ತಂದೆಗೆ ಸುಳ್ಳು ಹೇಳಿ ರಾತ್ರಿ ಪೂರಾ ಸುತ್ತಿದ್ರು ಈ ಬಾಲಿವುಡ್‌ನ ನಟಿ

Published : Jan 15, 2021, 02:04 PM ISTUpdated : Jan 15, 2021, 02:20 PM IST
ತಂದೆಗೆ ಸುಳ್ಳು ಹೇಳಿ ರಾತ್ರಿ ಪೂರಾ ಸುತ್ತಿದ್ರು ಈ ಬಾಲಿವುಡ್‌ನ ನಟಿ

ಸಾರಾಂಶ

ತಂದೆಗೆ ಸುಳ್ಳು ಹೇಳಿ ಈ ಬಾಲಿವುಡ್ ನಟಿ ಹೋಗಿದ್ದೆಲ್ಲಿಗೆ ? ರಾತ್ರಿ ಪೂರಾ ಸುತ್ತಿ ಮರುದಿನ ಬೆಳಗ್ಗೆ ತಲುಪಿದ್ದ ಶ್ರೀದೇವಿ ಪುತ್ರಿ  

ಬಾಲಿವುಡ್‌ನ ಕ್ಯೂಟ್ ಹುಡುಗಿ ಜಾಹ್ನವಿ ಕಪೂರ್ ತಂದೆಗೆ ಸುಳ್ಳು ಹೇಳಿ ಸೀಕ್ರೆಟ್ ಟ್ರಿಪ್ ಹೋಗಿರುವ ಬಗ್ಗೆ ಇತ್ತೀಚೆಗೆ ರಿವೀಲ್ ಮಾಡಿದ್ದಾರೆ. ನಿರ್ಮಾಪಕ ಬೋನಿ ಕಪೂರ್‌ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಈ ವಿಚಾರವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಲಾಸ್ ಏಂಜಲೀಸ್‌ನಿಂದ ಲಾಸ್ ವೆಗಾಸ್‌ಗೆ ಕದ್ದುಮುಚ್ಚಿ ಹೋಗಿದ್ದ ಜಾಹ್ನವಿ ತಂದೆ ಬಳಿ ತಾನು ಸಿನಿಮಾ ನೋಡೋಕೆ ಹೋಗೋದಾಗಿ ಹೇಳಿ ಹೋಗಿದ್ರು. ಸಿನಿಮಾ ನೋಡೋಕೆ ಹೋಗ್ತೀನಿ ಎಂದು ಹೇಳಿ ಫ್ಲೈಟ್ ಹತ್ತಿ ವೇಗಾಸ್‌ಗೆ ಹೋಗಿ ಅಲ್ಲಿ ಜಾಲಿಯಾಗಿ ಸುತ್ತಿ ಮರುದಿನ ಬೆಳಗ್ಗೆ ಮರಳಿ ಬಂದಿದ್ದರಂತೆ.

ಪಂಜಾಬ್‌ನಲ್ಲಿ ಶೂಟಿಂಗ್: ಜಾಹ್ನವಿಗೆ ರೈತ ಪ್ರತಿಭಟನೆ ಬಿಸಿ

ಸದ್ಯ ನಟಿ ಗುಡ್ ಲಕ್ ಜೆರಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.  ಸಿದ್ಧಾರ್ಥ್‌ ಸೇನ್ ಗುಪ್ತಾ ನಿರ್ದೇಶನದ ಸಿನಿಮಾದಲ್ಲಿದೀಪಕ್ ದೊಬ್ರಿಯಾಲ್, ಮೀತಾ ವಷಿಷ್ಠ, ನೀರಜ್ ಸೂದ್ ನಟಿಸುತ್ತಿದ್ದಾರೆ. ಇದಲ್ಲದೆ ದೋಸ್ತಾನ2 ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ದಢಾಕ್ ಸಿನಿಮಾ ಮೂಲಕ ವೀಕ್ಷಕರ ಮನಸು ಗೆದ್ದ ಜಾಹ್ನವಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!