅವರು ಹಂಚಿಕೊಂಡಿದ್ದಾರೆ.

ರಿದ್ಧಿಮಾ ಕಪೂರ್ (Riddhima Kapoor ) ಮಗಳ ಹೆಸರು ಸಮಾರಾ (Samara). ಅವಳಿಗೆ 13 ವರ್ಷ ವಯಸ್ಸು. ಸಮಾರಾ, ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರೋದರ ಬಗ್ಗೆ ರಿದ್ಧಿಮಾ ಕಳವಳ ವ್ಯಕ್ತಪಡಿಸಿದ್ದಾರೆ. ಯುಕೆ ಮೂಲದ ರೆಡಿಯೋ ಜಾಕಿ ಅನುಷ್ಕಾ ಅರೋರಾ ಜೊತೆ ಮಾತನಾಡಿದ ರಿದ್ಧಿಮಾ ಕಪೂರ್, ಸಮಾರಾ ಚಟುವಟಿಕೆ ಬಗ್ಗೆ ನಾನು ಕಣ್ಣಿಟ್ಟಿರುತ್ತೇನೆ ಎಂದಿದ್ದಾರೆ.

Tap to resize

Latest Videos

'ಗುಡ್ ನ್ಯೂಸ್‌ ಯಾವಾಗ' ಅಂತ ಜನರು ಕೇಳೋದು ನಿಲ್ಲಿಸಿದರೆ ಜೀವನ ಸಾರ್ಥಕ ಆಗುತ್ತೆ: ಅನು ಪ್ರಭಾಕರ್

ಇನ್ಸ್ಟಾಗ್ರಾಮ್ (Instagram) ಖಾತೆಯನ್ನು ಪರ್ಸನಲ್ ಆಗಿಡಲು ರಿದ್ಧಿಮಾ ಮಗಳಿಗೆ ಹೇಳಿದ್ದರು. ಆದ್ರೆ ಸಮಾರಾ ಅದನ್ನು ಒಪ್ಪಿರಲಿಲ್ಲ. ಸಮಾರಾ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದಾಳೆ. ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರುತ್ತಾಳೆ. ಇದು ನನ್ನ ಆತಂಕಕ್ಕೆ ಕಾರಣವಾಗುತ್ತದೆ ಎಂದು ರಿದ್ಧಿಮಾ ಕಪೂರ್ ಹೇಳಿದ್ದಾರೆ. 

ಇನ್ಸ್ಟಾಗ್ರಾಮ್ ಖಾತೆ ತೆರೆಯುವಾಗ್ಲೇ ನಾನು, ಇದನ್ನು ಖಾಸಗಿಯಾಗಿಡುವಂತೆ ಹೇಳಿದ್ದೆ. ಆದ್ರೆ ಸಮಾರಾ, ಫಾಲೋವರ್ಸ್ ಸಂಖ್ಯೆ ಹೆಚ್ಚಾಗೋದಿಲ್ಲ ಎನ್ನುವ ಕಾರಣ ಹೇಳಿದ್ದಳು. ಮಗಳಿಗೆ ಇನ್ನೂ 13 ವರ್ಷ. ಎಲ್ಲ ಫಾಲೋವರ್ಸ್ ಒಳ್ಳೆಯ ಕಮೆಂಟ್ ನೀಡೋದಿಲ್ಲ. ಮಕ್ಕಳು ಕಮೆಂಟ್ ಓದಲು ಕಾತುರರಾಗಿರುತ್ತಾರೆ. ಕೆಟ್ಟ ಕಮೆಂಟ್ ಅವರ ಮನಸ್ಸು ನೋಯಿಸಬಹುದು. ಇದೇ ಭಯಕ್ಕೆ ನಾನು, ಇನ್ಸ್ಟಾಗ್ರಾಮ್ ಖಾಸಗಿಯಾಗಿಡುವಂತೆ ಹೇಳಿದ್ದೆ. ಇಲ್ಲವೆ ಖಾತೆ ಡಿಲಿಟ್ ಮಾಡುವಂತೆ ಸೂಚಿಸಿದ್ದೆ. ಈಗ ಸಮಾರಾ ಖಾತೆ ಖಾಸಗಿಯಾಗಿದೆ ಎಂದು ರಿದ್ಧಿಮಾ ಕಪೂರ್ ಹೇಳಿದ್ದಾರೆ. 

