ಡಿವೋರ್ಸ್ ಆದ್ಮೇಲೆ ಹ್ಯಾಪಿ ಫ್ರೆಂಡ್ ಶಿಪ್‌ನಲ್ಲಿ ಅರ್ಬಾಜ್ - ಮಲೈಕಾ

Suvarna News   | Asianet News
Published : Aug 16, 2021, 06:51 PM IST
ಡಿವೋರ್ಸ್ ಆದ್ಮೇಲೆ ಹ್ಯಾಪಿ ಫ್ರೆಂಡ್ ಶಿಪ್‌ನಲ್ಲಿ ಅರ್ಬಾಜ್ - ಮಲೈಕಾ

ಸಾರಾಂಶ

ದಾಂಪತ್ಯ ಡಿವೋರ್ಸ್ ಹಂತಕ್ಕೆ ಬಂತು ಅಂದರೆ ಗಂಡ ಹೆಂಡತಿ ನಡುವೆ ಪರಸ್ಪರ ಮುಖ ನೋಡದಷ್ಟೂ ಸಿಟ್ಟು, ದ್ವೇಷ ತುಂಬಿಕೊಂಡಿರುತ್ತದೆ. ಆದರೆ ಬಾಲಿವುಡ್ ನ ಹೊಸ ಟ್ರೆಂಡ್ ಕಂಪ್ಲೀಟ್ ಡಿಫರೆಂಟ್  

ಸಲ್ಮಾನ್ ಅಣ್ಣ ಅರ್ಬಾಜ್‌ ಖಾನ್‌ಗೂ, ಬಾಲಿವುಡ್‌ನ  ಎವರ್ ಗ್ರೀನ್ ಹಾಟ್ ಲೇಡಿ ಮಲೈಕಾ ಅರೊರಾಗೂ ಡಿವೋರ್ಸ್ ಆಗಿ ಯಾವುದೋ ಕಾಲ ಆಯ್ತು. 2017 ರ ಸುಮಾರಿ‌ಗೆ ಈ ಜೋಡಿ ತಮ್ಮ 19 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಗುಡ್ ಬೈ ಹೇಳ್ತಾರೆ. ಅತ್ತ ಮಲೈಕಾ ತನ್ನ ಕಿರಿಯ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆಗಿದ್ದ ಗುಪ್ತ್ ಗುಪ್ತ್ ಸಂಬಂಧವನ್ನ ರಾಜಾರೋಷವಾಗಿ ಮುಂದುವರಿಸಿದರೆ ಅರ್ಬಾಸ್ ಹೊಸ ಗರ್ಲ್ ಫ್ರೆಂಡ್ ತಲಾಶೆಯಲ್ಲಿರುತ್ತಾರೆ. ಆಗ ಅವರ ತೋಳ ತೆಕ್ಕೆಗೆ ಬರುವುದು ಜಾರ್ಜಿಯಾ ಆನ್ ದ್ರಿಯಾನಿ ಅನ್ನೋ ಚೆಲುವೆ. ಈಕೆ ಇಟಲಿ ಮೂಲದ ಮಾಡೆಲ್ ಹಾಗೂ ಡ್ಯಾನ್ಸರ್. 32 ವರ್ಷದ ಈ ಹುಡುಗಿ ಒಂದೆರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಸಿದ್ಧಿಗೆ ಬಂದಿದ್ದು ಅರ್ಬಾಜ್ ಗರ್ಲ್ ಫ್ರೆಂಡ್ ಆಗಿ. 54 ವರ್ಷದ ಅರ್ಬಾಜ್ ಜೊತೆ 32 ರ ಈ ಹುಡುಗಿ ಸಾಕಷ್ಟು ಸುತ್ತಾಡಿದ್ದಾಳೆ, ಮೋಜು ಮಾಡಿದ್ದಾಳೆ.

ಕುಟುಂಬಕ್ಕೆ ಪುತ್ರಿ ಬರಮಾಡಿಕೊಳ್ಳಲು ನಟಿ ಮಲೈಕಾ ಅರೋರಾ ರೆಡಿ?

