
ಹುಡುಗರಿಗೆ ಇವನು ಹ್ಯಾಂಡ್ಸಮ್. ಹುಡುಗಿಯರಿಗೆ ಇವನು ಕ್ಯೂಟ್. ಆದರೆ ದೀಪಿಕಾಳಿಗೆ ಮಾತ್ರ ಇವನೇ ಪಾರ್ಟಿ ಬಾಯ್. ಡಿಫರೆಂಟ್ ಲುಕ್‌ನಲ್ಲಿ ಪಾರ್ಟಿಗಳಲ್ಲಿ ಗಮನ ಸೆಳೆಯುವ ಮಟ್ಟಕ್ಕೆ ಕುಣಿದು ಕುಪ್ಪಳಿಸುವ ರಣವೀರ್ ಸಿಂಗ್ 'ಶಾದಿ ಟೈಂ' ಎಂದಿದ್ದಾರೆ.
ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ
ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಶೇರ್‌ವಾನಿಯಲ್ಲಿ ಮಿಂಚುತ್ತಿರುವ ರಣವೀರ್ ಸಿಂಗ್ 'ಶಾದಿ ಸೀಸನ್ ಬರುತ್ತಿದೆ! ಮನೋರಂಜನೆಗೆ ನಾನು ಸಿದ್ದ. ಮದುವೆ, ಫ್ರೆಂಡ್ ಪಾರ್ಟಿ, ಮುಂಡನ್ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ...' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ನೋಡಿದ ತಕ್ಷಣ 'ಬುಕ್ಕಿಂಗ್‌ಗೆ ದೀಪಿಕಾಳನ್ನು ಸಂಪರ್ಕಿಸಿ' ಎಂದು ದೀಪಿಕಾ ಕಾಮೆಂಟ್ ಮಾಡಿದ್ದಾರೆ.
ರಣವೀರ್ ಪೋಸ್ಟ್ ವೈರಲ್ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ, ಆದರೆ ದೀಪಿಕಾ ಕಾಮೆಂಟ್ ಮಾಡಿದ್ದೇ ತಡ ಅಭಿಮಾನಿಗಳ ಕಾಮೆಂಟ್‌ಗಳು ತುಂಬಿ ಹರಿಯುತ್ತಿವೆ. ಅದಕ್ಕೆ '2 states' ಖ್ಯಾತಿಯ ಅರ್ಜುನ್ ಕಪೂರ್ 'ಬಾಬಾ ನೀನು ತುಂಬಾ ಚೀಪ್, ಆದರೆ ಆಕೆ ದುಬಾರಿ' ಎಂದಿದ್ದಾರೆ. ನಿರ್ದೇಶಕಿ ಏಕ್ತಾ ಕಪೂರ್ 'ಮದುವೆಗೆ ಹೆಣ್ಣು ಬೇಕಾಗಿದ್ದಾಳೆ, ನಿಮ್ಮ ಮ್ಯಾನೇಜರ್ ನಂಬರ್ ಕೋಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಗಂಡನ ಕಾಲೆಳೆದ ಹೆಂಡತಿ ಕಾಮೆಂಟ್‌ಗೆ ಪ್ರತಿಕ್ರಿಯೆಗಳು ತುಂಬಾ ಬಂದಿವೆ.
ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!
ರಾಮ್ ಲೀಲಾ, ಪದ್ಮಾವತಿ, ಬಾಜೀರಾವ್ ಮಸ್ತಾನಿಯಂತ ಐತಿಹಾಸಿಕ ಚಿತ್ರಗಳಲ್ಲಿ ನಟಿಸಿದ ಈ ಜೋಡಿ ನಡುವೆ ಪ್ರೇಮಾಂಕುರವಾಗಿ ಕಳೆದ ವರ್ಷ ನವೆಂಬರ್ 14 ಹಾಗೂ 15ರಂದು ಇಟಲಿಯಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿರಿಸಿತು.
ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.