ಸಾರ್ವಜನಿಕ ಪ್ರದೇಶದಲ್ಲಿ ಜನರೆಲ್ಲರ ಮಧ್ಯೆಯೇ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮೂತ್ರ ವಿಸರ್ಜಿಸಿದ್ದಾರಾ ? ವಿಡಿಯೋ ತುಣುಕೊಂದು ಎಲ್ಲೆಡೆ ವೈರಲ್ ಆಗಿದೆ
ಏರ್ಪೋರ್ಟ್‌ನ ವೈಟಿಂಗ್ ಏರಿಯಾದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿರುವ ವ್ಯಕ್ತಿ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಎಂದು ಹೇಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆದ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ಕಾಣಬಹುದು. ಒಬ್ಬ ವಿಚಿತ್ರ ಮುಖದಲ್ಲಿ ನಡುಗುತ್ತಾ ಅತ್ತಿದ್ದ ಓಡಾಡುವುದನ್ನು ಕಾಣಬಹುದು. ನಂತರದಲ್ಲಿ ಆತ ಅಲ್ಲಿಯೇ ಎಲ್ಲರ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಾನೆ.
ಆರ್ಯನ್ ಖಾನ್(Aryan Khan) ಮುಂಬೈ ಕ್ರೂಸ್ ಡ್ರಗ್ಸ್ ಕೇಸ್‌ನಲ್ಲಿ ಎನ್‌ಸಿಬಿಯಿಂದ ಅರೆಸ್ಟ್ ಆದ ಘಟನೆ ಹಿನ್ನೆಲೆಯಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಜೈಲು ಸೇರಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಡ್ರಗ್ಸ್ ಕೇಸ್‌ನಿಂದ ಭಾರೀ ಸುದ್ದಿಯಾಗ ಆರ್ಯನ್ ಖಾನ್ ಅವಎಢ ಸಾರ್ವಜನಿಕವಾಗಿ ಮೂರ್ತ ಮಾಡಿದ್ದಾರೆ ಎಂದು ವಿಡಿಯೋವನ್ನು ಶೇರ್ ಮಾಡಲಾಗಿತ್ತು.
ಮಗನ ಡ್ರಗ್ಸ್ ಕೇಸ್ ನಂತರ ಮತ್ತೆ ಕೆಲಸ ಶುರು ಮಾಡಿದ ಶಾರೂಖ್
ಆದರೆ ಈ ವಿಡಿಯೋದಲ್ಲಿ ಆರ್ಯನ್ ಇರುವುದು ಸುಳ್ಳು ಎಂಬುದು ಈಗ ರಿವೀಲ್ ಆಗಿದೆ. ವರದಿಗಳ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಬ್ರಾನ್ಸನ್ ಪೆಲ್ಲೆಟಿಯರ್, 'ಟ್ವಿಲೈಟ್' ನ ನಟ, ಮದ್ಯ ಸೇವಿಸಿದ ಸ್ಥಿತಿಯಲ್ಲಿ, 2012 ರಲ್ಲಿ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲಾಬಿಯ ನೆಲದ ಮೇಲೆ ಮೂತ್ರ ವಿಸರ್ಜಿಸಿದ್ದರು. ಇದೇ ವಿಡಿಯೋ ಈಗ ಮತ್ತೊಮ್ಮೆ ಸದ್ದು ಮಾಡಿದೆ.
😜😇😇😇
आर्यन खान अमेरिका के एयरपोर्ट पर
शाहरुख खान के बेटे
विदेशों में बाप और देश का नाम डूबा रहें हैं !
"लानत है ऐसे लोगों पर ! pic.twitter.com/Z6miMOwZkH
ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್, ಮಾದಕ ವ್ಯಸನಿಯಾಗಿದ್ದಾನೆ ಮತ್ತು ಮೂತ್ರವನ್ನು ನಿಯಂತ್ರಿಸಲು ಸಾಧ್ಯವಿಲ್ಲದೆ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ .ಅವರು ವಿಮಾನ ನಿಲ್ದಾಣದ ಲಾಬಿಯ ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ. ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿವಿಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಈಗ ಏಕೆ ಮೌನವಾಗಿದ್ದಾರೆ ಎಂದು ವಿಡಿಯೋದಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಇದೀಗ ಈ ವಿಡಿಯೋದಲ್ಲಿರುವುದು ಆರ್ಯನ್ ಖಾನ್ ಅಲ್ಲ ಎನ್ನುವುದು ರಿವೀಲ್ ಆಗಿದೆ. ಬದಲಿಗೆ ಹಳೆಯ ವಿಡಿಯೋದಲ್ಲಿ ಆರ್ಯನ್ ಇದ್ದಾರೆಂಬ ಸುದ್ದಿ ಹಬ್ಬುತ್ತಿದೆ ಅಷ್ಟೆ.
ಡಿಸೆಂಬರ್ 2012 ರಲ್ಲಿ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಪೆಲ್ಲೆಟಿಯರ್ ಹೆಚ್ಚು ಅಮಲೇರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ವಿಮಾನದಿಂದ ತೆಗೆದು ಹೊರಹಾಕಲಾಗಿದೆ ಎಂದು ವರದಿಯಾಗಿದೆ. ಟರ್ಮಿನಲ್‌ನಲ್ಲಿ ಶಾಂತವಾಗಲು ಅವರಿಗೆ ಸಮಯವನ್ನು ನೀಡಲಾಯಿತು. ಸ್ವಲ್ಪ ಸಮಯದ ನಂತರ, ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವುದು ಕಂಡುಬಂದಿತು. ನಂತರ ಅವರು ತಪ್ಪಿತಸ್ಥರೆಂದು ಸಾಬೀತಾಯಿತು. ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಯಿತು.
ಲೈಫ್ ಕೋಚ್
ಶಾರುಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಖಾನ್(Aryan Khan) ಶೀಘ್ರದಲ್ಲೇ ಬಾಲಿವುಡ್‌ನ(Bollywood) ಖ್ಯಾತ ಲೈಫ್ ಕೋಚ್ ಅರ್ಫೀನ್ ಖಾನ್ ಅವರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ವರದಿಗಳ ಪ್ರಕಾರ ಶಾರೂಖ್ ಮತ್ತು ಗೌರಿ ಜೈಲಿನಲ್ಲಿ ತಮ್ಮ ಪುತ್ರ ಅನುಭವಿಸಿದ ಮಾನಸಿಕ ಕಿರಿಕಿರಿ ಮೆಟ್ಟಿನಿಂತು ಮೂವ್ ಆನ್ ಆಗಲು ಸಹಾಯ ಮಾಡಲು ಅರ್ಫೀನ್ ಅವರನ್ನು ನಿಯೋಜಿಸಲಾಗಿದೆ.