
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಎನ್‌ಸಿಬಿಯಿಂದ ವಿಚಾರಣೆಗೊಳಪಟ್ಟಿದ್ದ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಲಾಗಿತ್ತು. ಒಂದು ದಿನದ ವಿಚಾರಣೆ ನಂತರ ಬುಧವಾರ ನಟಿಯನ್ನು ಮುಂಬೈಯ ಬೈಕುಲಾ ಜೈಲಿಗೆ ಕರೆದೊಯ್ಯಲಾಗಿದೆ.
ಕಳೆದ ರಾತ್ರಿ ನಟಿಯ ಜಾಮೀನು ಅರ್ಜಿ ತಿರಸ್ಕರಿಸಲ್ಪಟ್ಟಿದ್ದು, 14 ದಿನ ಜೈಲಿನಲ್ಲಿರಲಿದ್ದಾರೆ. ವಿಡಿಯೋ ಮೂಲಕ ವಿಚಾರಣೆ ನಡೆಯಲಿದೆ. 28 ವರ್ಷದ ನಟಿ ರಿಯಾ ಚಕ್ರವರ್ತಿ ಇಂದು ಜಾಮೀನಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಿದ್ದಾರೆ. ನಟಿ ಮಂಗಳವಾರ ರಾತ್ರಿ ನಟಿ ಎನ್‌ಸಿಬಿ ಕಚೇರಿಯಲ್ಲಿ ಕಳೆದಿದ್ದಾರೆ.
ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!
ಮುಂಬೈನಲ್ಲಿ ಮಹಿಳಾ ಅಪರಾಧಿಗಳಿಗಾಗಿ ಇರುವ ಏಕೈಕ ಜೈಲಾಗಿದೆ ಬೈಕುಲಾ ಜೈಲ್. ಶೀನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಹಾಗೂ ಕೊರೆಗಾಂವ್ ಭೀಮಾ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್ ಕೂಡಾ ಇದೇ ಜೈಲಿನಲ್ಲಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ನೀಡಿದ ಆರೊಪದಲ್ಲಿ ನಟಿಯನ್ನು ಬಂಧಿಸಲಾಗಿದೆ. ನಟಿ ಸ್ವತಃ ಡ್ರಗ್ಸ್ ತೆಗೆದುಕೊಂಡ ಬಗ್ಗೆ ಕೋರ್ಟ್ ದಾಖಲೆಗಳಲ್ಲಿ ನಮೂದಿಸಿಲ್ಲ. ಸುಮಾರು 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುವಷ್ಟು ಆರೋಪ ರಿಯಾ ಮೇಲಿದೆ. ಮೂರು ದಿನ ನಟಿಯನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ. ಆಕೆಯ ಸಹೋದರ ಶೋವಿಕ್‌ನ್ನೂ ವಿಚಾರಣೆಗೊಳಪಡಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.