Rashmika Mandanna: ಡೆಲಿವರಿ ಗರ್ಲ್ ಆದ್ರು ರಶ್ಮಿಕಾ ಮಂದಣ್ಣ!

Suvarna News   | Asianet News
Published : Jan 04, 2022, 06:30 PM ISTUpdated : Jan 04, 2022, 06:36 PM IST
Rashmika Mandanna: ಡೆಲಿವರಿ ಗರ್ಲ್ ಆದ್ರು ರಶ್ಮಿಕಾ ಮಂದಣ್ಣ!

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ಡೆಲಿವರಿ ಗರ್ಲ್ ಯೂನಿಫಾರ್ಮ್ ತೊಟ್ಟು, ಸ್ಕೂಟಿ ಏರಿ ಒಂದಿಷ್ಟು ಮನೆಗಳಿಗೆ ಪಿಜ್ಜಾ ಡೆಲಿವರಿ ಮಾಡಿದ್ದಾರೆ. ಕಿರಿಕ್ ಹುಡುಗಿಯ ಹೊಸ ಅವತಾರ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ. ಬಾಲಿವುಡ್‌ಗೂ (Bollywood) ಎಂಟ್ರಿ ಕೊಟ್ಟು ಅಲ್ಲಿನ ಜನರ ಮನ ಗೆದ್ದಿದ್ದಾರೆ. ಈ ಕೊಡಗಿನ ಹುಡುಗಿ ನಟನೆಯ ಮೊದಲ ಹೆಜ್ಜೆ ಇಟ್ಟಿದ್ದು ಕನ್ನಡದಲ್ಲಿ. ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೆ 'ಕಿರಿಕ್ ಪಾರ್ಟಿ' ಅನ್ನೋ ಸಿನಿಮಾ ಮಾಡಿ ತನ್ನ ಕ್ಯೂಟ್‌ನೆಸ್ ಮೂಲಕವೇ ಎಲ್ಲೆಡೆ ಗುರುತಿಸಿಕೊಂಡರು. ಈ ಚಿತ್ರದ ವೇಳೆಗೆ ಚಿತ್ರದ ನಾಯಕ ರಕ್ಷಿತ್ ಜೊತೆಗೆ ಲವ್ ಆಯ್ತು. ಇನ್ನೊಂದು ಕಡೆ ಸಿನಿಮಾ ಆಫರ್‌ಗಳು ಹೆಚ್ಚುತ್ತಲೇ ಹೋದವು. ಕನ್ನಡದಲ್ಲಿ ಸ್ಟಾರ್‌ ನಟರ ಜೊತೆಗಿನ ಚಿತ್ರಗಳ ಜೊತೆಗೆ ತೆಲುಗು, ತಮಿಳು, ಆಮೇಲೆ ಬಾಲಿವುಡ್ ಜಗತ್ತೂ ರಶ್ಮಿಕಾರನ್ನು ಕೈ ಬೀಸಿ ಕರೆಯಿತು. ಇತ್ತೀಚೆಗೆ ರಶ್ಮಿಕಾಗೆ ಬಹಳ ಹೆಸರು ತಂದುಕೊಟ್ಟಿದ್ದು ಪುಷ್ಪಾ (Pushpa) ಸಿನಿಮಾ. ಇದರಲ್ಲಿನ ಇವರ ನಟನೆ ಇಂಡಿಯಾದ ಗಮನ ಸೆಳೆಯಿತು. ಅಲ್ಲು ಅರ್ಜುನ್‌ (Allu Arjun) ನಂಥಾ ನಟನೆ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡ ರಶ್ಮಿಕಾಗೆ ಇದೀಗ ಸಾಲು ಸಾಲು ಸಿನಿಮಾಗಳು ಕೈ ಬೀಸಿ ಕರೆಯುತ್ತವೆ. 

ಬಾಲಿವುಡ್‌ನ Single Mothers ತಮ್ಮ ತಾಯ್ತನದ ಬಗ್ಗೆ ಹೇಳುವುದೇನು?