ಸಂದರ್ಶನದಲ್ಲಿ ಮಗಳನ್ನು ಹೊಗಳಿದ ರಿದ್ಧಿಮಾ ಕಪೂರ್, ಅವಳನ್ನು ಶಿಸ್ತಿನ ದಾರಿಯಲ್ಲಿಡೋದು ಕಷ್ಟ. ತಂದೆ ಹೆಚ್ಚು ಪ್ರೀತಿ ಮಾಡಿ ಅವಳನ್ನು ಮತ್ತಷ್ಟು ಹಾಳು ಮಾಡ್ತಾರೆ ಎಂದು ರಿದ್ಧಿಮಾ ಆರೋಪಿಸಿದ್ದಾರೆ. ಲಂಡನ್ ನಲ್ಲಿ ರಿದ್ಧಿಮಾ ಹಾಗೂ ಸಮಾರಾ, ಟೇಲರ್ ಸ್ವಿಫ್ಟ್ ಮ್ಯೂಜಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವಿಷ್ಯವನ್ನು ಸಂದರ್ಶನದ ವೇಳೆ ರಿದ್ಧಿಮಾ ಹೇಳಿದ್ದಾರೆ. ನಮ್ಮನ್ನು ಸರ್ಟಿಫೈಡ್ ಸ್ವಿಫ್ಟೀಸ್ ಎಂದು ಕರೆದರು ಎಂದು ರಿದ್ಧಿಮಾ ಹೇಳಿದ್ದಾರೆ.

ರಿದ್ಧಿಮಾ ಕಪೂರ್, ರಿಷಿ ಕಪೂರ್ ಹಾಗೂ ನೀತಾ ಸಿಂಗ್ ಹಿರಿಯ ಮಗಳು. ರಣಬೀರ್ ಕಪೂರ್ ಕಿರಿಯ ಮಗ. ರಿದ್ಧಿಮಾ, ಆಭರಣ ವಿನ್ಯಾಸಕಿ. ಅವರಿಗೆ ಸಿನಿಮಾಗಳಲ್ಲಿ ಆಫರ್ ಬಂದಿತ್ತು. ಆದ್ರೆ ರಿದ್ಧಿಮಾ ಅದನ್ನು ಬಿಟ್ಟು ಫ್ಯಾಷನ್ ಉದ್ಯಮವನ್ನು ಆಯ್ಕೆ ಮಾಡಿಕೊಂಡರು. ಭರತ್ ಜೊತೆ ಡೇಟಿಂಗ್ ಮಾಡಿದ ರಿದ್ಧಿಮಾ 2006ರಲ್ಲಿ ಅವರನ್ನು ವಿವಾಹವಾದ್ರು. 2011ರಲ್ಲಿ ಸಮಾರಾಗೆ ರಿದ್ಧಿಮಾ ಜನ್ಮ ನೀಡಿದ್ದಾರೆ. 

ಹಸಿರು ಸೀರೆ, ಗುಲಾಬಿ ಮುಡಿದು ಕಾಯ್ತಿರೋ ರಶ್ಮಿಕಾ ಮಂದಣ್ಣ ಕಣ್ಣು ಹೊಡೆದದ್ದು ಯಾರಿಗೆ?

ನಾನು 16 -17 ವಯಸ್ಸಿನಲ್ಲಿರುವಾಗ್ಲೇ ಸಿನಿಮಾಗೆ ಆಫರ್ ಬಂದಿತ್ತು. ನಮ್ಮ ತಾಯಿ ಆಫರ್ ಬಗ್ಗೆ ಹೇಳಿದ್ದರು. ಆದ್ರೆ ನಾನು ಫ್ಯಾಷನ್ ಜಗತ್ತನ್ನು ಆಯ್ಕೆ ಮಾಡಿಕೊಂಡೆ. ಒಂದ್ವೇಳೆ ಆಭರಣ ವಿನ್ಯಾಸಕಿಯಾಗದೆ ಹೋದಲ್ಲಿ ಯೋಗ ಟೀಚರ್ ಇಲ್ಲವೆ ಬಾಣಸಿಗನಾಗ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ರಿದ್ಧಿಮಾ ಹೇಳಿದ್ದರು. 

click me!