
ರಶ್ಮಿಕಾ ಮಂದಣ್ಣ ಮನಸಿನ ಮಾತಾ ಇದು?
ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿ ಈಗ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ. ಈ ವಿಡಿಯೋ ಮಾಮೂಲಿ ಎನ್ನುವಂತಿಲ್ಲ, ಇದು ನಿವಾಗಿಯೂ ಶಾಕಿಂಗ್ ಹುಟ್ಟಿಸುವಂತಿದೆ. ಇದರಲ್ಲಿ, ರಶ್ಮಿಕಾ ಮಂದಣ್ಣ ಹೇಳುತ್ತಾರೆ- 'ಅವಳು ಹೇಳಿದ್ದಾಳೆ'- ಕೆಲವೊಂದು ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಸುತ್ತಲಿನ ಸಮಾಜದ ಕಾರಣಕ್ಕಾಗಿ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ. ಅವಳ ಸುತ್ತಮುತ್ತಲೂ ಇರುವ ಮನೆಯವರು, ಸಮಾಜ ಹಾಗೂ ಆಪ್ತರ ಕಾರಣಕ್ಕಾಗಿ ಅವಳು ಆ ಸಂಬಂಧವನ್ನು ಒಪ್ಪಿಕೊಂಡು ಮುಂದುವರಿಸುವಂತೆ ಆಗುತ್ತದೆ. ಆದರೆ, ಅವಳು ಮಾತ್ರ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆತನ ಜೊತೆ ಕಮಿಟ್ ಆಗಿರೋದಿಲ್ಲ.
ಯಾವಾಗ ಆ ಹೆಣ್ಣುಮಗಳು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ನನಗೆ ಈ ಸಂಬಂಧ ಇಷ್ಟವಿಲ್ಲ, ನಾನು ಈ ಸಂಬಂಧದಲ್ಲಿ ಮುಂದುವರಿಯಲಾರೆ ಎಂದು ಹೇಳಿದಾಗ ಆ ವ್ಯಕ್ತಿಗೆ ಅದು ಆಕಸ್ಮಿಕ ಎನ್ನಿಸಿ ಶಾಕ್ ಆಗಬಹುದು. ಆದರೆ, ಈಕೆಗೆ ಅದು ಅಚ್ಚರಿ ಎನ್ನಿಸುವುದಿಲ್ಲ ಕಾರಣ, ಆಕೆಯ ಮಟ್ಟಿಗೆ ಅದು ಶುರುವಿನಿಂದಲೂ ಸಂಬಂಧವೇ ಆಗಿರುವುದಿಲ್ಲ. ಹೊರಗಡೆ ಅದೇನೇ ನಡೆಯುತ್ತಿದ್ದರೂ ಒಳಗಡೆ ಆಕೆ ಈ ಸಂಬಂಧದಲ್ಲಿ ತೊಡಗಿಸಿಕೊಂಡಿರುವುದೇ ಇಲ್ಲ, ಆಕೆಯ ಮಟ್ಟಿಗೆ ಅದು ಸಂಬಂಧವೇ ಆಗಿರುವುದಿಲ್ಲ.
ಆದರೆ ಬಹಳಷ್ಟು ಸಾರಿ ಇಂಥ ಮಹಿಳೆಯರು ಹೇಳಿಕೊಳ್ಳಲು ಧೈರ್ಯ ಸಾಲದೇ ಅದೇ ರಿಲೇಶನ್‌ಶಿಪ್ ಬಲೆಯಲ್ಲಿ ಜೀವನವಿಡೀ ಬಿದ್ದು ಒದ್ದಾಡುತ್ತಾರೆ. ಆದರೆ, ಎದುರಿಗಿರುವ ಜೀವನವನ್ನು ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ನಡೆಸಲು ಬಯಸುವ ಮಹಿಳೆಯರು ಇಂಥ ಬೇಸರದ, ಒಪ್ಪಿಕೊಳ್ಳಲಾಗದ ಸಂಬಂಧದ ಬಲೆಯಿಂದ ಬಿಡಿಸಿಕೊಂಡು ಹೊರಗೆ ಬರುತ್ತಾರೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. 'ಇದು ಯಾರೋ 'ಅವಳು' ಹೇಳಿದ್ದಲ್ಲ, ಬದಲಿಗೆ ಇದು ಸ್ವತಃ ನಟಿ ರಶ್ಮಿಕಾ ಮಂದಣ್ಣರ ಮನಸಿನ ಮಾತು' ಎಂದಿವೆ ಹಲವರು ಕಾಮೆಂಟ್‌ಗಳು. ಈ ವಿಡಿಯೋದಲ್ಲಿ ರಶ್ಮಿಕಾ ಹೇಳಿರುವ ಮಾತಿಗೆ ಕೆಲವರು ಅವರ ಪರವಾಗಿ ನಿಂತಿದ್ದರೆ ಹಲವರು ಅವರ ವಿರುದ್ಧವಾಗಿ ನಿಂತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಹಜ. ಆದರೆ, ಒಂದೆರಡು ಕಾಮೆಂಟ್‌ಗಳು ನಿಜವಾಗಿಯೂ ಹಲವರ ನಿದ್ದೆಗೆಡಿಸುವಂತಿದೆ. ಹಾಗಿದ್ರೆ ಅದೇನು? ಮುಂದೆ ನೋಡಿ..
