
ಅನಿಮಲ್ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್ ಸುದ್ದಿಯಲ್ಲಿದ್ದಾರೆ. ನಟ ರಣಬೀರ್ ಕಪೂರ್ ಜೊತೆಗಿನ ಲಿಪ್ಲಾಕ್ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಇದರಜೊತೆ, ನಿನ್ನೆಯಷ್ಟೇ ರಶ್ಮಿಕಾ ಪಾಲಿಗೆ ಇನ್ನೊಂದು ಸುದಿನ. ಅದೇನೆಂದರೆ, ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಅವರ ಹೆಸರು ಸೇರ್ಪಡೆಗೊಂಡಿದ್ದು, ನಟಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಹೌದು! ಪ್ರತಿವರ್ಷವೂ ಫೋರ್ಬ್ಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 30 ವರ್ಷ ವಯಸ್ಸಿನ ಒಳಗಿನವರ ಸಾಧಕರ ಪಟ್ಟಿಯನ್ನೂ ಅದು ಬಿಡುಗಡೆ ಮಾಡುತ್ತದೆ. ಅದರಲ್ಲಿ ಅನಿಮಲ್ ಹಸಿಬಿಸಿ ನಟಿ ರಶ್ಮಿಕಾ ಹೆಸರೂ ಸೇರ್ಪಡೆಗೊಂಡಿದೆ. ಈ ಮೂಲಕ ನ್ಯಾಷನಲ್ ಕ್ರಷ್ ಎನಿಸಿಕೊಂಡಿರುವ ರಶ್ಮಿಕಾಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಏಕೆಂದರೆ ಈ ಪಟ್ಟಿಯಲ್ಲಿ ವಿಶ್ವದ ಸಾಧಕರ ಹೆಸರು ಇರುತ್ತದೆ. ಇದರಲ್ಲಿ 30 ಜನರು ಇರುತ್ತಾರೆ. ಮನೊರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸ್ಥಾನ ಸಿಕ್ಕಿದೆ. ಈಚೆಗಷ್ಟೇ ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್ ತಾರೆಯರ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ರಶ್ಮಿಕಾ ಎಂಟನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.
ಈ ಖುಷಿಯಲ್ಲಿ ಇರುವ ನಟಿ ಈಗ ಏಕಾಏಕಿ ನೆಟ್ಟಿಗನ ಮೇಲೆ ಗರಂ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುವ ದೊಡ್ಡ ವರ್ಗವೇ ಇದೆ. ಇಂಟರ್ನೆಟ್ಗಳಲ್ಲಿಯೂ ಸಾಕಷ್ಟು ಇವರ ಮೇಲೆ ಟ್ರೋಲ್ ಆಗುತ್ತಲೇ ಇರುತ್ತದೆ. ಆದರೆ ಬೇರೆಯ ನಟ-ನಟಿಯರಂತೆ ಈ ಗಾಳಿಸುದ್ದಿ, ಗಾಸಿಪ್, ಪ್ರಶ್ನೆ, ಟ್ರೋಲ್ಗಳಿಗೆ ನಟಿ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇದೀಗ ನೆಟ್ಟಿಗನೊಬ್ಬ ಮಾಡಿರುವ ಕಮೆಂಟ್ಗೆ ರಶ್ಮಿಕಾ ಸಕತ್ ಗರಂ ಆಗಿದ್ದಾರೆ.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ
ಅಷ್ಟಕ್ಕೂ ಆಗಿದ್ದೇನೆಂದರೆ, ಈಚೆಗಷ್ಟೇ ರಶ್ಮಿಕಾ ಅವರ ಆಡವಾಳ್ಳು ಮೀಕು ಜೋಹಾರ್ಲು ಚಿತ್ರ ಬಿಡುಗಡೆಯಾಗಿದೆ. ಆದರೆ ಈ ಚಿತ್ರದಲ್ಲಿ ರಶ್ಮಿಕಾ ನಟಿಸಬಾರದಿತ್ತು ಎನ್ನುವುದು ಬಹುತೇಕ ಫ್ಯಾನ್ಸ್ ಅಭಿಮತ. ಸದ್ಯ ತೆಲುಗು, ತಮಿಳು, ಹಿಂದಿಯ ಸ್ಟಾರ್ ನಟರ ಜೊತೆ ಸಿನಿಮಾ ಮಾಡುತ್ತಿರುವ ಅವರಿಗೆ 'ಆಡವಾಳ್ಳು ಮೀಕು ಜೋಹಾರ್ಲು' ಚಿತ್ರವನ್ನು ಒಪ್ಪಿಕೊಳ್ಳಲೇಬಾರದು ಎಂದು ಚಿತ್ರ ನೋಡಿದವರು ಸಲಹೆ ನೀಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತಾಯಿಯಾಗುವವರು ಮನೆಅಳಿಯ ಆಗುವಂತಹ ಹುಡುಗನನ್ನು ಹುಡುಕಿ ಮಗಳಿಗೆ ಮದುವೆ ಮಾಡಬೇಕು ಎಂದಿರುತ್ತಾರೆ. ಈ ಕುರಿತು ಕಥೆ ಸಾಗುತ್ತದೆ. ಇದರಲ್ಲಿ ರಶ್ಮಿಕಾ ಬೇಡವಾಗಿತ್ತು ಎನ್ನುವುದು ಅಭಿಮಾನಿಗಳ ಅಭಿಮತ.
ಇದೇ ರೀತಿ ಇವರ ಅಭಿಮಾನಿಯೊಬ್ಬ ರಶ್ಮಿಕಾ ಅವರೇ ಬರೆದಂತೆ, ನನಗೆ ಆಡವಾಳ್ಳು ಮೀಕು ಜೋಹಾರ್ಲು ಸ್ಕ್ರಿಪ್ಟ್ ಇಷ್ಟವಿಲ್ಲ. ಆದರೆ ನಾನು ಕಿಶೋರ್ ತಿರುಮಲ ಹಾಗೂ ಶರ್ವಾ ಅವರಿಂದಾಗಿ ಮಾತ್ರ ಸಿನಿಮಾ ಸೈನ್ ಮಾಡಿದೆ ಎಂದು ಬರೆದಿದ್ದಾರೆ. ಇದನ್ನು ನೋಡಿ ರಶ್ಮಿಕಾ ರೇಗಿದ್ದಾರೆ. ಇದನ್ನೆಲ್ಲಾ ಯಾರು ಹೇಳ್ತಾರೆ ನಿಮಗೆ? ಏಕೆ ಇಲ್ಲಸಲ್ಲದ್ದನ್ನೆಲ್ಲ ಪೋಸ್ಟ್ ಮಾಡುತ್ತೀರಿ? ನಾನು ಸ್ಕ್ರಿಪ್ಟ್ ನಂಬುವ ಕಾರಣಕ್ಕೆ ಮಾತ್ರ ಸಿನಿಮಾ ಮಾಡುತ್ತೇನೆ. ತಂಡದೊಂದಿಗೆ ಕೆಲಸ ಮಾಡುವುದು ಒಂದು ಹೆಮ್ಮೆ. ಈ ಗಾಸಿಪ್ ಎಲ್ಲ ಎಲ್ಲಿಂದ ಶುರುವಾಗುತ್ತದೆ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದಿದ್ದಾರೆ ನಟಿ.
ನಟಿ ಸೌಂದರ್ಯರ ಬಯೋಪಿಕ್ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.