
ಬಾಲಿವುಡ್ ಎವರ್ ಗ್ರೀನ್ ನಟ ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಕಿರಿಯ ಪುತ್ರಿ ರಿಯಾ ಕಪೂರ್ ಆಗಸ್ಟ್ 14ರಂದು ಬಹು ದಿನದ ಗೆಳೆಯ ಕರಣ್ ಬೂಲಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ನಾಲ್ಕು ದಿನಗಳಿಂದ ಮನೆಯ ಮುಂದೆ ಪ್ಯಾಪರಾಜಿಗಳು ನಿಂತಿದ್ದರೂ, ನವ ಜೋಡಿಗಳು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸ್ವತಃ ರಿಯಾನೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
'12 ವರ್ಷಗಳ ನಂತರ. ಈ ಸಮಯದಲ್ಲಿ ನಾನು ಆತಂಕಕ್ಕೆ ಒಳಗಾಗಬಾರದು. ಏಕೆಂದರೆ ನೀವು ನನ್ನ ಬೆಸ್ಟ್ ಫ್ರೆಂಡ್ಸ್ ಹಾಗೂ ಅತ್ಯುತ್ತಮ ವ್ಯಕ್ತಿ. ಆದರೆ ತಡೆದುಕೊಳ್ಳಲಾಗದೆ ಅಳು ಮತ್ತು ಆತಂಕ ನನ್ನಲ್ಲಿತ್ತು. ಹೊಟ್ಟೆಯೊಳಗೆ ಯಾವುದೋ ಹುಳ ಇದ್ದಂತೆ, ಇದೊಂದು ಅದ್ಭುತ ಅನುಭವ. ನನ್ನ ಪೋಷಕರು ನಿದ್ರಿಸುವ ಮೊದಲು ನಾನು ರಾತ್ರಿ 11 ಗಂಟೆಯೊಳಗೆ ಜುಹು ಮನೆಗೆ ಬರಬೇಕಾದ ಹುಡುಗಿಯಾಗಿರುತ್ತೇನೆ. ಈ ಸಂತೋಷ ಅನುಭವಿಸಲು ಎಷ್ಟು ಅದೃಷ್ಟಶಾಲಿ ಎಂದು ನನಗೆ ಇದುವರೆಗೂ ತಿಳಿದಿರಲಿಲ್ಲ. ನಾವು ನಮ್ಮ ಕುಟುಂಬವನ್ನು ತುಂಬಾ ಹತ್ತಿರವಾಗಿಸುತ್ತೇವೆ ಎಂದು ನಾನು ಭಾವಿಸುತ್ತೇನೆ, ನಮ್ಮ ಜೀವನದಲ್ಲಿ ನಮಗೆ ಅನೇಕರು ಪ್ರೀತಿ ಕೊಡುವವರಿದ್ದಾರೆ,' ಎಂದು ರಿಯಾ ಬರೆದುಕೊಂಡಿದ್ದಾರೆ.
ಕಳೆದ 12 ವರ್ಷಗಳಿಂದ ರಿಯಾ ಮತ್ತು ಕರಣ್ ಬೂಲಾನಿ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ರಿಲೇಷನ್‌ಶಿಪ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳಲ್ಲಿ ಓಪನ್ ಅಪ್ ಆಗಿದ್ದರು. ಕರಣ್ ಬೂಲಾನಿ ನಿರ್ದೇಶಕರಾಗಿದ್ದು, ಅನೇಕ ಜಾಹೀರಾತುಗಳನ್ನು ಮಾಡಿದ್ದಾರೆ. 'ಐಷಾ', 'ವೇಕಪ್ ಸಿದ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ರಿಯಾ ಕಪೂರ್ ಕೂಡ ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ. ಇತ್ತೀಚಿಗೆ ತಮ್ಮದೇ ಆದ ಇಸ್ ಕ್ರೀಮ್ ಬ್ರ್ಯಾಂಡ್ ತೆರೆದಿದ್ದಾರೆ. ಅಲ್ಲದೆ ಐಷಾ, ಖೂಬ್ ಸೂರತ್, ವೀರ್ ದಿ ವೆಡ್ಡಿಂಗ್' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.