ರೇಖಾ ಫೋಟೋ ವಿವಾದದ ಬೆನ್ನಲ್ಲೇ ಲೆಹಂಗಾದೊಳಗೆ ಕೈಹಾಕಿದ 'ಮಿಸ್ಟರ್​ ಬಚ್ಚನ್'​! ಏನಿದು ಗಲಾಟೆ?

By Suchethana D  |  First Published Aug 16, 2024, 4:02 PM IST

ಮಿಸ್ಟರ್​ ಬಚ್ಚನ್​ ಸಿನಿಮಾದ ವಿವಾದಗಳು ಮುಗಿಯುತ್ತಿಲ್ಲ. ರೇಖಾ ಫೋಟೋ ಬಳಸಿ ಪೇಚಿಗೆ ಸಿಲುಕಿದ್ದ ಸಿನಿಮಾ ತಂಡ ಈಗ  ನಾಯಕಿಯ ಲೆಹಂಗಾ ಒಳಗೆ ಕೈಹಾಕಿರೋ ವಿವಾದಕ್ಕೆ ಸಿಲುಕಿದೆ. ಏನಿದು ಘಟನೆ? 
 


ನಿರ್ದೇಶಕ ಹರೀಶ್ ಶಂಕರ್ ಅವರು, ಬಾಲಿವುಡ್​ ಬಿಗ್​-ಬಿ ಅಮಿತಾಭ್​ ಬಚ್ಚನ್​ ಅವರ ಬಹುದೊಡ್ಡ ಅಭಿಮಾನಿ. ಇದೇ ಕಾರಣಕ್ಕೆ ಅವರ ವಿಷಯವನ್ನೇ ಇಟ್ಟುಕೊಂಡು ಸಿನಿಮಾ ತಯಾರಿಸಿದ್ದು, ಅದಕ್ಕೆ ಮಿಸ್ಟರ್​ ಬಚ್ಚನ್​ ಎಂದು ಹೆಸರು ಇಡಲಾಗಿದೆ. ಈ ಚಿತ್ರ ನಿನ್ನೆ ಅಂದರೆ ಆಗಸ್ಟ್​ 15ರಂದು ಬಿಡುಗಡೆಯಾಗಿದೆ. ಆದರೆ ಬಿಡುಗಡೆಗೂ ಮುಂಚಿನಿಂದಲೇ ಈ ಚಿತ್ರ ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ! ಆಗಸ್ಟ್​ 15ರಂದು ಚಿತ್ರ ಬಿಡುಗಡೆಯಾಗುವ ತಯಾರಿ ನಡೆಸಿದ್ದ ಬೆನ್ನಲ್ಲೇ ಆಗಸ್ಟ್​ 14ರಂದು ಸೆನ್ಸಾರ್​ ಮಂಡಳಿಯೊಂದು ಆದೇಶ ಹೊರಡಿಸಿ ಇಡೀ ಚಿತ್ರತಂಡವನ್ನೇ ಬೆಚ್ಚಿ ಬೀಳಿಸಿತ್ತು. ಇದರಲ್ಲಿನ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಹೇಳಿದ್ದರಿಂದ ಹಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದಾದ ಬಳಿಕ ಚಿತ್ರ ಬಿಡುಗಡೆಯಾದ ಮೇಲೆ ಹಾಡೊಂದರ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದಾರೆ.

ಅಷ್ಟಕ್ಕೂ ಆಗಸ್ಟ್​ 14ರಂದು ಸೆನ್ಸರ್​ ಮಂಡಳಿ ಕಟ್​ ಮಾಡಿದ್ದಕ್ಕೆ ಕಾರಣ, ಈ ಚಿತ್ರದ ದೃಶ್ಯಗಳಲ್ಲಿ ಬಹುಕೇತ ಅಮಿತಾಭ್​ ಬಚ್ಚನ್​ ಅವರನ್ನು ಹೋಲುವ ರೀತಿ ಇದ್ದುದರಿಂದ.  ಅಮಿತಾಭ್​ ಅವರಿಗೆ  ಸಂಬಂಧಿಸಿದಂತೆ ಹಲವು ದೃಶ್ಯಗಳು, ಸಂಭಾಷಣೆಗಳು, ಹಾಡಿನ ಬಿಟ್​ಗಳು ಚಿತ್ರದಲ್ಲಿ ಇವೆ. ಆದರೆ ಕೆಲವೊಂದರಲ್ಲಿ  ಅಮಿತಾಭ್​ ಮತ್ತು ರೇಖಾ  ಚಿತ್ರಗಳನ್ನು  ಚಿತ್ರತಂಡ ಬಳಸಿಕೊಂಡಿದ್ದರಿಂದ ಸೆನ್ಸಾರ್​ ಮಂಡಳಿ ಈ ದೃಶ್ಯಗಳನ್ನು ಕಿತ್ತುಹಾಕಲು ಆದೇಶಿಸಿತ್ತು. ಅಮಿತಾಭ್​ ಮತ್ತು ರೇಖಾ ಅವರ ಲವ್​ಸ್ಟೋರಿ ಬಾಲಿವುಡ್​ ಪ್ರೇಮಿಗಳಿಗೆ ಹೊಸ ವಿಷಯವೇನಲ್ಲ. ಅಮಿತಾಭ್​ ಅವರ ನೆನಪಿನಲ್ಲಿಯೇ ಇಂದಿಗೂ ರೇಖಾ ಅವಿವಾಹಿತರಾಗಿಯೇ ಉಳಿದಿದ್ದರೆ, ಅಮಿತಾಭ್​ ಮಕ್ಕಳು, ಮೊಮ್ಮಕ್ಕಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ವಯಸ್ಸು 80 ಮೀರಿದರೂ ಆ್ಯಕ್ಟೀವ್​ ಆಗಿದ್ದಾರೆ. ಇಂದಿಗೂ ಇವರಿಬ್ಬರ ಸಂಬಂಧ ಚರ್ಚಿತ ವಿಷಯವಾಗಿಯೇ ಉಳಿದಿದೆ. 

