ಬೆಡ್, ಪಿಲ್ಲೋ, ಫ್ಯಾನ್ ಇಲ್ಲದ ಜೈಲ್ ಸೆಲ್‌ನಲ್ಲಿದ್ದಾರೆ ಬಾಲಿವುಡ್ ನಟಿ ರಿಯಾ..!

Published : Sep 12, 2020, 04:11 PM ISTUpdated : Sep 12, 2020, 07:23 PM IST
ಬೆಡ್, ಪಿಲ್ಲೋ, ಫ್ಯಾನ್ ಇಲ್ಲದ ಜೈಲ್ ಸೆಲ್‌ನಲ್ಲಿದ್ದಾರೆ ಬಾಲಿವುಡ್ ನಟಿ ರಿಯಾ..!

ಸಾರಾಂಶ

ಲಕ್ಷುರಿಯಾಗಿ ಬದುಕಿದ್ದ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಈಗ ನಾಲ್ಕು ಗೋಡೆ ಮಧ್ಯೆ ಜೈಲಿನ ಕೋಣೆಯಲ್ಲಿದ್ದಾರೆ. ಹೇಗಿದೆ ರಿಯಾ ಜೈಲು ಇಲ್ಲಿ ಓದಿ

ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಅರೆಸ್ಟ್ ಮಾಡಿದೆ. ನಟಿ ಮುಂಬೈನ ಬೈಕುಲಾ ಮಹಿಳಾ ಜೈಲಿನಲ್ಲಿದ್ದಾರೆ. ನಟಿಗೆ ಜೈಲಿನ ಸೆಲ್‌ನಲ್ಲಿ ಫ್ಯಾನ್, ಪಿಲ್ಲೋ, ಬೆಡ್ ನೀಡಲಾಗಿಲ್ಲ.

ಪುತ್ರಿ ಶಿನಾ ಬೋರಾ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಪಕ್ಕದ ಸೆಲ್‌ನಲ್ಲಿಯೇ ರಿಯಾಳನ್ನು ಇರಿಸಲಾಗಿದೆ. ಭದ್ರತೆ ವಿಚಾರದಿಂದಾಗಿ ನಟಿಯನ್ನು ಒಂಟಿ ಕೋಣೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಡ್ರಗ್ಸ್ ಜಾಲದಲ್ಲಿ ಸಿಲುಕಿ ಅರೆಸ್ಟ್ ಆದ ಟಾಪ್ ಸೆಲೆಬ್ರಿಟಿಗಳಿವರು..!

ಸುಶಾಂತ್ ಸಿಂಗ್ ಸಾವಿನ ಪ್ರಮುಖ ಆರೋಪಿ ಎಂದು ಸುದ್ದಿ ಇರುವುದರಿಂದ ಆಕೆ ಮೇಲೆ ಹಲ್ಲೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಶಾಂತ್ ಸಿಂಗ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದರು.

ರಿಯಾ, ಆಕೆಯ ಸಹೋದರ ಶೋವಿಕ್ ಸೇರಿ ಐವರನ್ನು ಬಂಧಿಸಲಾಗಿದೆ. ಸುಶಾಂತ್‌ಗೆ ಡ್ರಗ್ಸ್ ಒದಗಿಸುತ್ತಿದ್ದ ಆರೋಪ ರಿಯಾ ಮೇಲಿದೆ. ರಿಯಾಗೆ ಮಲಗಲು ಮ್ಯಾಟ್ ನೀಡಲಾಗಿದ್ದು, ಬೆಡ್ ಅಥವಾ ಪಿಲ್ಲೋ ನೀಡಲಾಗಿಲ್ಲ.

ಡ್ರಗ್ಸ್ ಡೀಲಿಂಗ್: ನಟಿ ರಿಯಾ ಬಾಯ್ಬಿಟ್ಟ 25 ಸೆಲೆಬ್ರಿಗಳ ಹೆಸರು..!

ಕೋರ್ಟ್ ಅನುಮತಿಸಿದರೆ ಆಕೆಗೆ ಟೇಬಲ್ ಫ್ಯಾನ್ ಒದಗಿಸಲಾಗುತ್ತದೆ ಎನ್ನಲಾಗಿದೆ. ಸದ್ಯ ಇಬ್ಬರು ಗಾರ್ಡ್‌ಗಳು ಆಕೆಯ ಕೋಣೆಯನ್ನು 3 ಶಿಫ್ಟ್‌ಗಳಲ್ಲಿ ಕಾವಲು ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಬೋಲ್ಡ್ ವಿಡಿಯೋಗಳೂ ಸಾಮಾಜಿಕ ಸೇವೆಯೇ': ನಟಿ ಪೂನಂ ಪಾಂಡೆ ಶಾಕಿಂಗ್ ಕಾಮೆಂಟ್ಸ್ ವೈರಲ್
ಪಾತ್ರಕ್ಕಾಗಿ ದೇಹವನ್ನೇ ಬದಲಿಸಿಕೊಂಡ ನಟಿ… 58 ಕೆಜಿಯಿಂದ 72 ಕೆಜಿ, ಮತ್ತೆ Weight Loss!