
ಸಿನಿಮಾಗಳಿಗಾಗಿ ನಾನ್ಯಾವತ್ತೂ ಸಿನಿಮಾ ಹಿರೋಗಳ ಜೊತೆ ಮಲಗಲಿಲ್ಲ ಎಂದು ಹಿರಿಯ ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿದ್ದಾರೆ. ದಿಲ್ವಾಲೆ, ಅಂದಾಜ್ ಅಪ್ನಾ ಅಪ್ನಾ, ದುಲೇ ರಾಜದಂತಹ ಸಿನಿಮಾಗಳ ಮೂಲಕ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ರವಿನಾ ಟಂಡನ್ ಬಾಲಿವುಡ್ ಏಕಸ್ವಾಮ್ಯದ ಬಗ್ಗೆ ಮಾತನಾಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ನಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸುತ್ತಿರುವ ನಟಿ ರವೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ಏಕಸ್ವಾಮ್ಯದ ಬಗ್ಗೆ ಮಾತನಾಡಿದ್ದಾರೆ.
ನಾನು ಬಾಲಿವುಡ್‌ನಲ್ಲಿ ವೃತ್ತಿ ಜೀವನ ಆರಂಭಿಸಿದಾಗ ಅಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿದ್ದ ಸಮಯವಾಗಿತ್ತದು. ಆದರೆ ಯಾವತ್ತೂ ಅವಕಾಶಕ್ಕಾಗಿ ನಾನು ನಟರೊಂದಿಗೆ ಮಲಗಲಿಲ್ಲ ಎಂದು ಅವರು ಹೇಳಿದ್ದಾರೆ.
ಸುಶಾಂತ್‌ನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸೋಕೆ ಪ್ಲಾನ್ ಮಾಡಿದ್ದ ರಿಯಾ..!
ನನಗೆ ಇಂಡಸ್ಟ್ರಿಯಲ್ಲಿ ಯಾವುದೇ ಕ್ಯಾಂಪ್ ಇರಲಿಲ್ಲ, ಯಾರೂ ಗಾಡ್ ಫಾದರ್ ಕೂಡಾ ಇರಲಿಲ್ಲ. ಹಿರೋಗಳ ಬೇಡಿಕೆ ನಿರಾಕರಿಸುತ್ತಿದ್ದ ಕಾರಣ ನನ್ನನ್ನು ಅಹಂಕಾರಿ ಎಂದೂ ಕರೆಯುತ್ತಿದ್ದರು ಎಂದಿದ್ದಾರೆ.
ದಿಶಾ, ಸುಶಾಂತ್ ಸಾವಿನ ಮಧ್ಯೆ ತನ್ನನ್ನು ಎಳೆದಿದ್ದಕ್ಕೆ ಬಾಲಿವುಡ್ ಯಂಗ್ ನಟ ಗರಂ..!
ತಮ್ಮನ್ನು ಕೆಳಗೆಳೆದ ಕೆಲವು ಪತ್ರಜರ್ತೆಯರ ಬಗ್ಗೆ ಮಾತನಾಡಿದ ಅವರು, ತಾವೆಂದೂ ತಮ್ಮ ನಿಲುವುಗಳನ್ನು ಬಿಟ್ಟು ಬದುಕಿಲ್ಲ ಎಂದಿದ್ದಾರೆ. ತನ್ನ ಪ್ರಾಮಾಣಿಕತೆಯಿಂದಲೇ ಬಾಲಿವುಡ್‌ನಲ್ಲಿ ನಾನು ಹಲವಾರು ಸಿನಿಮಾ ಅವಕಾಶಗಳನ್ನೂ ಕಳೆದುಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.