ಈ ನಡುವೆ ರಶ್ಮಿಕಾ ಜಾಹೀರಾತು ಜಗತ್ತಿಗೂ ಎಂಟ್ರಿ ಕೊಡ್ತಾರೆ. ಈ ಕೊಡಗಿನ ಹುಡುಗಿ ಕಾಲಿಟ್ಟಲ್ಲೆಲ್ಲ ಯಶಸ್ಸು ಸಿಗುತ್ತೆ. ದೊಡ್ಡ ದೊಡ್ಡ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ನಟಿಸಿ ಈ ಫೀಲ್ಡ್‌ನಲ್ಲೂ ಫೇಮಸ್ ಆಗ್ತಾರೆ. ಆಗೀಗ ವಿವಾದಗಳೂ ಆಗುತ್ತವೆ. ಇತ್ತೀಚೆಗೆ ವಿವಾದ ಆಗಿದ್ದು ಒಳ ಉಡುಪಿನ ಜಾಹೀರಾತು. ಈ ಜಾಹೀರಾತಿನಲ್ಲಿ ವಿಕ್ಕಿ ಕೌಶಲ್‌ ಜೊತೆಗೆ ರಶ್ಮಿಕಾ ಕೊಂಚ ತುಂಟತನದ ನಟನೆ ನೀಡಿದ್ದರು. ಯೋಗ ಟೀಚರ್ ಆಗಿದ್ದು ವಿಕ್ಕಿ ಒಳಚೆಡ್ಡಿ ಸ್ಟ್ರಿಪ್ ನೋಡುವ ಉದ್ದೇಶದಿಂದ ಮ್ಯಾಟ್ ಎತ್ತರದಲ್ಲಿ ಇಡುವುದು, ಆ ಬಗೆಯ ಯೋಗ ಪೋಸ್ ಕಲಿಸುವುದು ಹೀಗೆ. ರಶ್ಮಿಕಾ ಇಂಥಾ ಆಡ್‌ನಲ್ಲಿ ನಟಿಸಬಾರದಿತ್ತು ಅನ್ನೋ ಮಾತುಗಳು ಬಂದವು. ಆದರೆ ರಶ್ಮಿಕಾ ಇದನ್ನೊಂದು ಪಾತ್ರವಾಗಿ ಮಾಡಿದರೆ ಹೊರತು ಇಂಥಾ ಕಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಜಾಹೀರಾತಿನಲ್ಲಿ ಕಾಣಿಸಿಕೊಳ್ಳೋದು ಮಾತ್ರ ಅಲ್ಲ, ರಶ್ಮಿಕಾ ಹಲವಾರು ಪ್ರಾಡಕ್ಟ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಸಹ ಆಗಿದ್ದಾರೆ. 

ಡಿಲೀಟ್ ಆದ ದೃಶ್ಯ ಬಿಡುಗಡೆ ಮಾಡಿದ Pushpa ತಂಡ, ವಿಡಿಯೋ ನೋಡಲು ಮುಗಿಬಿದ್ದ ಜನ!

