ಹ್ಯಾಟ್ರಿಕ್ ದಾಖಲೆಯತ್ತ ರಶ್ಮಿಕಾ ಮಂದಣ್ಣ ಹೆಜ್ಜೆ; ಈ ರೆಕಾರ್ಡ್ ಫಿಕ್ಸ್ ಎಂದ ಶ್ರೀವಲ್ಲಿಯ ಫ್ಯಾನ್ಸ್‌

By Mahmad Rafik  |  First Published Jul 6, 2024, 8:08 PM IST

ರಶ್ಮಿಕಾ ಮಂದಣ್ಣ ಹ್ಯಾಟ್ರಿಕ್ ದಾಖಲೆ ಬರೆಯಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ದಾಖಲೆ ಬರೆದಿದ್ದೇ ಆದ್ರೆ ರಶ್ಮಿಕಾ ಮಂದಣ್ಣಗೆ ಡಿಸೆಂಬರ್ ಲಕ್ಕಿ ಅನ್ನೋದು ಖಚಿತವಾಗಲಿದೆ.


ಬೆಂಗಳೂರು: ಕೊಡಗಿನ ಕುವರಿ, ಕನ್ನಡತಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Actress Rashmika Mandanna) ದಕ್ಷಿಣ ಭಾರತ ಸಿನಿ ಅಂಗಳದ ಟಾಪ್ ನಟಿಯರ ಪಟ್ಟಿಯಲ್ಲಿದೆ. ತೆಲುಗು, ತಮಿಳು, ಹಿಂದಿ ಸಿನಿಮಾ ನಿರ್ಮಾಕರು ಶ್ರೀವಲ್ಲಿ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಇತ್ತ ಸಲ್ಮಾನ್ ಖಾನ್ ನಟಿಸುತ್ತಿರುವ ಸಿಕಂದರ್ ಸಿನಿಮಾಗೂ ಸಾನ್ವಿ ಟೀಚರ್ ಆಯ್ಕೆಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚ ಭಾಷೆ ತಾರೆಯಾಗಿ ರಶ್ಮಿಕಾ ಮಿಂಚುತ್ತಿದ್ದಾರೆ. ಸಿನಿಮಾ ಅಂಗಳದಲ್ಲಿ ಒಂದು ನಂಬಿಕೆ ಇದೆ. ಅದೇನಂದ್ರೆ ಕೆಲ ಸೂಪರ್‌ ಸ್ಟಾರ್‌ಗಳು ನಿಗದಿತ ತಿಂಗಳು, ಹಬ್ಬ, ದಿನಾಂಕದಂದೇ ಸಿನಿಮಾ ಬಿಡುಗಡೆ ಆಗಬೇಕೆಂದು ಬಯಸುತ್ತಾರೆ. ಅದು ತಮಗೆ ಶುಭ ದಿನ ಎಂದು ಕಲಾವಿದರ ನಂಬಿಕೆಯಾಗಿದೆ. ಸಲ್ಮಾನ್ ಖಾನ್ ನಟನೆಯ ಬಹುತೇಕ ಸಿನಿಮಾಗಳು ಈದ್ ದಿನವೇ ಬಿಡುಗಡೆಯಾಗುತ್ತದೆ .

ಇದೀಗ ಇದೇ ರೀತಿ ರಶ್ಮಿಕಾ ಮಂದಣ್ಣಗೆ ಡಿಸೆಂಬರ್ ತುಂಬಾನೇ ಲಕ್ಕಿ ತಿಂಗಳು ಎಂದು ಅಭಿಮಾನಿಗಳು ಹೇಳುತ್ತಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ ಹ್ಯಾಟ್ರಿಕ್ ದಾಖಲೆ ಬರೆಯಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ದಾಖಲೆ ಬರೆದಿದ್ದೇ ಆದ್ರೆ ರಶ್ಮಿಕಾ ಮಂದಣ್ಣಗೆ ಡಿಸೆಂಬರ್ ಲಕ್ಕಿ ಅನ್ನೋದು ಖಚಿತವಾಗಲಿದೆ. ಈ ಡಿಸೆಂಬರ್ ಸೆಂಟಿಮೆಂಟ್‌ನ್ನು ರಶ್ಮಿಕಾ ಸಹ ನಂಬ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. 