ಇತ್ತ 47 ರ ಹರೆಯದ ಮಲೈಕಾ, 35 ರ ಹರೆಯದ ಅರ್ಜುನ್ ಕಪೂರ್‌ನ ಪಾರ್ಟನರ್ ಮಾಡಿಕೊಂಡು ಬದುಕು ಸವೆಸುತ್ತಿದ್ದಾಳೆ. ಅಪ್ಪ ಅಮ್ಮ ಇಬ್ಬರಿದ್ದೂ ಒಂಟಿಯಾಗಿರುವ ಮಲೈಕಾ ಹಾಗೂ ನಿರ್ಮಾಪಕ‌ ಅರ್ಬಾಸ್ ಮಗ ಅರ್ಹಾನ್ ಖಾನ್ ಮತ್ತೊಂದು ಜಗತ್ತಲ್ಲಿದ್ದಾನೆ. 18 ರ ಹರೆಯದ ಈತನಿಗೆ ಈಗ ಓದು ಬೇಡವಾಗಿದೆ, ಬೇರೇನೋ ಮಾಡ್ತೀನಿ ಅಂತ ಓದನ್ನ ಅರ್ಧಕ್ಕೆ ನಿಲ್ಲಿಸಿ 1 ವರ್ಷ ಗ್ಯಾಪ್ ಅಂದುಕೊಂಡು ಓಡಾಡುತ್ತಿದ್ದಾನೆ.
 


2016-17ರಿಂದ ಈವರೆಗೆ ಇಷ್ಟೆಲ್ಲ ನಡೆದುಹೋಗಿದೆ. ಈಗ ಅರ್ಬಾಜ್ ಗೆ ಹಳೆಯ ಮನಸ್ತಾಪ ಮರೆತು ಮತ್ತೆ ಮಲೈಕಾ ನೆನಪು ಬಂದ ಹಾಗಿದೆ, ಮಲ್ಲಿಕಾಗೆ ಎಳೆಯ ಬಾಯ್ ಫ್ರೆಂಡ್ ಜೊತೆಗಿನ ಆಕರ್ಷಣೆ ಕೊಂಚ ಕಡಿಮೆ ಆಗಿ 19 ವರ್ಷಗಳ ಕಾಲ ಜೊತೆಗಿದ್ದ ಅರ್ಬಾಸ್ ಜೊತೆ ಕೊಂಚ ಕಾಲ ಕಳೆಯಬೇಕು ಅನಿಸಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅರ್ಬಾಸ್ ಹಾಗೂ ಮಲೈಕಾ ಇಬ್ಬರಿಗೂ ತಮ್ಮಿಂದಾಗಿ ಬಡವಾಗಿ, ಓದಲ್ಲೂ ಆಸಕ್ತಿ ಕಳೆದುಕೊಂಡ ಮಗ ಅರ್ಹಾನ್ ಮುಖದಲ್ಲಿ ನಗು ತರಿಸಬೇಕು ಅನ್ನುವ ತುಡಿತ. ಪರಿಣಾಮವಾಗಿ ಹಳೆಯ ಫ್ಯಾಮಿಲಿಯ ಮೆಂಬರ್ ಗಳು ಮತ್ತೆ ಒಟ್ಟಾಗಿದ್ದಾರೆ. ಈ ಮೂವರ ಭೇಟಿಗೆ ಮುಂಬೈಯ ಪ್ರತಿಷ್ಠಿತ ಈಟೌಟ್ ಸಾಕ್ಷಿಯಾಗಿದೆ. ಮಲೈಕಾ ಕಪ್ಪು ಬಣ್ಣದ ಶಾರ್ಟ್ ಸ್ಕರ್ಟ್, ಬಿಳಿ ಟೀ ಶರ್ಟ್ ನಲ್ಲಿದ್ದರೆ, ಅರ್ಹಾನ್ ಗ್ರೀನ್ ಟಿ ಶರ್ಟ್ ಮತ್ತು ಡೆನಿಮ್ ಧರಿಸಿದ್ದಾರೆ. ಅರ್ಬಾಸ್ ಮತ್ತೆ ಸ್ನೇಹ ಚಿಗುರಿಸುವ ಆಶಾವಾದದಲ್ಲಿ ಅಚ್ಚ ಬಿಳುಪಿನ ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ನಲ್ಲಿ ಮುಗುಳ್ನಗುತ್ತಿದ್ದದ್ದು ಪ್ರಮುಖ ಆಕರ್ಷಣೆ.