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು ರಶ್ಮಿಕಾ ಆಡಿರುವ ಈ ಮಾತಿಗೆ 'ಇದು ಇಂದಿನ ಕಾಲದಲ್ಲಿ ಹುಡುಗಿಯರು ಮಾಡುತ್ತಿರುವ ದೊಡ್ಡ ತಪ್ಪು.. ನಿಮ್ಮ ಬುದ್ಧಿ ಹಾಗೂ ಹೃದಯಕ್ಕೆ ಅ ಹುಡುಗ ಇಷ್ಟವಾಗುವ ಮೊದಲು, ಮನೆಯವರು, ಸಮಾಜ ಹಾಗೂ ಕೆಲವರು ನೀವಿಬ್ಬರೂ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದಾರೆ, ಯಾರೋ ಹೇಳುತ್ತಿದ್ದಾರೆ ಎನ್ನುವ ಕಾರಣಕ್ಕೆ ದಯವಿಟ್ಟು ಅಂತಹ ಸಂಬಂಧವನ್ನು ಒಪ್ಪಿಕೊಳ್ಳಬೇಡಿ.. ಒಮ್ಮೆ ನೀವು ಒಪ್ಪಿಕೊಂಡು ಆ ಸಂಬಂಧದ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೆ, ನೀವು ಮಾತ್ರವಲ್ಲ ಆ ವ್ಯಕ್ತಿ ಕೂಡ ಅದರಿಂದ ಮುಂದೆ ತೊಂದರೆಗೆ ಸಿಲುಕುತ್ತಾರೆ, ವಿಷಾದ ಹೊಂದುತ್ತಾರೆ' ಎಂದಿದ್ದಾರೆ.
ಮತ್ತೊಬ್ಬರು 'ದಯವಿಟ್ಟು ಇಷ್ಟವಿಲ್ಲದಿದ್ದರೆ ಅಂತಹ ಸಂಬಂಧವನ್ನು ಒಪ್ಪಿಕೊಳ್ಳಲೇಬೇಡಿ. ಬೇರೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಒಮ್ಮೆ ಒಪ್ಪಿಕೊಂಡು ಮುಂದೆ ಬೇಡ ಅಂದರೆ ಅದರಿಂದ ಸಂಬಂಧಪಟ್ಟ ಎಲ್ಲರಿಗೂ ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, 'ಒತ್ತಾಯಕ್ಕೆ ಸಂಬಂಧ, ಮದುವೆಗೆ ಒಪ್ಪಿಕೊಳ್ಳುವುದು ತಪ್ಪ, ಅದೇ ರೀತಿ ಒಪ್ಪಿಕೊಂಡು ಆ ಬಳಿಕ ಆ ಹುಡುಗನ ಹಾರ್ಟ್ ಬ್ರೇಕ್ ಮಾಡೋದು ಕೂಡ ಅಪರಾಧ' ಎಂದಿದ್ದಾರೆ.
ಆದರೆ, ಯಾರೊಬ್ಬರೂ ಕೂಡ 'ಆ ಹುಡುಗ ಕೂಡ ಈ ಸಂಬಂಧಕ್ಕೆ ಬೇರೆಯವರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡಿರಲೂಬಹುದು. ಅದು ಬ್ರೇಕ್‌ಅಪ್ ಆದಾಗ ಆತನೂ ಖುಷಿಪಟ್ಟಿರುಬಹುದು, ಸಮಸ್ಯೆ ಅಂತೂ ಇಂತೂ ಬಗೆಹರಿಯಿತು ಎಂದುಕೊಂಡಿರಲೂಬಹುದು. ಆದರೆ, ಆತನು ನಿಜವಾಗಿ 'ಬಲಿಪಶು' ಎಂದುಕೊಂಡು ನೀವೇ ನಿಮ್ಮಲ್ಲಿ ನಿರ್ಧರಿಸಿ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡ್ತೀರಿ. ಆತನ ಅಭಿಪ್ರಾಯ ಕೇಳಿದ್ದೀರಾ, ತಿಳಿದುಕೊಂಡಿದ್ದೀರಾ?.. ಒನ್ ವೇ ಯಾಕೆ' ಎಂದು ಯಾರೊಬ್ಬರೂ ಕಾಮೆಂಟ್ ಸೆಕ್ಷನ್‌ನಲ್ಲಿ ಕೇಳಿಯೇ ಇಲ್ಲ. ಇದು ನಿಜವಾದ ಅಚ್ಚರಿ ಎನ್ನಬಹುದೇ? ಸೋಷಿಯಲ್ ಮೀಡಿಯಾದಲ್ಲಿ ಒಪಿನಿಯನ್‌ಗಳು ವಿಭಿನ್ನವಾಗಿ ಬಂದೇ ಬರುತ್ತವೆ. ಜಸ್ಟ್ ಟೇಕ್ ಇಟ್ ಈಸಿ' ಎನ್ನಬಹುದೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.