ಅಬ್ಬಾ.. ಇತಿಹಾಸ ಸೃಷ್ಟಿಸಿದ 'ಧುರಂಧರ'ನ ದರ್ಬಾರ್; ಹಿಂದಿ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ!

Published : Dec 17, 2025, 09:54 AM IST
Ranveer Singh All Time Blockbuster

ಸಾರಾಂಶ

ಪಾಕಿಸ್ತಾನದ ಕುಖ್ಯಾತ ರೆಹಮಾನ್ ಡಕಾಯತ್ ಗ್ಯಾಂಗ್‌ಗೆ ನುಸುಳುವ ಭಾರತೀಯ ಗೂಢಚಾರಿಯ ರೋಚಕ ಕಥೆಯನ್ನು ಈ ಸಿನಿಮಾ ಹೊಂದಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅವರ ಜೊತೆಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ರೆಕಾರ್ಡ ಮಾಡಿದೆ

ಹಿಂದಿ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ!

ಬಾಲಿವುಡ್ ಬಾಕ್ಸ್ ಆಫೀಸ್ ಅಂಗಳದಲ್ಲಿ ಈಗ ರಣವೀರ್ ಸಿಂಗ್ (Ranveer Singh) ಅವರದ್ದೇ ಹವಾ! ನಿರ್ದೇಶಕ ಆದಿತ್ಯ ಧಾರ್ ಅವರ ಆಕ್ಷನ್-ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾ 'ಧುರಂಧರ' (Dhurandhar) ಗಳಿಕೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಬಿಡುಗಡೆಯಾದ ದಿನದಿಂದಲೂ ಅಬ್ಬರಿಸುತ್ತಿರುವ ಈ ಚಿತ್ರ, ಇದೀಗ 12ನೇ ದಿನಕ್ಕೆ ಕಾಲಿಟ್ಟಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅವರ ಜುಗಲ್‌ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದು, ಚಿತ್ರವು ಭಾರತದಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿಗಳ (ನೆಟ್) ಗಡಿ ದಾಟುವ ಮೂಲಕ ಬ್ಲಾಕ್‌ಬಸ್ಟರ್ ಪಟ್ಟ ಅಲಂಕರಿಸಿದೆ.

ಹಿಂದಿ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು

ಸಾಮಾನ್ಯವಾಗಿ ಯಾವುದೇ ಸಿನಿಮಾದ ಕ್ರೇಜ್ ಮೊದಲ ವಾರದಲ್ಲಿ ಜೋರಾಗಿರುತ್ತದೆ, ನಂತರದ ದಿನಗಳಲ್ಲಿ ಕಮ್ಮಿಯಾಗುತ್ತದೆ. ಆದರೆ 'ಧುರಂಧರ' ಚಿತ್ರದ ವಿಚಾರದಲ್ಲಿ ಎಲ್ಲವೂ ಉಲ್ಟಾ! ಈ ಸಿನಿಮಾ ತನ್ನ ಎರಡನೇ ವಾರದಲ್ಲಿ ತೋರುತ್ತಿರುವ ವೇಗವನ್ನು ಕಂಡು ಟ್ರೇಡ್ ಪಂಡಿತರೇ ಹುಬ್ಬೇರಿಸಿದ್ದಾರೆ. ಹೌದು, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ 'ಎರಡನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ' ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ 'ಧುರಂಧರ' ಪಾತ್ರವಾಗಿದೆ.

ಪುಷ್ಪ-2 ದಾಖಲೆ ಉಡೀಸ್!

ಈ ಹಿಂದೆ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಸಿನಿಮಾ ತನ್ನ ಎರಡನೇ ವಾರದಲ್ಲಿ 196 ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಆದರೆ ರಣವೀರ್ ಸಿಂಗ್ ಅವರ 'ಧುರಂಧರ' ಕೇವಲ 5 ದಿನಗಳಲ್ಲಿ (ಎರಡನೇ ವಾರದ ಐದು ದಿನಗಳಲ್ಲಿ) ಬರೋಬ್ಬರಿ 204 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಆ ದಾಖಲೆಯನ್ನು ಧೂಳೀಪಟ ಮಾಡಿದೆ. ಎರಡನೇ ವಾರದಲ್ಲಿ 200 ಕೋಟಿ ರೂ. ನೆಟ್ ಕಲೆಕ್ಷನ್ ದಾಟಿದ ಏಕೈಕ ಹಿಂದಿ ಸಿನಿಮಾ ಎಂಬ ಕೀರ್ತಿಗೂ ಈ ಚಿತ್ರ ಭಾಜನವಾಗಿದೆ.

