ಇಂಥದ್ದನ್ನೆಲ್ಲಾ ಓಪನ್ನಾಗಿ ಮಾಡ್ಬೇಕಾ? ವಿಡಿಯೋ ಶೇರ್​ ಮಾಡಿದ ನಟಿ ನೇಹಾ ಶರ್ಮಾಗೆ ನೆಟ್ಟಿಗರ ಕ್ಲಾಸ್​!

Published : Jul 29, 2024, 05:42 PM IST
ಇಂಥದ್ದನ್ನೆಲ್ಲಾ ಓಪನ್ನಾಗಿ ಮಾಡ್ಬೇಕಾ? ವಿಡಿಯೋ ಶೇರ್​ ಮಾಡಿದ ನಟಿ ನೇಹಾ ಶರ್ಮಾಗೆ ನೆಟ್ಟಿಗರ ಕ್ಲಾಸ್​!

ಸಾರಾಂಶ

ಬಾಲಿವುಡ್​ ನಟಿ ನೇಹಾ ಶರ್ಮಾ ಜಿಮ್​ ವರ್ಕ್​ಔಟ್​ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ.  ಆದರೆ ಈ ವಿಡಿಯೋಗೆ ನೆಟ್ಟಿಗರು ಗರಂ ಆಗಿದ್ದಾರೆ. ಅವರು ಹೇಳ್ತಿರೋದೇನು?   

ಬಾಲಿವುಡ್​ ನಟಿ ನೇಹಾ ಶರ್ಮಾ ಚುನಾವಣೆ ಸಂದರ್ಭದಲ್ಲಿ ಭಾರಿ ಚರ್ಚೆಯಲ್ಲಿದ್ದವರು. ಇವರ ತಂದೆ ಕಾಂಗ್ರೆಸ್​  ಮುಖಂಡರಾಗಿರುವ ಅಜಯ್ ಶರ್ಮಾ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಗಳನ್ನೇ ನಿಲ್ಲಿಸುವುದಾಗಿ ಅಜಯ್​ ಶರ್ಮಾ ಚುನಾವಣೆಗೂ ಮುನ್ನವೇ ಘೋಷಿಸಿದ್ದರು. ಬಿಹಾರದ ಭಾಗಲ್ಪುರವನ್ನು ಪ್ರತಿನಿಧಿಸುವ ಶಾಸಕ ಅಜಯ್ ಶರ್ಮಾ ಅವರು, ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಭಾಗಲ್ಪುರ ಕ್ಷೇತ್ರ ಸಿಕ್ಕರೆ ತಮ್ಮ ಮಗಳೇ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ಅವರಿಗೆ ಟಿಕೆಟ್​ ಸಿಕ್ಕಿರಲಿಲ್ಲ. ಇದೀಗ ಚುನಾವಣೆ ಮುಗಿದ ಮೇಲೆ ಮತ್ತೆ ಸಿನಿಮಾದತ್ತ ಗಮನ ನೆಟ್ಟಿದ್ದಾರೆ ನೇಹಾ ಶರ್ಮಾ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಟಿ, ಆಗಾಗ್ಗೆ ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. 

ಇತ್ತೀಚೆಗೆ  ನಟಿ ನೇಹಾ ಶರ್ಮಾ (Neha Sharma) ಅವರು ಕೂಡ ಐಸ್ ಬಾತ್ ಮಾಡಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಆದರೆ ಅದರಲ್ಲಿ ಅವರು ಉಟ್ಟ ಕನಿಷ್ಠ ಬಟ್ಟೆಯ ಬಗ್ಗೆ ಸಕತ್​ ಟ್ರೋಲ್​ ಆಗಿತ್ತು. ಅಷ್ಟಕ್ಕೂ ಇಂದಿನ ನಟಿಯರು ತುಂಡುಡುಗೆಯಲ್ಲಿ ಫೇಮಸ್​ ಆಗುವುದು ಹೆಚ್ಚಾಗಿರುವ ಕಾರಣ, ಅಂಥದ್ದೇ ಬಟ್ಟೆಯನ್ನು ಬಳಸಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಅದರಂತೆಯೇ ನೇಹಾ ಕೂಡ ಆಗಾಗ್ಗೆ ಇಂಥ ಬಟ್ಟೆ ತೊಟ್ಟು ಫೋಟೋಶೂಟ್​ ಮಾಡಿಸಿಕೊಂಡು ಟ್ರೋಲ್​ಗಳಿಂದಲೇ ಫೇಮಸ್​ ಆಗುತ್ತಿರುವವರು. 