ಇಂಥಾ ಹುಡುಗಿ ರಶ್ಮಿಕಾ ಮೊನ್ನೆ ಇದೆಲ್ಲ ಬಿಟ್ಟು ಫುಡ್‌ ಡೆಲಿವರಿ ಗರ್ಲ್ ಆದರು. ಇದು ಸಿನಿಮಾದಲ್ಲಿ ಅವರ ಪಾತ್ರ ಖಂಡಿತಾ ಅಲ್ಲ. ಒಂದು ಫುಡ್‌ ಡೆಲಿವರಿ ಕಂಪನಿಯ ಟೀ ಶರ್ಟ್ ತೊಟ್ಟು, ಮಾಸ್ಕ್ ಹಾಕಿಕೊಂಡು, ಹೆಲ್ಮೆಟ್ ಏರಿಸಿ ಸ್ಕೂಟಿ ಹತ್ತಿ ಫುಡ್ ಡೆಲಿವರಿಗೆ ಮುಂದಾಗಿದ್ದಾರೆ. ಅಪಾರ್ಟ್ ಮೆಂಟ್ ಗಳ ಕೆಲವೊಂದು ಮನೆಗಳಿಗೆ ಫುಡ್‌ ಡೆಲಿವರಿ ಮಾಡಿದ್ದಾರೆ. ಮನೆ ಬಾಗಿಲಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕಂಡು ಜನ ಫುಡ್ ಡೆಲಿವರಿ ತಗೊಳ್ಳೋದಾ, ಸೆಲ್ಫಿ ಕ್ಲಿಕ್ಕಿಸೋದಾ, ಅವರನ್ನು ಮನೆಯೊಳಗೆ ಕರೆಯೋದಾ ಅಂತ ಗೊತ್ತಾಗದೇ ಒಂದು ಕ್ಷಣ ತಬ್ಬಿಬ್ಬಾಗಿ ನಿಂತರು. ಯಾವ ಹಮ್ಮು ಬಿಮ್ಮ ಇಲ್ಲದೇ ಜನರ ಜೊತೆಗೆ ಬೆರೆತ ಪುಷ್ಪ ಹುಡುಗಿ ಫುಡ್‌ ಡೆಲಿವರಿ ಕೊಡ್ತಾನೇ ಇದ್ದರು. 

Celebrity Income : ಐಟಂ ಸಾಂಗ್‌ನಿಂದ ಹೆಸರು ಮಾಡಿದ ಮಲೈಕಾ ನಿವ್ವಳ ಆದಾಯ ಕೇಳಿದ್ರೆ ದಂಗಾಗ್ತೀರಿ!

ಅಷ್ಟಕ್ಕೂ ಅಲ್ಲಾಗಿದ್ದು ಏನು ಅನ್ನೋ ಗೊಂದಲ ನಿಮಗಿರಬಹುದು. ಇದು ಮೆಕ್‌ ಡೊನಾಲ್ಡ್‌ನ (Mcdonald) ಪ್ರಚಾರದ ಹೊಸ ವರಸೆ. ರಶ್ಮಿಕಾ ಮೆಕ್ ಡಿ ಗೆ ಪ್ರಚಾರ ರಾಯಭಾರಿ. ಮೆಕ್‌ ಡಿಯ ಹೊಸ ಜಾಹೀರಾತಿಗಾಗಿ ಅವರು ಈ ಥರ ಕಸರತ್ತು ಮಾಡಿದ್ದಾರೆ. ಯಾವುದೋ ಮೂಲೆಯಲ್ಲಿದ್ದ ಹಿಡನ್ ಕ್ಯಾಮರಾದಲ್ಲಿ ಈ ಎಲ್ಲವೂ ಸೆರೆಯಾಗಿವೆ. ಈ ವೀಡಿಯೋವನ್ನು ಮೆಕ್‌ ಡೊನಾಲ್ಡ್‌ ತನ್ನ ಇನ್‌ಸ್ಟಾದಲ್ಲಿ ಶೇರ್‌ ಮಾಡಿದೆ. ದಿ ರಶ್ಮಿಕಾ ಮೀಲ್ ಅನ್ನೋ ಕಾಂಸೆಪ್ಟ್‌ನಲ್ಲಿ ಮೆಕ್‌ ಡಿ ಜಾಹೀರಾತು ನೀಡಿತ್ತು. ಇದರಲ್ಲಿ ರಶ್ಮಿಕಾ ಅವರೇ ಈ ಊಟ ಮಾಡೋದು ಹೇಗೆ ಅನ್ನೋದನ್ನು ತಿಳಿಸಿದ್ದರು. ಇದೀಗ 'ದಿ ರಶ್ಮಿಕಾ ಮೀಲ್‌' ಅನ್ನು ಆರ್ಡರ್ ಮಾಡಿದವರಿಗೆ ರಶ್ಮಿಕಾನೇ ಮನೆಗೆ ಊಟ ಅಂದುಕೊಟ್ಟು ಪ್ಲೆಸೆಂಟ್ ಸರ್ಪ್ರೈಸ್ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!