ದಿನ 12ರ ಕಲೆಕ್ಷನ್ ರಿಪೋರ್ಟ್

ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ತನ್ನ 12ನೇ ದಿನದಂದು (ಮಂಗಳವಾರ) ಸುಮಾರು 30 ಕೋಟಿ ರೂ. ಗಳಿಸಿದೆ. ಇದು ಯಾವುದೇ ಹಿಂದಿ ಚಿತ್ರಕ್ಕೆ 'ಅತ್ಯಂತ ದೊಡ್ಡ ಎರಡನೇ ಮಂಗಳವಾರದ' ಗಳಿಕೆಯಾಗಿದೆ. ಇದರೊಂದಿಗೆ, ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 411.25 ಕೋಟಿ ರೂ.ಗೆ ತಲುಪಿದೆ. ಇನ್ನು ಗ್ರಾಸ್ ಕಲೆಕ್ಷನ್ (Gross Collection) ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಇದುವರೆಗೂ ಸುಮಾರು 493.5 ಕೋಟಿ ರೂ. ಹರಿದು ಬಂದಿದ್ದು, ಬುಧವಾರದ ಅಂತ್ಯಕ್ಕೆ 500 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ವಿಶ್ವದಾದ್ಯಂತ ಧೂಳೆಬ್ಬಿಸಿದ 'ಧುರಂಧರ'

ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ರಣವೀರ್ ಸಿಂಗ್ ಆರ್ಭಟ ಜೋರಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ 130 ಕೋಟಿ ರೂ. ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟು 'ವಿಶ್ವದಾದ್ಯಂತದ ಗಳಿಕೆ' (Worldwide Box Office) ಬರೋಬ್ಬರಿ 623.5 ಕೋಟಿ ರೂ. ದಾಟಿದೆ.

ರಣವೀರ್ ಮತ್ತು ಆದಿತ್ಯ ಧಾರ್ ವೃತ್ತಿಜೀವನದ ಬಿಗ್ ಹಿಟ್

ಈ ಗೆಲುವಿನೊಂದಿಗೆ 'ಧುರಂಧರ' ಚಿತ್ರವು ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, 'ಉರಿ' ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಆದಿತ್ಯ ಧಾರ್ ಅವರಿಗೂ ಇದು ಅತಿದೊಡ್ಡ ಕಮರ್ಷಿಯಲ್ ಸಕ್ಸಸ್ ತಂದುಕೊಟ್ಟಿದೆ. 2025ರ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ 'ಎ-ರೇಟೆಡ್' (A-rated) ಸಿನಿಮಾ ಎಂಬ ಖ್ಯಾತಿಗೂ ಈ ಚಿತ್ರ ಪಾತ್ರವಾಗಿದೆ.

ಮುಂದಿದೆ 'ಅವತಾರ್' ಸವಾಲು

ಬಾಕ್ಸ್ ಆಫೀಸ್‌ನಲ್ಲಿ ಸದ್ಯಕ್ಕೆ 'ಧುರಂಧರ'ನಿಗೆ ಎದುರಾಳಿಗಳಿಲ್ಲ. ಆದರೆ, ಈ ವಾರಾಂತ್ಯದಲ್ಲಿ ಹಾಲಿವುಡ್‌ನ ಬಹುನಿರೀಕ್ಷಿತ ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಆಂಡ್ ಆ್ಯಶ್' (Avatar: Fire and Ash) ಬಿಡುಗಡೆಯಾಗುತ್ತಿದೆ. ಇದು ಧುರಂಧರನ ಓಟಕ್ಕೆ ಕೊಂಚ ಬ್ರೇಕ್ ಹಾಕುವ ಸಾಧ್ಯತೆಯಿದೆ. ಆದರೂ, ಹಿಂದಿ ಪ್ರೇಕ್ಷಕರ ಒಲವು ರಣವೀರ್ ಕಡೆಗಿರುವುದರಿಂದ ಗಳಿಕೆಯಲ್ಲಿ ದೊಡ್ಡ ಕುಸಿತವಾಗಲಾರದು ಎಂದು ವಿಶ್ಲೇಷಿಸಲಾಗುತ್ತಿದೆ.

ತಾರಾಗಣ ಮತ್ತು ಕಥೆ

ಪಾಕಿಸ್ತಾನದ ಕುಖ್ಯಾತ ರೆಹಮಾನ್ ಡಕಾಯತ್ ಗ್ಯಾಂಗ್‌ಗೆ ನುಸುಳುವ ಭಾರತೀಯ ಗೂಢಚಾರಿಯ ರೋಚಕ ಕಥೆಯನ್ನು ಈ ಸಿನಿಮಾ ಹೊಂದಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅವರ ಜೊತೆಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಚಿತ್ರದ ತೂಕ ಹೆಚ್ಚಿಸಿದೆ. ಒಟ್ಟಿನಲ್ಲಿ, ಬಾಲಿವುಡ್ ಪಾಲಿಗೆ 'ಧುರಂಧರ' ನಿಜಕ್ಕೂ ಸಂಜೀವಿನಿಯಂತೆ ಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹಣದ ಮಳೆ ಸುರಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

52 ವರ್ಷದ ಡಿವೋರ್ಸ್ ಆಗಿರೋ ನಟ, 38ವರ್ಷದ ನಟಿ ನಿಶ್ಚಿತಾರ್ಥ.. ಆದ್ರೆ ಇನ್ನೂ ಮದುವೆ ಆಗಿಲ್ಲ, ಯಾಕೆ ಗೊತ್ತಾ?
ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು