ಕುರುಡು ವ್ಯಾಮೋಹ ಮನುಷ್ಯನ ಕೈಯಲ್ಲಿ ಏನು ಬೇಕಾದ್ರೂ ಮಾಡಿಸುತ್ತಂತೆ. ಖ್ಯಾತ ನಟಿ ಸಮಂತಾ ಕೂಡ ಇದ್ರಿಂದ ಹೊರತಾಗಿಲ್ಲ, ಅವರು ಮಾಡಿರೋ ಒಂದು ಕೆಲಸ ಅವರ ಸಂಬಂಧವನ್ನೇ ಕಡಿದು ಹಾಕಿತು ಎಂಬ ಸುದ್ದಿಯೊಂದು ಹರಿದಾಡ್ತಿದೆ. ಆ ಕಾರಣ ಏನು ಗೊತ್ತಾ?
ತೆಲುಗಿನ ಸೂಪರ್‌ಸ್ಟಾರ್ ಸಮಂತಾ ಹಾಗೂ ನಾಗಚೈತನ್ಯ ನಡುವೆ ಮದುವೆ ಆದಾಗ, ಆಹಾ ಇವರದು ಎಂಥಾ ಕ್ಯೂಟ್ ಜೋಡಿ ಎಂದು ಕಣ್ಣರಳಿಸಿದವರು ಅದೆಷ್ಟೋ ಜನ. ಆ ಜನರಾ ಕಣ್ಣೇ ಬಿತ್ತೋ ಏನೋ ಗೊತ್ತಿಲ್ಲ. ಮದುವೆ ಆದ ಸ್ವಲ್ಪ ಕಾಲಕ್ಕೇ ಈ ತಾರಾ ಜೋಡಿ ಡಿವೋರ್ಸ್ ಬಾಂಬ್ ಸಿಡಿಸಿತು. ಈ ಡಿವೋರ್ಸ್ ಆಗಿ ಇಷ್ಟೆಲ್ಲ ಟೈಮ್ ಆಯ್ತು, ಸಪರೇಟ್ ಆಗಿದ್ದೇ ಸಮಂತಾ ಸೇಡು ತೀರಿಸುವಂತೆ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡರು. ಈಕೆ ಪುಷ್ಪದಲ್ಲಿ ಮೈ ಬಳುಕಿಸಿದ್ದು ಈವರೆಗಿನ ಐಟಂ ಡ್ಯಾನ್ಸ್ ಬಗೆಗಿದ್ದ ದಾಖಲೆಗಳನ್ನೆಲ್ಲ ಸರ್ವನಾಶ ಮಾಡಿತು. ಸಮಂತಾ 'ಊ ಅಂಟಾವಾ ಮಾವ ಊ ಊ ಮಾವ' ಹಾಡು ಸರ್ವಕಾಲಿಕ ದಾಖಲೆ ಮಾಡಿತು.
ಆಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಐಟಂ ನಂಬರ್‌ಗೆ ಕಾದು ಕುಳಿತರೂ ಸಮಂತಾ ಮಾತ್ರ 'ಊ ಊ' ಅಂತಾಲೇ ಹೇಳಿದರು. ಇತ್ತೀಚೆಗೆ ಸಮಂತಾ ಮತ್ತು ರಶ್ಮಿಕಾ ಬಾಯ್ ಫ್ರೆಂಡ್ ವಿಜಯ ದೇವರಕೊಂಡ ನಟನೆಯ 'ಖುಷಿ' ಸಿನಿಮಾ ಒಂದು ಮಟ್ಟಿನ ಸಕ್ಸಸ್ ದಾಖಲಿಸಿತು. ಇಷ್ಟೆಲ್ಲ ಆದರೂ ಸಂಬಂಧ ಠಳ್ ಅಂತ ಒಡೆದು ಚೂರು ಚೂರಾಗಿದ್ದು ಮತ್ತೆ ಕೂಡಿಕೊಳ್ಳಲೇ ಇಲ್ಲ. ಸಮಂತಾ ಮತ್ತು ನಾಗಚೈತನ್ಯ ನಡುವಿನ ಬಿರುಕಿಗೆ ಅದು ಕಾರಣ, ಇದು ಕಾರಣ ಅಂತ ಗಾಸಿಪ್ (Gossip) ಪೇಜ್‌ಗಳಲ್ಲಿ ಪುಟಗಟ್ಟಲೆ ಸ್ಟೋರಿಗಳು ಬಂದವು. ಈ ನಡುವೆ ಈ ಗಂಡ ಹೆಂಡತಿ ಫ್ಯಾನ್ ಪೇಜ್‌ಗಳಲ್ಲೂ ಘರ್ಷಣೆ ಉಂಟಾಯ್ತು. ಇಷ್ಟಾದರೂ ಸಮಂತಾ ಆಗಲೀ, ನಾಗಚೈತನ್ಯ ಆಗಲಿ ತಮ್ಮ ಈ ಸಪರೇಶನ್‌ಗೆ ಕಾರಣ ಹೇಳಲಿಲ್ಲ.
300 ಮೀ. ದೂರದಿಂದಲೇ ರೇವಂತ್ ಕರೆ ಆಲಿಸಲು ಇಸ್ರೇಲಿ ಉಪಕರಣ: ಫೋನ್ ಕದ್ದಾಲಿಕೆಯ ರಹಸ್ಯ ತಂತ್ರ ಬಯಲು
ಈಗ ಮತ್ತೊಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ. ಇವರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗೇ (Phone Tapping) ಕಾರಣ ಅನ್ನೋ ವಿಚಾರ ತೆಲುಗು ರಾಜ್ಯಗಳಲ್ಲಿ ಹಲ್‌ಚಲ್ ಎಬ್ಬಿಸಿದೆ. ದಕ್ಷಿಣ ಭಾರತದ ಟಾಪ್ ತಾರಾ ಜೋಡಿ ಎಂದು ಹೆಸರಾಗಿದ್ದರು ಸಮಂತಾ ಹಾಗೂ ನಾಗ ಚೈತನ್ಯ. ಆದರೆ ಅಚಾನಕ್ಕಾಗಿ ದೂರಾದರು. ಇಬ್ಬರೂ ಸಹ ವಿಚ್ಛೇದನ ಪಡೆದುಕೊಂಡರು. ಆದರೆ ವಿಚ್ಚೇದನಕ್ಕೆ ಸ್ಪಷ್ಟ ಕಾರಣವನ್ನು ಇಬ್ಬರೂ ಕೊಡಲಿಲ್ಲ. ಇದೀಗ ವಿಚ್ಛೇದನವಾಗಿ ಮೂರು ವರ್ಷಗಳ ಬಳಿಕ ವಿಚ್ಛೇದನಕ್ಕೆ ಕಾರಣ ಹೊರಬಿದ್ದಿದೆ.
ತೆಲಂಗಾಣ ರಾಜಕೀಯದಲ್ಲಿ ಭಾರಿ ಅಲೆಗಳನ್ನು ಎಬ್ಬಿಸಿರುವ ಫೋನ್ ಟ್ಯಾಪಿಂಗ್ನಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಫೋನ್ ಟ್ಯಾಪಿಂಗ್ (phone tapping) ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ತೆಲುಗು ಚಿತ್ರರಂಗದ ತಾರಾ ಜೋಡಿಯೊಂದರ (star couple) ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣವಾಗಿದೆ ಎಂಬ ಅಂಶ ಹರಿದಾಡುತ್ತಲೇ ಇತ್ತು. ಆದರೆ ಆ ತಾರಾ ಜೋಡಿ ಯಾರೆಂಬುದು ಬೆಳಕಿಗೆ ಬಂದಿರಲಿಲ್ಲ. ಆ ತಾರಾ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ಅವರೇ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್ ಕದ್ದಾಲಿಕೆ ಕಿಂಗ್‌ಪಿನ್
ತೆಲುಗಿನ ಮಾಧ್ಯಮಗಳು ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇದನಕ್ಕೆ (divorce) ಫೋನ್ ಟ್ಯಾಪಿಂಗ್ ಕಾರಣ ಎಂಬ ಸುದ್ದಿಯನ್ನು ಬಿತ್ತರಿಸಿವೆ. ಸಮಂತಾ ಅವರೇ ನಾಗ ಚೈತನ್ಯರ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಗ ಚೈತನ್ಯರ ವರ್ತನೆ ಮೇಲೆ ಸಮಂತಾಗೆ ಅನುಮಾನವಿದ್ದ ಕಾರಣದಿಂದ ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದ ವ್ಯಕ್ತಿಯೊಬ್ಬನ ಸಹಾಯ ಪಡೆದು ಸಮಂತಾ, ನಾಗ ಚೈತನ್ಯರ ಫೋನ್ ಟ್ಯಾಪ್ ಮಾಡಿಸಿದ್ದರು ಎನ್ನಲಾಗುತ್ತಿದೆ.
ಇನ್ನೊಂದೆಡೆ ಫೋನ್ ಟ್ಯಾಪಿಂಗ್ ಪ್ರಕರಣ ತೆಲಂಗಾಣ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪೊಲೀಸ್ ಇಲಾಖೆಯ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥನ ವಿರುದ್ಧ ನೊಟೀಸ್ ಸಹ ಜಾರಿಯಾಗಿದೆ. ಹಲವು ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರ ಫೋನ್ಗಳನ್ನು ಟ್ಯಾಪ್ ಮಾಡಿ ಅವರುಗಳನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಲಾಗಿತ್ತಂತೆ. ಹಲವು ರಾಜಕಾರಣಿಗಳ ಫೋನ್ ಸಹ ಟ್ಯಾಪ್ ಮಾಡಲಾಗಿದ್ದು, ತೆಲಂಗಾಣದ ಸಿಎಂ (Chief minister) ರೇವಂತ್ ರೆಡ್ಡಿಯ ಫೋನ್ ಸಹ ಟ್ಯಾಪ್ ಮಾಡಲಾಗಿತ್ತು.
ಇಷ್ಟೆಲ್ಲಾ ಆಗಿಯೂ ಈ ಫೋನ್ ಟ್ಯಾಪಿಂಗ್ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿತ್ತು.
ಆಂಧ್ರ ಸಿಎಂ ರೇವಂತ್ ರೆಡ್ಡಿ ಆಪ್ತರ ಫೋನ್ ಕದ್ದಾಲಿಕೆ: ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಅರೆಸ್ಟ್!