
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ರಣವೀರ್ ಸಿಂಗ್- ಅಲಿಯಾ ಭಟ್ ನಟನೆಯ ಸೂಪರ್ ಹಿಟ್ ಚಿತ್ರ 'ಗಲ್ಲಿಬಾಯ್' ಹೊರ ಬಿದ್ದಿದೆ. ಆಸ್ಕರ್ ಗೆಲ್ಲುವ 'ಗಲ್ಲಿಬಾಯ್' ಕನಸು ಭಗ್ನವಾಗಿದೆ.
ಹೆಸರು ಬದಲಾಯಿಸಿಕೊಂಡ ಶಾನ್ವಿ ಶ್ರೀವಾಸ್ತವ್; ಇದಕ್ಕೆ 'ಅವನೇ' ಕಾರಣ!
ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಆರ್ಟ್ಸ್ ಶಾರ್ಟ್ ಲಿಸ್ಟ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. 'ದಿ ಪೇಯಿಂಟೆಡ್ ಬರ್ಡ್, ಟ್ರುತ್ ಆfಯಂಡ್ ಜಸ್ಟಿಸ್, ಲೆಸ್ ಮಿಸರಬಲ್ಸ್, ದೋಸ್ ಹೂ ರಿಮೈನಡ್, ಹನಿಲ್ಯಾಂಡ್, ಕಾರ್ಪಸ್ ಕ್ರಿಸ್ಟಿ, ಬೀನ್‌ಪೋಲ್, ಅಟ್ಲಾಂಟಿಕ್ಸ್, ಪ್ಯಾರಾಸೈಟ್ ಹಾಗೂ ಪೇನ್ ಗ್ಲೋರಿ ಮುಂದಿನ ಹಂತಕ್ಕೆ ಆಯ್ಕೆಯಾಗಿದೆ.
'ಗಲ್ಲಿಬಾಯ್' ಚಿತ್ರವನ್ನು ಖ್ಯಾತ ನಿರ್ದೇಶಕಿ ಝೋಯಾ ಅಖ್ತರ್ ನಿರ್ದೇಶಿಸಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕನಸು ಕಂಡ ಮುಂಬೈನ ರ್ಯಾಪರ್ ಒಬ್ಬನ ಜೀವನಾಧಾರಿತ ಸಿನಿಮಾ ಇದಾಗಿದೆ. ರಣವೀರ್ ಸಿಂಗ್, ಅಲಿಯಾ ಭಟ್, ಸಿದ್ದಾಂತ್ ಚತುರ್ವೇದಿ, ಕಲ್ಕಿ ಕೊಚ್ಲೀನ್ ಹಾಗೂ ವಿಜಯ್ ವರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಜನಿಕಾಂತ್ 'ದರ್ಬಾರ್' ಶುರು; ಟ್ರೇಲರ್ ಸೃಷ್ಟಿಸಿದೆ ಸಖತ್ ಹವಾ!
1958 ರಲ್ಲಿ ಮದರ್ ಇಂಡಿಯಾ, 1989 ರಲ್ಲಿ ಸಲಾಂ ಬಾಂಬೆ, 2001 ರಲ್ಲಿ ಲಗಾನ್ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.