71ನೇ ವಯಸ್ಸಿಗೆ ಸಾಯೋ ಆಸೆ... ಏಕೆಂದ್ರೆ.... ನಟ ರಣಬೀರ್​ ಕಪೂರ್​ ವಿಚಿತ್ರ ಬಯಕೆ...

ಇದೀಗ ಅವರು ವರ್ಕೌಟ್​ ಮಾಡುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಅವರ ಜಿಮ್​ ತರಬೇತುದಾರ ಹಿಂದಿನಿಂದ ನಟಿಯ ಸೊಂಟವನ್ನು ಹಿಡಿದು ವರ್ಕ್​ಔಟ್​ ಮಾಡಿಸುತ್ತಿದ್ದಾರೆ. ಆದರೆ ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನಟಿಯ ವಿರುದ್ಧ ಹಲವಾರು ರೀತಿಯ ನೆಗೆಟಿವ್​ ಕಮೆಂಟ್ಸ್​ ಬಂದಿವೆ. ವರ್ಕ್​ಔಟ್​ ಮಾಡುವುದಾದರೆ ಅದನ್ನು ಸೀಕ್ರೇಟ್​ ಆಗಿ ಇಟ್ಟುಕೊಳ್ಳಿ. ಈ ರೀತಿ ಟಾಂ ಟಾಂ ಮಾಡುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಜಿಮ್​ ತರಬೇತುದಾರ ಏನು ಮಾಡುತ್ತಿದ್ದಾನೆ ಎನ್ನುವುದು ತಿಳಿಯದೇ ಕನ್​ಫ್ಯೂಸ್​ ಆಗೋಯ್ತು ಎಂದು ಕೆಲವರು ನಟಿಯ ಕಾಲೆಳೆದಿದ್ದರೆ,   ಅಂಗಾಂಗ ಪ್ರದರ್ಶನ ಮಾಡದೆಯೂ  ವರ್ಕ್​ಔಟ್​ ಮಾಡಬಹುದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದೀಗ ಹಲವು ನಟಿಯರು ತಮ್ಮ ಜಿಮ್​, ವ್ಯಾಯಾಮ, ವರ್ಕ್​ಔಟ್​ ವಿಡಿಯೋಗಳನ್ನು ಶೇರ್​ ಮಾಡುವುದು ಮಾಮೂಲು. ಆದರೆ ಕೆಲವರನ್ನು ಪ್ರಶಂಸಿಸುವ ನೆಟ್ಟಿಗರು, ಮತ್ತೆ ಕೆಲವರ ಮೇಲೆ ಅದ್ಯಾಕೆ ಕಿಡಿ ಕಾರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ನೇಹಾ ಅವರ ವಿಡಿಯೋ ಸಕತ್​ ಟ್ರೋಲ್​ ಆಗುತ್ತಿದೆ. 

ಇನ್ನು ನೇಹಾ ಶರ್ಮಾ ಅವರ ಚಿತ್ರರಂಗದ ಕುರಿತು ಹೇಳುವುದಾದರೆ, ಇವರು ಸಿನಿಮಾಕ್ಕೆ ಪದಾರ್ಪಣೆ ಮಾಡಿದ್ದು  2007ರಲ್ಲಿ. ‘ಚಿರುತಾ’ ಅವರ ನಟನೆಯ ಮೊದಲ ಸಿನಿಮಾ. ಇದು ತೆಲುಗು ಸಿನಿಮಾ ಆಗಿತ್ತು. ‘ತೆರಿ ಮೇರಿ ಕಹಾನಿ’ ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟರು.  ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ. ಈ ವರ್ಷ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅದಾದ ಬಳಿಕ  ಸ್ವಿಮ್ ಸೂಟ್​ ಹಾಕಿಕೊಂಡು  ಐಸ್ ಬಾತ್ ಮಾಡಿ ಟ್ರೋಲ್​ನಿಂದಲೇ ಫೇಮಸ್​  ಆಗಿದ್ದರು. ಇದೀಗ ಈ ರೀತಿಯ ವರ್ಕ್​ಔಟ್​ ಪೋಸ್​ನಲ್ಲಿ ಮತ್ತಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಸೆಕ್ಸ್ ಕುರಿತು ಮಾತನಾಡಿದ್ದ 'ಕಿರಾತಕ' ಬೆಡಗಿ ಫುಲ್​ ಟೈಟಾಗಿ ಯುವಕರಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು ಹೀಗೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?