'ಕ್ರ್ಯಾಕ್‌' ಸಿನಿಮಾ ಗಳಿಸಿದ್ದೆಷ್ಟು?; ರವಿತೇಜ ಸಂಭಾವನೆ ಗಗನ ಮುಟ್ಟುತ್ತಿದೆ?

Suvarna News   | Asianet News
Published : Jan 15, 2021, 03:23 PM ISTUpdated : Jan 15, 2021, 03:35 PM IST
'ಕ್ರ್ಯಾಕ್‌' ಸಿನಿಮಾ ಗಳಿಸಿದ್ದೆಷ್ಟು?; ರವಿತೇಜ ಸಂಭಾವನೆ ಗಗನ ಮುಟ್ಟುತ್ತಿದೆ?

ಸಾರಾಂಶ

ರಾಜ್ಯಾದ್ಯಂತ ತೆರೆ ಕಂಡ ಕ್ರ್ಯಾಕ್ ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್‌, ನಾಲ್ಕೇ ದಿನಗಳಲ್ಲಿ ಹಾಕಿದ ಬಂಡವಾಳ ಜೇಬಿಗೆ....

ಮಾಸ್‌ ಹೀರೋ ರವಿತೇಜ 'ಕ್ರ್ಯಾಕ್‌' ಚಿತ್ರದ ಮೂಲಕ ಬಿಗ್ ಕಮ್‌ ಬ್ಯಾಕ್ ಮಾಡಿದ್ದಾರೆ. ಓಟಿಟಿಯಲ್ಲಿ ರಿಲೀಸ್‌ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ರವಿತೇಜ ಒತ್ತಾಯದಿಂದ ರಿಸ್ಕ್‌ ತೆಗೆದುಕೊಂಡು, ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ವೇಳೆ ಕ್ರ್ಯಾಕ್ ಹಿಟ್ ಆದರೆ ಸಂಭಾವನೆ ಹೆಚ್ಚಿಸಿಕೊಳ್ಳುವುದಾಗಿ ಹೇಳಿದ ರವಿತೇಜ ಅವರ ಗಳಿಕೆ ನೋಡಿದರೆ ಖಂಡಿವಾಗಿಯೂ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. 

ನಿರ್ಮಾಪಕರು ಹಾಗೂ ಫೈನ್ಯಾನ್ಷಿಯರ್‌ ನಡುವೆ ಹಣಕಾಸಿನ ವಿಷಯಕ್ಕೆ ಮನಸ್ತಾಪ ಉಂಟಾಗಿ ಚಿತ್ರದ ಬಿಡುಗಡೆ ದಿನವನ್ನು ಮುಂದೂಡಲಾಗಿತ್ತು. ಆದರೆ ರವಿತೇಜ ಕಾಂಪ್ರಮೈಸ್‌ ಮಾಡಿದ ನಂತರ ಬಿಡುಗಡೆಗೆ ದಾರಿ ಸಿಕ್ಕಿತು.  ಸಿನಿಮಾ ತೆರೆ ಕಂಡ ಮೊದಲ ದಿನವೇ 6.54 ಕೋಟಿ ರೂ. ಗಳಿಸಿದೆ. ಎರಡನೇ ದಿನ 3.15 ರೂ. ಕೋಟಿ ಗಳಿಸಿತು, ಮೂರನೇ ದಿನ 2.86 ಕೋಟಿ ರೂ. ಗಳಿಸಿತು ಹಾಗೂ ನಾಲ್ಕನೇ ದಿನ 3 ಕೋಟಿ ಗಳಿಸಿತು. ಇದು ಕೇವಲ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲೆಕ್ಕ ಎನ್ನುವುದು ವಿಶೇಷ.

ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟ ಆ ಒಂದು ಸಿನಿಮಾದಿಂದ ಮುಂದಿಟ್ಟ ದಿಮ್ಯಾಂಡ್ ಇಷ್ಟು? 

ಕೊರೋನಾ ಸಂಕಷ್ಟದ ನಡುವೆಯೂ ಕೋಟಿಯಲ್ಲಿ ಗಳಿಕೆ ಮಾಡುತ್ತಿದೆ ಅಂದರೆ, ಇದು ದೊಡ್ಡ ಸಾಧನೆಯೇ ಹೌದು. ಈಗಾಗಲೇ  ಹಾಕಿರುವ ಶೇ.88 ಬಂಡವಾಳವನ್ನು ಚಿತ್ರತಂಡ ಗಳಿಸಿಕೊಂಡಿದೆ. ಕ್ರ್ಯಾಕ್ ಸಿನಿಮಾ ಸೂಪರ್ ಹಿಟ್ ಆದರೆ ಸಂಭಾವನೆಯನ್ನು ಸುಮಾರು 1 ಕೋಟಿಗೆ ಏರಿಸಿಕೊಳ್ಳುವುದಾಗಿ ರವಿತೇಜ ಈ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ
Salman Khan Birthday: 60 ವರ್ಷದ ಎವರ್’ಗ್ರೀನ್ ಬ್ಯಾಚುಲರ್ ಸಲ್ಮಾನ್ ಖಾನ್ ನೆಟ್ ವರ್ತ್ ಇಷ್ಟೊಂದಾ?