ಮಗನಿಗೆ ತಂಗೀನಾ ಕೊಡ್ತಾರಾ ಮಲೈಕಾ ? ಹಾಗಿದ್ರೆ ಅರ್ಜುನ್ ಜೊತೆ ಮದ್ವೆ ಯಾವಾಗ ?

ಮುಂಬೈನ ಪಾಪರಾಜಿಗಳ ಕಣ್ಣಿಗೆ ಈ ಮೂವರು ಬಿದ್ದು, ಇವರ ಫೋಟೋ ವೈರಲ್ ಆಗಿದ್ದೇ ಬಿ ಟೌನ್ ನಲ್ಲಿ ಮತ್ತೆ ಗುಸು ಗುಸು ಶುರು. ಇವರು ಮತ್ತೆ ಒಂದಾಗ್ತಾರಾ, ಬಹಳ ವಯಸ್ಸಿನ ಅಂತರ ಇರುವ ಈಗಿನ ಸಂಗಾತಿಗಳನ್ನು ತೊರೆದು ಮತ್ತೆ ಹಳೆಮನೆ ಸೇರ್ತಾರಾ ಅನ್ನೋ ಮಾತಿದೆ. ಆದರೆ ಅದೆಲ್ಲ ಆಗೋ ಹೋಗೋ ಕತೆ ಅಲ್ಲ ಅಂತ ಈ ಫೀಲ್ಡ್ ನಲ್ಲಿರೋರಿಗೆ ಗೊತ್ತು. ಏಕೆಂದರೆ ಒಟ್ಟಾಗಿದ್ದ ಜೋಡಿ ಕೆಲವು ವರ್ಷ ದೂರಾದ ಮೇಲೆ ದ್ವೇಷ, ಕಹಿ ಕಡಿಮೆ ಏನೋ ಆಗುತ್ತೆ. ಆದರೆ ಈ ಕಾರಣಕ್ಕೆ ಕಡಿದುಕೊಂಡ ಬಾಂಧವ್ಯ ಮತ್ತೆ ಚಿಗುರೋದು ಅಸಾಧ್ಯ. ಮತ್ತೊಬ್ಬರ ಎಲ್ಲ ಬಲಹೀನತೆಗಳ ಅರಿವಿದ್ದೂ ಮತ್ತೆ ಹಳೇ ಖೆಡ್ಡಾಕ್ಕೆ ಬೀಳೋದರಲ್ಲಿ ಅರ್ಥ ಇಲ್ಲ ಅಂತ ಕಂಡುಕೊಳ್ಳಲಾಗಷ್ಟು ಪೆದ್ದರಲ್ಲ ಈ ಮಾಜಿ‌ ಜೋಡಿ. ಆದರೆ ಈ ಭೇಟಿ ಯಾವ ತಪ್ಪೂ ಮಾಡದ ಅರ್ಹಾನ್ ಮುಖದಲ್ಲಿ ಸಣ್ಣ ನಗು ತರಿಸಲಿ ಅನ್ನುವ ಆಶಯ ಎಲ್ಲರಲ್ಲೂ ಇರೋದು ಸತ್ಯ.

ಮಲೈಕಾ ಅರೋರಾ ಫಿಟ್ನೆಸ್ ವಿಡಿಯೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

4 ಮಹತ್ವದ ಕಾರಣಕ್ಕೆ ಮದುವೆಯಾಗ್ತಿದ್ದಂತೆ ಹಳ್ಳೀಲಿ ಸತ್ಯನಾರಾಯಣ ಪೂಜೆ ಮಾಡಿದ Rashmika Mandanna ದಂಪತಿ!
ಏಂಜಲಿನಾ ಜೋಲಿ, ಹಾಗೊಂದು ಕಿಸ್‌ ಮಾಡಿದ್ದೇ ತಪ್ಪಾ ?