Tap to resize

Latest Videos

ಪ್ರಕಾಶ್​ ರಾಜ್​ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್​ ಮಾತಿದು...

ಕುತೂಹಲದ ವಿಷಯ ಏನೆಂದರೆ, ಈ ಚಿತ್ರದಲ್ಲಿ ರೇಖಾ ಬದಲು  ಜಯಾ ಬಚ್ಚನ್ ಅವರ ಫೋಟೊ ಬಳಸುವಂತೆ ಸೆನ್ಸಾರ್​ ಮಂಡಳಿ ಸೂಚಿಸಿತ್ತು. ಕೊನೆಗೆ ಎಲ್ಲಾ ಬದಲಾವಣೆ ಮಾಡಿ ಚಿತ್ರ ಬಿಡುಗಡೆ ಮಾಡಲಾಗಿದೆ.  ಇದೀಗ ಹಾಡಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.  ಹರೀಶ್ ಶಂಕರ್ ನಿರ್ದೇಶನದ ಚಿತ್ರದಲ್ಲಿ  ರವಿತೇಜ ಮತ್ತು ಯುವ ನಟಿ ಭಾಗ್ಯಶ್ರೀ ಬೋರ್ಸೆ ಜೋಡಿಯಾಗಿದ್ದಾರೆ. ವಿಚಿತ್ರ ಎಂದರೆ ರವಿತೇಜ ಅವರಿಗೆ 56 ವರ್ಷ ವಯಸ್ಸು. ಮಗಳ ವಯಸ್ಸಿನ ನಾಯಕಿ ಭಾಗ್ಯಶ್ರೀಗೆ 25 ವರ್ಷ ವಯಸ್ಸು. ಈ ರೀತಿ ಸ್ಟಾರ್​ ನಟರು ತಮ್ಮ ಮಗಳ ವಯಸ್ಸಿನ ನಟಿಯ ಜೊತೆ ರೊಮಾನ್ಸ್​ ಮಾಡುವುದು, ರೊಮಾನ್ಸ್​ ಮೀರಿ ಹೋಗುವುದು ಬಾಲಿವುಡ್​ ಮಾತ್ರವಲ್ಲದೇ, ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಮಾಮೂಲಾಗಿಬಿಟ್ಟಿದೆ ಅನ್ನಿ. ಆದರೆ ಮಿಸ್ಟರ್​ ಬಚ್ಚನ್​ ಸಿನಿಮಾದಲ್ಲಿ ಈ ವಯಸ್ಸಿನ ಬಗ್ಗೆ ತಕರಾರು ಇಲ್ಲ. ಆದರೆ ನಟ, ಒಂದು ಹಾಡಿನಲ್ಲಿ ನಟಿಯ ಲೆಹಂಗಾದ ಒಳಗೆ ಕೈಹಾಕಿದ್ದು, ಅದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. 

"ಸಿತಾರ್" ಎನ್ನುವ ಹಾಡಿನಲ್ಲಿ  56 ವರ್ಷದ ರವಿತೇಜ ಅವರು 25 ವರ್ಷದ ಭಾಗ್ಯಶ್ರೀ ಬೋರ್ಸೆ ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ರವಿತೇಜ ಅವರು ನಟಿಯ ಲೆಹಂಗಾದ ಒಳಗೆ ಹಾಗೂ ಹಿಂದೆ ಇರುವ ಜೇಬಿನ ಒಳಗೆ ಕೈಹಾಕಿರುವುದು ವೀಕ್ಷಕರಿಗೆ ಕೋಪ ಬರಿಸಿದೆ. ಕೊನೆಯ ಪಕ್ಷ ವಯಸ್ಸಿನಂತೆ ನಡೆಸುಕೊಳ್ಳಬೇಕು ಎಂದು ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ರವಿತೇಜ ಅವರು ಶೂಟಿಂಗ್​ ಮಾಡುವಾಗ ಆ ರೀತಿ ಅಸಭ್ಯ ಏನೂ ಅನ್ನಿಸಿರಲಿಲ್ಲ. ಆ ವಿಡಿಯೋದ ಸ್ಕ್ರೀನ್​ಷಾಟ್​ ತೆಗೆದಾಗ ಅಸಭ್ಯ ಎನ್ನಿಸುತ್ತಿದೆ ಅಷ್ಟೇ. ಈ ರೀತಿ ಸ್ಕ್ರೀನ್​ಷಾಟ್​ ತೆಗೆದು ಹಾಡಿನ ಗುಣಮಟ್ಟ ಅಳೆಯುವುದು ಸರಿಯಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ! 

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

click me!