ಗರ್ಭಿಣಿ ದೀಪಿಕಾ ಅವರಿಂದ ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್! ಭೇಷ್ ಎಂದ ಫ್ಯಾನ್ಸ್. ನಟ ಹೇಳಿದ್ದೇನು?
ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟೆಸ್ಟ್ ಜೋಡಿ ಎಂದು ಕರೆಯಲಾಗುತ್ತದೆ. ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ತೆರೆಯ ಮೇಲೆ ನೋಡಿದ ಅವರ ಪ್ರಣಯಕ್ಕಿಂತ ನಿಜ ಜೀವನದಲ್ಲಿ ಅವರು ಹೆಚ್ಚು ರೋಮ್ಯಾಂಟಿಕ್ ಆಗಿದ್ದಾರೆ. ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎಂದು ವರದಿಯಾಗಿತ್ತು. ಆದರೆ ಅದರ ಬಗ್ಗೆ ಸತ್ಯ ತಿಳಿದು ಬಂದಿರಲ್ಲಿ. ಆದರೆ ಬಳಿಕ ಖುದ್ದು ನಟ ದಂಪತಿಯೇ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೀಪಿಕಾ ಅವರಿಗೆ ಈಗ ಆರು ತಿಂಗಳು. ಅಂದಹಾಗೆ ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಈ ಸಂದರ್ಭದಲ್ಲಿ ರಣವೀರ್ ಸಿಂಗ್ ಅವರಿಗೆ ಗಂಡು ಮಗು ಬೇಕೊ, ಹೆಣ್ಣು ಮಗು ಬೇಕೋ ಎಂಬ ಪ್ರಶ್ನೆ ಕೇಳಲಾಗಿದೆ. ಅಷ್ಟಕ್ಕೂ ಈ ಪ್ರಶ್ನೆ ಅವರಿಗೆ ಕೇಳಿದ್ದು, ಕೆಲ ತಿಂಗಳ ಹಿಂದೆ. ಅವರ ಚಿತ್ರ ಜಯೇಶ್‌ಭಾಯ್ ಜೋರ್ದಾರ್, ij ನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅವರಿ ಪ್ರಶ್ನೆ ಕೇಳಲಾಗಿತ್ತು. ಅದೀಗ ಮತ್ತೆ ವೈರಲ್ ಆಗಿದೆ. ಆ ಸಂದರ್ಭದಲ್ಲಿ ನಟ ಕೊಟ್ಟ ಉತ್ತರಕ್ಕೆ ಈಗ ಎಲ್ಲರೂ ಭೇಷ್ ಭೇಷ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ನಟ ಹೇಳಿದ್ದೇನೆಂದರೆ, "ವಾಸ್ತವವಾಗಿ ಇದು ನನ್ನ ಆಯ್ಕೆಯಲ್ಲ. ನಾವು ಮಂದಿರಕ್ಕೆ ಹೋದಾಗ ಪ್ರಸಾದದ ರೂಪದಲ್ಲಿ ಲಡ್ಡು ಸಿಗುತ್ತೋ, ಪೇಡಾ ಸಿಗುತ್ತೋ ಗೊತ್ತಿರುವುದಿಲ್ಲ. ಏನೇ ಸಿಕ್ಕರೂ ಅದು ಪ್ರಸಾದ ಮಾತ್ರ. ಆದ್ದರಿಂದ ಮೇಲಿನವನು ಏನು ಯೋಚನೆ ಮಾಡಿರುತ್ತಾನೆಯೋ ಅದೇ ನಮಗೆ ಸಿಗುವುದು. ಆದ್ದರಿಂದ ಹುಟ್ಟುವ ಮಗು ಯಾವುದು ಎನ್ನುವ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದಿದ್ದರು. ಇದರ ವಿಡಿಯೋ ಈಗ ಮತ್ತೆ ವೈರಲ್ ಆಗಿದ್ದು, ಫ್ಯಾನ್ಸ್ ನಟನ ಮಾತಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
undefined
ಹೈ ಹೀಲ್ಸ್, ಟೈಟ್ ಡ್ರೆಸ್ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್...
ಅಂದಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವಿನ ಸಂಬಂಧ 'ರಾಮಲೀಲಾ' ಚಿತ್ರದ ಮೂಲಕ ಪ್ರಾರಂಭವಾಯಿತು. ಶೂಟಿಂಗ್ ವೇಳೆ ಇಬ್ಬರೂ ಹತ್ತಿರ ಬಂದು ನಂತರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಚಿತ್ರದ ನಂತರ ಇಬ್ಬರೂ ಜೊತೆಯಾಗಿ ಹಲವು ಸಿನಿಮಾ ಮಾಡಿದ್ದಾರೆ. ಈ ವೇಳೆ ಅವರಿಬ್ಬರ ಪ್ರೀತಿಯೂ ಚಿಗುರೊಡೆದಿತ್ತು. ಇಬ್ಬರೂ 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು. ದೀಪಿಕಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಚಿತ್ರದಿಂದ ಗ್ಯಾಪ್ ತೆಗೆದುಕೊಂಡಿದ್ದಾರೆ.
ದೀಪಿಕಾ ಅವರು, ಪ್ರಭಾಸ್ ಜೊತೆ ನಟಿಸಿರುವ ಕಲ್ಕಿ 2898 ಚಿತ್ರದ ಪ್ರೀ-ರಿಲೀಸ್ ಈವೆಂಟ್ ಮೊನ್ನೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಬೇಬಿ ಬಂಪ್ನಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಧರಿಸಿರುವ ಹೈಹೀಲ್ಸ್ ಮತ್ತು ಟೈಟ್ ಡ್ರೆಸ್ ಮೇಲೆ ನೆಟ್ಟಿಗರ ಕಣ್ಣು ಹೋಗಿದೆ. ಗರ್ಭಿಣಿಯಾದವರು ಈ ರೀತಿ ಮಾಡುವುದು ಸರಿಯಲ್ಲ ಎನ್ನುವುದು ಹಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಗರ್ಭಿಣಿಯರು ಹೈ ಹೀಲ್ಸ್ ಧರಿಸಲೇಬಾರದು ಎಂದು ವೈದ್ಯರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಆದರೂ ನಟಿ ಸಿಕ್ಕಾಪಟ್ಟೆ ಹೈ ಹೀಲ್ಸ್ ಧರಿಸಿ ಬಂದಿದ್ದಾರೆ. ಇದರಿಂದ ನಟಿಗೆ ಬುದ್ಧಿಮಾತು ಹೇಳುತ್ತಿದ್ದಾರೆ ಅಭಿಮಾನಿಗಳು. ಆರು ತಿಂಗಳು ಗರ್ಭಿಣಿಯಾದರೂ ಚಿತ್ರದ ಪ್ರೊಮೋಷನ್ಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತೆ ಕೆಲವರು. ಅದರೆ ಇದೇ ವೇಳೆ ನಿನ್ನ ಪತಿ ರಣವೀರ್ ಸಿಂಗ್ನಂಥ ಜೋಕರ್ ಅನ್ನು ಮಾತ್ರ ಹುಟ್ಟಿಸ್ಬೇಡಮ್ಮಾ ಎಂದು ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. ಏಕೆಂದರೆ ರಣವೀರ್ ಸಿಂಗ್ ಅವರನ್ನು ಹಲವರು ಜೋಕರ್ ಎಂದೇ ಕರೆಯುತ್ತಾರೆ. ಅದಕ್ಕಾಗಿ ನಟಿಗೆ ಒಳ್ಳೆಯ ಮಗುವನ್ನು ಹುಟ್ಟಿಸು ಎನ್ನುತ್ತಿದ್ದಾರೆ.
ಶಾರುಖ್ ಪುತ್ರನ ಹೆಸರಲ್ಲಿ ರಾಮ್‌ಗೆ ಮಹತ್ವ: ಅಭಿಮಾನಿಯ ಪ್ರಶ್ನೆಗೆ ಇಂಟರೆಸ್ಟಿಂಗ್ ಉತ್ತರ ಕೊಟ್ಟ ಕಿಂಗ್ ಖಾನ್!