ರಣ್ಬೀರ್ ಜತೆ ರಶ್ಮಿಕಾ ಮಂದಣ್ಣ 'Lip Lock' ಕಿಸ್ಸಿಂಗ್; ಬೆಚ್ಚಿಬಿದ್ದ ವಿಜಯ್ ದೇವರಕೊಂಡ ಫ್ಯಾನ್ಸ್!

By Shriram Bhat  |  First Published Oct 14, 2023, 7:20 PM IST

ಹಿಮಾಲಯ ಬ್ಯಾಕ್‌ಗ್ರೌಂಡ್‌ ಹಾಗು ದೇವಾಲಯಗಳ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿರುವ ಈ ವಿಡಿಯೋ, ರಶ್ಮಿಕಾ ಮತ್ತು ರಣಬೀರ್ ಕಪೂರ್ ಮಧ್ಯೆ ಹಾಡಿನಲ್ಲಿ ಒಳ್ಳೆಯ ಕೆಮಿಸ್ಟ್ರಿ ಕಾಣಿಸುತ್ತಿದೆ ಎಂಬ ಅಭಿಪ್ರಾಯ ಬಂದಿದೆ. ಕಾಮೆಂಟ್‌ ನೋಡಿ ಹೇಳುವುದಾದರೆ, ರಶ್ಮಿಕಾ ಇನ್ನೂ ಹೆಚ್ಚು ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಚಾನ್ಸ್ ಪಡೆಯಲಿರುವುದು ಗ್ಯಾರಂಟಿ ಎನ್ನಬಹುದು.


ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ 'ನೋ ಮೇಕ್‌ಅಪ್' ವಿಡಿಯೋ ಸಾಂಗ್‌ ಒಂದನ್ನು ಹರಿಬಿಟ್ಟಿದ್ದಾರೆ. ಈ ವಿಡೀಯೋ ಸಾಂಗ್‌ನಲ್ಲಿ ರಶ್ಮಿಕಾ ಮುಖದ ಮೇಲೆ ಆಲ್ಮೋಸ್ಟ್‌ ಆಲ್ ಮೇಕಪ್ ಇಲ್ಲ. ಇಲ್ಲವೇ ಇಲ್ಲಎಂಬಷ್ಟು ಎನ್ನಬಹುದಾದಷ್ಟು ಸಹಜವಾಗಿ ಕಾಣುವ ನಟಿ ರಶ್ಮಿಕಾ, ಈ ಮೂಲಕ ತಾವು 'ಸಹಜ ಸುಂದರಿ' ಎಂಬುದನ್ನು ಪ್ರೂವ್ ಮಾಡಿದ್ದಾರೆ ಎನ್ನಬಹುದು. ಸುಂದರಿ ಎಂಬುದು ಎಲ್ಲರಿಗೂ ಗೊತ್ತಿತ್ತು, ಇದೀಗ ಸಹಜ ಸುಂದರಿ ಎಂಬುದೂ ಕೂಡ ಜಗತ್ತಿಗೆ ಗೊತ್ತಾಗಿದೆ ಎನ್ನಬಹುದು. 

ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ 'ಇನ್‌ಸ್ಟಾಗ್ರಾಂ'ನಲ್ಲಿ ಮುಂಬರುವ ಚಿತ್ರವಾದ 'ಅನಿಮಲ್' ವಿಡಿಯೋ ಸಾಂಗ್‌ಅನ್ನು ಅಪ್ಲೋಡ್ ಮಾಡಿದ್ದು, ಅದು ಸಖತ್ ವೈರಲ್ ಆಗುತ್ತಿದೆ. ನಾಯಕ ನಟ ರಣಬೀರ್ ಕಪೂರ್ ಜತೆ ಸಾಕಷ್ಟು ಕಿಸ್ಸಿಂಗ್ ಸೀನ್ ಹೊಂದಿರುವ ಈ ಸಾಂಗ್ ವಿಡಿಯೋ ಹಲವರಿಂದ ಮೆಚ್ಚುಗೆ ಹಾಗೂ ಟೀಕೆ ಎರಡನ್ನೂ ರಿಸೀವ್ ಮಾಡಿಕೊಳ್ಳುತ್ತಿದೆ. ಮೇಕಪ್ ಇಲ್ಲದೆಯೂ ನಟಿ ರಶ್ಮಿಕಾ ಪ್ರತಿ ಪ್ರೇಂನಲ್ಲೂ ಚೆಂದವಾಗಿ ಕಾಣಿಸುತ್ತಿದ್ದು, ರಶ್ಮಿಕಾ ಫ್ಯಾನ್ಸ್‌ ಇನ್ನಷ್ಟು ಖುಷಿಯಾಗಿದ್ದಾರೆ. 

