
ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಪೌದ್ವಾಲ್ ಪುತ್ರ ಆದಿತ್ಯ ಪೌದ್ವಾಲ್(35) ಕಿಡ್ನಿ ವೈಫಲ್ಯದಿಂದ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಹಲವು ತಿಂಗಳಿಂದ ಆದಿತ್ಯ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಿಡ್ನಿ ವೈಫಲ್ಯದಿಂದ ಆದಿತ್ಯ ಮೃತಪಟ್ಟಿದ್ದಾರೆ.
ಆದಿತ್ಯ ಪೌದ್ವಾಲ್ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಭಕ್ತಿಗಾನ ಸಂಗೀತದಲ್ಲಿ ಆಕೆ ಒಂದು ಮಾರ್ಕ್ ಮಾಡಿದ್ದಾರೆ. ಜನ ಆಕೆಯ ಹಾಡುಗಳನ್ನು ಮೆಚ್ಚುತ್ತಾರೆ.
ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಲ್ಯಾನ್ ಕೇಸ್ ರಿಓಪನ್ ಮಾಡಿದ CBI
ಆಕೆಯ ಆರತಿ ಹಾಗೂ ಮಂತ್ರಗಳನ್ನು ಕೆಳಿ ಜನ ಬದಲಾಗುವುದನ್ನು ನಾನು ನೋಡಿದ್ದೇನೆ. ನನ್ನ ಅಮ್ಮನಿಗಾಗಿ ಹೊಸದೊಂದು ಕಂಪೊಸಿಷನ್ ಜೊತೆ ಬರಲಿದ್ದೇನೆ ಎಂದಿದ್ದರು.
ಥ್ಯಾಕರೆ ಸಿನಿಮಾ ಜೊತೆಗೆ ಆದಿತ್ಯ ಅಸೋಸಿಯೇಟ್ ಆಗಿದ್ದರು. ಬಾಲ್ ಥ್ಯಾಕರೆ ಅವರ ಜೀವನಾಧರಿತ ಸಾಹೇಬ್ ತು ಸಿನಿಮಾದಲ ಹಾಡುಗಳಿಗೆ ಮ್ಯೂಸಿಕ್ ಪ್ರೊಡ್ಯೂಸರ್ ಆಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.