'ದಿ ಗರ್ಲ್ ಫ್ರೆಂಡ್' ಪರಿಚಯಿಸಿದ ವಿಜಯ್ ದೇವರಕೊಂಡ; ಹೊರಬಿತ್ತು ರಶ್ಮಿಕಾ ಮಂದಣ್ಣ ಪ್ರೇಮಕಥನ!

By Shriram Bhat  |  First Published Dec 9, 2024, 7:03 PM IST

ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್ ಫ್ರೆಂಡ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರಶ್ಮಿಕಾ ಮತ್ತು ದೀಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರ ಪ್ರೇಮಕಥೆಯನ್ನು ಹೊಂದಿದೆ.


'ಪುಷ್ಪ-2' ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಪುಷ್ಪರಾಜ್ ನ ಮಡದಿ ಶ್ರೀವಲ್ಲಿಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಪ್ರೇಮಕಥೆ ಒಪ್ಪಿಸೋದಕ್ಕೆ ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 

ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ 'ದಿ ಗರ್ಲ್ ಫ್ರೆಂಡ್' ಟೀಸರ್ ಅನ್ನು ಪರಿಚಯಿಸಿದ್ದಾರೆ. ಟೀಸರ್ ಗೆ ಧ್ವನಿಯಾಗಿ, ದಿ ಗರ್ಲ್ ಫ್ರೆಂಡ್ ಹಾಗೂ ರಶ್ಮಿಕಾ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ. 'ದಿ ಗರ್ಲ್ ಫ್ರೆಂಡ್' ಟೀಸರ್ ಲ್ಲಿ ಪ್ರತಿ ದೃಶ್ಯವೂ ಆಕರ್ಷಕವಾಗಿದೆ. ನಾನು ಈ ಸಿನಿಮಾವನ್ನು ವೀಕ್ಷಿಸಲು ಕಾತರರಾಗಿದ್ದೇನೆ. 8 ವರ್ಷಗಳ ಹಿಂದೆ ರಶ್ಮಿಕಾ ಅವರನ್ನು 'ಸೆಟ್'ನಲ್ಲಿ ಭೇಟಿಯಾಗಿದ್ದೆ. ಆ ನಂತರ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಆದರೂ ಅವರು ವಿನಮ್ರವಾಗಿದ್ದಾರೆ.

Tap to resize

Latest Videos

ರಾಹುಲ್, ಸುಂದರ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರ ಹೃದಯ ಸ್ಪರ್ಶಿಸಲಿದ್ದಾರೆ ಎಂದು ಭಾವಿಸಿದ್ದೇನೆ. ಇಡೀ ದಿ ಗರ್ಲ್ ಫ್ರೆಂಡ್ ತಂಡಕ್ಕೆ ಒಳ್ಳೆಯದಾಗಲಿ' ಎಂದಿದ್ದಾರೆ. 'ದಿ ಗರ್ಲ್ ಫ್ರೆಂಡ್' ನಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.  ರಾವ್ ರಮೇಶ್, ರೋಹಿಣಿ ಸೇರಿದಂತೆ ಮತ್ತಿತರ ಕಲಾವಿದರು ಸಿನಿಮಾದಲ್ಲಿದ್ದಾರೆ. ಪ್ರೇಮಕಥೆ ಜೊತೆಗೆ ಭಾವಾನಾತ್ಮಕ ಅಂಶಗಳನ್ನು ಸೇರಿಸಿ ದಿ ಗರ್ಲ್ ಫ್ರೆಂಡ್ ಟೀಸರ್ ಕಟ್ ಮಾಡಲಾಗಿದೆ. 

ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರವನ್ನು ಪ್ರಸ್ತುಪಡಿಸುತ್ತಿದ್ದು, ಗೀತಾ ಆರ್ಟ್ಸ್, ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿಯಲ್ಲಿ ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ನಿರ್ಮಿಸಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಅವರು ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪುಷ್ಪ-2 ಸಿನಿಮಾ ನೋಡಿದವರೆಲ್ಲಾ ರಶ್ಮಿಕಾ ಪರ್ಫಾರ್ಮೆನ್ಸ್​ನ ಕೊಂಡಾಡ್ತಾ ಇದ್ದಾರೆ. ಗ್ಲಾಮರ್ ಗಮ್ಮತ್ತಿನ ಜೊತೆಗೆ ಅಭಿನಯದಲ್ಲೂ ಮೋಡಿ ಮಾಡಿರೋ ಶ್ರೀವಲ್ಲಿಗೆ ಶಹಬ್ಬಾಷ್ ಅಂತಿದ್ದಾರೆ. ಈ ನಡುವೆ ರಶ್ಮಿಕಾ ದೇವರಕೊಂಡ ಫ್ಯಾಮಿಲಿಯನ್ನ ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದಾರೆ. ಪುಷ್ಪನ ಜೊತೆ ರಶ್ಮಿಕಾ ಹಸಿ ಬಿಸಿ ಸೀನ್ಸ್ ನೋಡಿ ದೇವರಕೊಂಡ ಫ್ಯಾಮಿಲಿ ಏನಂದ್ರು..? ಆ ಕುರಿತ ಮಸ್ತ್ ಮಸಾಲ ಸ್ಟೋರಿ ಇಲ್ಲಿದೆ ನೋಡಿ.

ಹೌದು, ಈಗ ಎಲ್ಲಿ ನೋಡಿದ್ರೂ ಪುಷ್ಪನದ್ದೇ ಜಪ. ಗುರುವಾರ ತೆರೆಗೆ ಬಂದ ಪುಷ್ಪ-2 ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಅಕ್ಷರಶಃ ವೈಲ್ಡ್ ಫೈರ್​ನಂತೆ ಧಗಧಗಿಸಿದೆ. ಎರಡೇ ದಿನಕ್ಕೆ 400 ಕೋಟಿ ಕ್ಕಬ್ ಸೇರಿ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ಇದೀಗ ನಾಲ್ಕನೇ ದಿನಕ್ಕೆ ಬರೋಬ್ಬರಿ 700 ಕೋಟಿಗೂ ಮೀರಿ ಗಳಿಕೆ ದಾಖಲಿಸಿ ಎಲ್ಲರ ನಿರೀಕ್ಷೆ ಮೀರಿ ಮುನ್ನುಗ್ಗುತ್ತಿದೆ. 

ಪುಷ್ಪ-2ನಲ್ಲಿ ಪುಷ್ಪರಾಜ್ ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ ಬಗ್ಗೆ ಎಷ್ಟು ಮೆಚ್ಚುಗೆ ಕೇಳಿ ಬರ್ತಾ ಇದೆಯೋ ಶ್ರೀವಲ್ಲಿ ರಶ್ಮಿಕಾ ನಟನೆಗೂ ಅಷ್ಟೇ ಮೆಚ್ಚುಗೆ ಸಿಕ್ತಾ ಇದೆ. ಪುಷ್ಪನ ಮುದ್ದು ಮಡದಿಯಾಗಿ  ಮಿಂಚಿರೋ ರಶ್ಮಿಕಾ ಒಂದು ದೃಶ್ಯದಲ್ಲಿ ಎಲ್ಲರನ್ನೂ ಸೈಡ್​ಗೆ ಸರಿಸುವಂತೆ ಪರ್ಫಾರ್ಮ್ ಮಾಡಿದ್ದಾರೆ.

ತನ್ನ ಪಾತ್ರಕ್ಕೆ ಸಿಕ್ತಾ ಇರೋ ಪ್ರಶಂಸೆಯಿಂದ ರಶ್ಮಿಕಾ ಫುಲ್ ಖುಷ್ ಆಗಿದ್ದಾರೆ. ತನ್ನ ಅಕೌಂಟ್​ಗೆ ಮತ್ತೊಂದು ಹಿಟ್ ಸೇರಿಸಿಕೊಂಡಿರೋ ಈ ಬ್ಯೂಟಿ ಮತ್ತಷ್ಟು ಸಂಭಾವನೆ ಹೆಚ್ಚಿಸೋ ಲೆಕ್ಕಾಚಾರಲ್ಲಿದ್ದಾರೆ. 

click me!