Tap to resize

Latest Videos

ಪ್ಯಾನ್ ಇಂಡಿಯಾ ಚಲನಚಿತ್ರ ಪುಷ್ಪ 2, ಕುಬೇರ, ಹಾಗೆಯೇ ದಿ ಗರ್ಲ್‌ಫ್ರೆಂಡ್‌ ಮತ್ತು ರೈನ್‌ಬೋ ಚಿತ್ರಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಸಿಕಂದರ್ ಜೊತೆಯಲ್ಲಿ ಚಾವಾ ಎಂಬ ಸಿನಿಮಾವನ್ನು ಸಹ ರಶ್ಮಿಕಾ ಒಪ್ಪಿಕೊಂಡಿದ್ದಾರಂತೆ. ಎರಡ್ಮೂರು ಚಿತ್ರಗಳು ಚರ್ಚೆಯ ಹಂತದಲ್ಲಿದ್ದು, ಅಂತಿಮ ಘೋಷಣೆ ಹೊರ ಬೀಳಬೇಕಿದೆ. ಜೂನಿಯರ್ ಎನ್‌ಟಿಆರ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಮೂವಿಗೂ ರಶ್ಮಿಕಾ ಹೆಸರು ಫೈನಲ್ ಆಗಿದೆ. ಈ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭಗೊಳ್ಳಲಿದೆ.

ಅಭಿಮಾನಿ ಪೋಸ್ಟಿಗೆ ಗೆ ರಶ್ಮಿಕಾ ಮಂದಣ್ಣ ಹಾರ್ಟ್ ಟಚಿಂಗ್ ಕಮೆಂಟ್

ಡಿಸೆಂಬರ್ ಲಕ್ಕಿ ಯಾಕೆ? 

ಈ ಹಿಂದೆ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ರಶ್ಮಿಕಾ ನಟನೆಯೆ ಎರಡೂ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಧೂಳೆಬ್ಬಿಸಿವೆ. ಮೂರು ವರ್ಷಗಳ ಹಿಂದೆ ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ನಿರೀಕ್ಷೆಗಿಂತಲೂ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಕೋವಿಡ್ ಕಾಲಘಟ್ಟದಲ್ಲಿ ಬಿಡುಗಡೆಯಾಗಿದ್ದು, ಮಾಹಾಮಾರಿ ಆತಂಕದಲ್ಲಿಯೂ ಜನರನ್ನು ಚಿತ್ರಮಂದಿರಕ್ಕೆ ಕರೆ ತಂದಿತ್ತು. 17 ಡಿಸೆಂಬರ್ 2021ರಂದು ಬಿಡುಗಡೆಯಾಗಿದ್ದು ಪುಷ್ಪ ದಿ ರೈಸ್ ಸಿನಿಮಾ (Pushpa: The Rise) 350 ಕೋಟಿ ರೂಪಾಯಿ ಹಣವನ್ನು ಕೆಲಕ್ಷನ್ ಮಾಡಿತ್ತು. ಈ ಚಿತ್ರದ ಮೂಲಕ ದೇಶದಾದ್ಯಂತ ಅಭಿಮಾನಿ ಬಳಗವನ್ನು ರಶ್ಮಿಕಾ ಮಂದಣ್ಣ ಸೃಷ್ಟಿಸಿಕೊಂಡರು.

ಕಳೆದ ವರ್ಷ ಡಿಸೆಂಬರ್ 1ರಂದು ಬಿಡುಗಡೆಯಾದ ಅನಿಮಲ್ ಚಿತ್ರ ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಲು ಸಹಾಯ ಮಾಡಿತು. ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ರಣ್‌ಬೀರ್ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದರು. ಈ ಚಿತ್ರ ಸಿನಿ ಅಂಗಳದಲ್ಲಿ ಹೊಸ ಟ್ರೆಂಡ್‌ನ್ನು ಸೃಷ್ಟಿಸಿತ್ತು. ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳು ಪ್ರಕಟವಾಗಿವೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೊಂಚ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದು ಗಮನಾರ್ಹವಾಗಿತ್ತು. 

Kubera ಚಿತ್ರದ ರಶ್ಮಿಕಾ ಫಸ್ಟ್ ಲುಕ್ ರಿವೀಲ್, ದುಡ್ಡಿನ ಸೂಟ್‌ಕೇಸ್ ನೋಡಿ ಕುತೂಹಲ ಹುಟ್ಟಿಸಿದೆ ಸಿನಿಮಾ!

ಪುಷ್ಪಾ ಸಿನಿಮಾದ ಮುಂದುವರಿದ ಭಾಗ-2 ಸಹ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಈಗಾಗಲೇ ಭಾರತದ ಸಿನಿ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಪುಷ್ಪಾ ದೊಡ್ಡಮಟ್ಟದ ಯಶಸ್ಸು ಕಾಣಲಿದೆ ಎಂದು ಸಿನಿ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವ ಕಾರಣದಿಂದಲೂ ಚಿತ್ರ ಹಿಟ್ ಆಗಲಿದೆ ಅನ್ನೋದು ರಶ್ಮಿಕಾ ಮಂದಣ್ಣ ಅಭಿಮಾನಿಗಳ ನಂಬಿಕೆಯಾಗಿದೆ.

click me!