ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಪ್ಪ-ಅಮ್ಮ ಆಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆಯೇ ಮಗುವಿನ ಹೆಸರು ಕೂಡ ರಿವೀಲ್ ಆಗಿದೆ. ಏನದು?
ಸದ್ಯ ಬಾಲಿವುಡ್ ಮಂದಿಯೆಲ್ಲಾ ನಟಿ ದೀಪಿಕಾ ಪಡುಕೋಣೆಯ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ನಲ್ಲಿ ದೀಪಿಕಾ ಅವರಿಗೆ ಡೆಲಿವರಿ ಆಗುವ ಸಾಧ್ಯತೆ ಇದೆ. ಈ ಕುರಿತು ಅವರೇ ಖುದ್ದು ಹಿಂದೆ ತಿಳಿಸಿದ್ದರು. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್ಗಳನ್ನೂ ಮುಗಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ ನಟಿ. ಆದರೆ ಇದಾಗಲೇ ನಟಿಗೆ ಸೀಮಂತ ಮಾಡಲಾಗಿದೆ ಎನ್ನುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದಾದ ಬಳಿಕ ಅವಧಿಗೆ ಮುನ್ನವೇ ಈಕೆಗೆ ಮಗು ಜನಿಸಿದೆ ಎಂದು ದೀಪಿಕಾ ಮತ್ತು ಪತಿ ರಣವೀರ್ ಜೊತೆಗೆ ಮಗುವಿರುವ ಫೋಟೋ ವೈರಲ್ ಆಗುತ್ತಿವೆ. ದೀಪಿಕಾ ಅವರು ಆಸ್ಪತ್ರೆಯಲ್ಲಿ ಇರುವುದನ್ನು ಈ ಫೋಟೋದಲ್ಲಿ ನೋಡಬಹುದು. ಇವೆಲ್ಲಾ ಫೇಕ್ ಫೋಟೋಗಳು ಎಂದು ಫ್ಯಾಕ್ಟ್ ಚೆಕ್ನಿಂದ ಗೊತ್ತಾಗಿದ್ದು, ಸದ್ಯ ಗರ್ಭಿಣಿ ದೀಪಿಕಾ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.
ಗಂಡುಮಗು ಎಂದು ಇದಾಗಲೇ ಜ್ಯೋತಿಷಿಗಳು ಹೇಳಿದ್ದರೂ, ತಮಗೆ ಹುಟ್ಟುವುದು ಗಂಡುಮಗು ಎಂದು ರಣವೀರ್ ಸಿಂಗ್ಗೆ ದೀಪಿಕಾ ಗರ್ಭಿಣಿಯಾಗುವ ಮೊದಲೇ ಗೊತ್ತಿತ್ತೋ ಎನ್ನುವಂತೆ ಗಂಡುಮಗುವಿನ ಹೆಸರನ್ನೇ ಫಿಕ್ಸ್ ಮಾಡಿಟ್ಟಿದ್ದಾರೆ! ಹೌದು. ರಣವೀರ್ ಗೆ ಒಂದು ಹೆಸರಿನ ಮೇಲೆ ಸಿಕ್ಕಾಪಟ್ಟೆ ವ್ಯಾಮೋಹವಂತೆ. ಅದೇ ಹೆಸರನ್ನು ಮಗನಿಗೆ ಇಡುವುದಾಗಿ ಅವರು ಹೇಳಿದ್ದರು. ಅಷ್ಟಕ್ಕೂ ರಣವೀರ್ ಈ ಮಗುವಿನ ಹೆಸರು ಫಿಕ್ಸ್ ಮಾಡಿದ್ದು ನಾಲ್ಕೈದು ವರ್ಷಗಳ ಮುಂಚೆ. ಆ ಹೆಸರೇ ಶೌರ್ಯವೀರ್ ಸಿಂಗ್’!
ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್
ಹೌದು. 2021-22ರಲ್ಲಿ ಹಿಂದಿಯ ಕಲರ್ಸ್ ಟಿ.ವಿಯಲ್ಲಿ ಪ್ರಸಾರ ಆಗ್ತಿದ್ದ ಬಿಗ್ ಪಿಕ್ಚರ್ ಷೋನಲ್ಲಿ ರಣವೀರ್ ಸಿಂಗ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ನಾನು ಮತ್ತು ದೀಪಿಕಾ ಮಗುವನ್ನು ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ. ಹೆಸರನ್ನು ಷಾರ್ಟ್ಲಿಸ್ಟ್ ಮಾಡುತ್ತಿದ್ದೇವೆ ಎಂದು ಅತಿಥಿಯಾಗಿ ಬಂದಿದ್ದ ರಣವೀರ್ ಹೇಳಿದ್ದರು. ಆ ಸಮಯದಲ್ಲಿ ಈ ಷೋಗೆ ಶೌರ್ಯವೀರ್ ಸಿಂಗ್ ಎನ್ನುವ ಸ್ಪರ್ಧಿ ಬಂದಿದ್ದರು. ಅವರ ಹೆಸರು ಕೇಳಿ ರಣವೀರ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿತ್ತು. ಆಗ ಅವರು, ನನಗೆ ಹೆಚ್ಚಾಗಿ ಹುಟ್ಟುವುದು ಗಂಡುಮಗುವೇ. ಗಂಡುಮಗು ಹುಟ್ಟಿದರೆ ಈ ಹೆಸರನ್ನೇ ಇಡುತ್ತೇನೆ ಎಂದಿದ್ದರು. ಈ ಹೆಸರನ್ನು ನಾನು ನಿಮ್ಮಿಂದ ಪಡೆಯಲಿ ಪರ್ಮಿಷನ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದ ರಣವೀರ್ , ಇದೇ ಹೆಸರನ್ನು ಮಗುವಿಗೆ ಇಡುವ ಇಚ್ಛೆ ವ್ಯಕ್ತಪಡಿಸಿದ್ದರು.
ಇತ್ತ ರಣವೀರ್ ಮಗುವಿನ ಹೆಸರಿನ ಯೋಚನೆಯಲ್ಲಿದ್ದರೆ, ಅತ್ತ ದೀಪಿಕಾ ಗರ್ಭಿಣಿಯೇ ಅಲ್ಲ ಎನ್ನುವ ವಿಷಯ ಹರಿದಾಡುತ್ತಿದೆ. ಹಲವರು ದೀಪಿಕಾ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈಕೆಯ ಹೊಟ್ಟೆ ದಿನಕ್ಕೊಂದು ರೂಪದಲ್ಲಿ ಕಾಣಿಸುತ್ತಿದೆ. ಆದ್ದರಿಂದ ಈಕೆ ಗರ್ಭಿಣಿ ಅಲ್ಲ ಎನ್ನುತ್ತಲೇ, ಬಾಲಿವುಡ್ ಅಂಗಳದಲ್ಲಿ ದೀಪಿಕಾ ಗರ್ಭಧಾರಣೆ ವಿಷಯ ಸಕತ್ ಸುದ್ದಿಯಲ್ಲಿದೆ. ಈಕೆ ಮುಂದಿನ ತಿಂಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳಲಿದ್ದಾರೆ ಎಂದು ಇಂದಿಗೂ ಕೆಲವರು ಹೇಳುತ್ತಿದ್ದಾರೆ.
ದೀಪಿಕಾ-ರಣವೀರ್ಗೆ ಗಂಡು ಮಗು, ಅಲ್ಲಲ್ಲಾ ಅದು ಹೆಣ್ಣು... ಮಗುವಿನ ಅಸಲಿಯತ್ತು ತಿಳಿದು ಫ್ಯಾನ್ಸ್ ಶಾಕ್!