Tap to resize

Latest Videos

ಬಂದೇ ಬಿಡ್ತು ವೀಕೆಂಡ್ 'ಕಿಚ್ಚನ ಪಂಚಾಯಿತಿ'..; ಸ್ಪರ್ಧಿಗಳ ಎದೆಯಲ್ಲಿ 'ಢವ ಢವ' ಕೇಳಿಸ್ತಿದ್ಯಾ ?!

ಹಿಮಾಲಯದ ಬ್ಯಾಕ್‌ಗ್ರೌಂಡ್‌ ಹಾಗು ದೇವಾಲಯಗಳ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿರುವ ಈ ವಿಡಿಯೋ, ರಶ್ಮಿಕಾ ಮತ್ತು ರಣಬೀರ್ ಕಪೂರ್ ಮಧ್ಯೆ ಈ ಹಾಡಿನಲ್ಲಿ ಒಳ್ಳೆಯ ಕೆಮಿಸ್ಟ್ರಿ ಕಾಣಿಸುತ್ತಿದೆ ಎಂಬ ಅಭಿಪ್ರಾಯ ಬಂದಿದೆ. ಕಾಮೆಂಟ್‌ ನೋಡಿ ಹೇಳುವುದಾದರೆ, ರಶ್ಮಿಕಾ ಇನ್ನೂ ಹೆಚ್ಚು ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಚಾನ್ಸ್ ಪಡೆಯಲಿರುವುದು ಗ್ಯಾರಂಟಿ ಎನ್ನಬಹುದು. ಅನಿಮಲ್ ಚಿತ್ರದಲ್ಲಿ ಗೀತಾಂಜಲಿ ಪಾತ್ರ ಮಾಡಿರುವ ರಶ್ಮಿಕಾರ 'ಗೀತಾಂಜಲಿ' ಪೋಸ್ಟರ್ ಬಿಡುಗಡೆಯಾಗಿ ಜಗಮೆಚ್ಚುಗೆ ಗಳಿಸಿದೆ. 

ಗೀತಾ ಸೀರಿಯಲ್ ಮುಗಿತಿದೆ, ಇಲ್ಲ.. ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ ನೋಡಿ..!

ಅಂದಹಾಗೆ, ನಟಿ ರಶ್ಮಿಕಾ ರಣಬೀರ್ ಕಪೂರ್ ನಾಯಕತ್ವದ 'ಅನಿಮಲ್' ಚಿತ್ರದ ಬಳಿಕ ಮತ್ತೊಂದು ಬಾಲಿವುಡ್ ಚಿತ್ರದಲ್ಲಿಯೂ ನಟಿಸಲಿದ್ದಾರೆ. ಅದು ವಿಕ್ಕಿ ಕೌಶಲ್ ನಾಯಕರಾಗಿರುವ ಚಿತ್ರ. ಲಕ್ಷ್ಮಣ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ರಶ್ಮಿಕಾ ನಾಯಕಿಯಾಗಿ ಅವಕಾಶ ಪಡೆದಿದ್ದಾರೆ. ಅಲ್ಲಿಗೆ, ನಟಿ ರಶ್ಮಿಕಾರ ಬಾಲಿವುಡ್ ಜರ್ನಿ ಸದ್ಯಕ್ಕಂತೂ ಬೂಮ್‌ನಲ್ಲಿದೆ ಎನ್ನಬಹುದು. ತಮಿಳಿನಲ್ಲಿ ಪುಷ್ಪಾ-2 ದಲ್ಲಿ ಕೂಡ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲಿಗೆ, ತಮ್ಮ ವಿರುದ್ಧ ಟೀಕೆಗಳಿಗೆ 'ಬ್ರಹ್ಮಾಸ್ತ್ರ'ದಂತೆ ಒಂದಾದ ಬಳಿಕ ಮತ್ತೊಂದರಂತೆ ಬಾಲಿವುಡ್‌ನಲ್ಲಿ ಅವಕಾಶ ಪಡೆಯುವ ಮೂಲಕ ರಶ್ಮಿಕಾ ಉತ್ತರ ಕೊಡುತ್ತಿದ್ದಾರೆ. 

 

 

click me!