ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರಕ್ಕೆ 26 ಕೆಜಿ ತೂಕ ಇಳಿಸಿಕೊಂಡ ರಣದೀಪ್ ಹೂಡಾ. ರಹಸ್ಯ ಬಿಚ್ಚಿಟ್ಟ ನಿರ್ಮಾಪಕ....
ಬಾಲಿವುಡ್ ಚಿತ್ರರಂಗದಲ್ಲಿ ಶ್ರಮಕ್ಕೆ ತಕ್ಕ ಫಲ ಪಡೆಯುವ ನಟ ರಣದೀಪ್ ಹೂಡಾ ತಮ್ಮ ಮುಂದಿನ ಸಿನಿಮಾ ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಾಮಸೂಚಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಣದೀಪ್ ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿಯೂ ಬಾಲಿವುಡ್ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಹೆಗಲ ಮೇಲೆ ಮತ್ತೊಂದು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಮೇ 28ರಂದು ವೀರ ಸಾವರ್ಕರ್ ಜಯಂತಿ ಪ್ರಯುಕ್ತ ಚಿತ್ರದ ಅಫೀಷಿಯಲ್ ಟೀಸರ್ ಹಾಗೂ ಲುಕ್ ರಿಲೀಸ್ ಮಾಡಿದ್ದಾರೆ. ಎಂದೂ ಕಾಣಿಸಿಕೊಳ್ಳದ ರಣದೀಪ್ ಅವತರಾ ನೋಡಿ ಸಿನಿ ರಸಿಕರು ಶಾಕ್ ಆಗಿದ್ದಾರೆ. ನಾಲ್ಕು ತಿಂಗಳುಗಳ ಕಾಲ ಒಂದು ಚೂರು ಬದಲಾಗದೆ ಹೇಗೆ ರಣದೀಪ್ ಈ ರೀತಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡುವವರಿಗೆ ನಿರ್ಮಾಪಕರು ಉತ್ತರ ಕೊಟ್ಟಿದ್ದಾರೆ.
undefined
ವೀರ್ ಸಾವರ್ಕರ್ ಬಯೋಪಿಕ್; ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ
ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ನಿರ್ಮಾಪಕರಾದ ಆನಂದ್ ಪಂಡಿತ್ ಸಣ್ಣ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ರಣದೀಪ್ 18 ಕೆಜಿ ಅಲ್ಲ 26 ಕೆಜಿ ತೂಕ ಇಳಿಸಿಕೊಂಡಿರುವುದು ಎಂದು. 'ರಣದೀಪ್ ಹೂಡಾ ಮೊದಲು ಸಂದೀಪ್ ಸಿಂಗ್ ಜೊತೆ ನನ್ನ ಆಫೀಸ್‌ಗೆ ಭೇಟಿ ನೀಡಿದ್ದರು ಆಗ 86 ಕೆಜಿ ತೂಕ ಇದ್ದರು. ಪಾತ್ರದಲ್ಲಿ ಎಷ್ಟು ಮುಳುಗಿದರು ಅಂದ್ರೆ ಈ ಕ್ಷಣದವರೆಗೂ ಸ್ಕ್ರೀನ್ ಮೇಲೆ ಹೇಗೆ ಕಾಣಿಸಿಕೊಳ್ಳಬೇಕು ಎಂದು ಪಕ್ಕಾ ಲೆಕ್ಕಾಚಾರ ಮಾಡಿ ತಯಾರಿ ಮಾಡಿಕೊಳ್ಳುತ್ತಿದ್ದರು. ಯಾವ ಕಾರಣಕ್ಕೂ ಯಾವ ದೃಶ್ಯ ಕೂಡ ವೀಕ್ಷಕರಿಗೆ ಕಡಿಮೆ ಅನಿಸಬಾರದು ಎನ್ನುತ್ತಿದ್ದರು. ದೇಹ ತೂಕ ಕಾಪಾಡಿಕೊಳ್ಳಲು ನಾಲ್ಕು ತಿಂಗಳುಗಳ ಕಾಲ ಒಂದು ಖರ್ಜೂರ ಮತ್ತು ಒಂದು ಗ್ಲಾಸ್ ಹಾಲು ಕುಡಿಯುತ್ತಿದ್ದರು. ಚಿತ್ರೀಕರಣ ಮುಗಿಯುವ ಕೊನೆ ದಿನದವರೆಗೂ ಹೀಗೆ ಮಾಡುತ್ತಿದ್ದರು' ಎಂದಿದ್ದಾರೆ ಆನಂದ್.
ನಟನೆ ಮಾತ್ರವಲ್ಲ ನಿರ್ದೇಶಕನಾಗಿಯೂ ನಾನು ಸೈ ಎಂದು ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರದ ಮೂಲಕ ರಣದೀಪ್ ಬಿ-ಟೌನ್‌ಗೆ ತೋರಿಸಿಕೊಟ್ಟಿದ್ದಾರೆ. ಚಿತ್ರಕಥೆ ಬರಹಗಾರ ಉತ್ಕರ್ಷ್ ನೈತಾನಿ ಜೊತೆ ರಣದೀಪ್ ಕೂಡ ಸಿನಿಮಾ ಕಥೆ ಬರೆದಿದ್ದಾರೆ. 2023ರ ಅಂತ್ಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ರಿಲೀಸ್ ಆಗಲಿದೆ.
ಈ ಬಗ್ಗೆ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ ನಟ ರಣದೀಪ್, ನಮಗೆ ಸ್ವಾತಂತ್ರ ದೊರಕಿಸಿಕೊಡುವಲ್ಲಿ ಅನೇಕ ವೀರರು ಕಾರಣರಾಗಿದ್ದಾರೆ. ಆದರೆ ಅವರಲ್ಲಿ ಎಲ್ಲರು ಅಷ್ಟಾಗಿ ಗುರುತಿಸಲ್ಪಟ್ಟಿಲ್ಲ. ಆದರೆ ಸಾವರ್ಕರ್ ಅವರ ಬಗ್ಗೆ ಸಾಕಷ್ಟು ತಪ್ಪಾದ ಚರ್ಚೆ ನಡೆಯುತ್ತಿದೆ. ಅವರ ಬಗ್ಗೆ ಜನರಿಗೆ ಹೇಳಬೇಕು. ತುಂಬಾ ಪ್ರಭಾವಶಾಲಿ ವ್ಯಕ್ತಿ ಎಂದು ಹೇಳಿದ್ದಾರೆ. ಸಾವರ್ಕರ್ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾಗಿದ್ದರು. ಹಿಂದೂ ರಾಷ್ಟ್ರೀಯವಾದಿ, ರಾಜಕೀಯ ಸಿದ್ಧಾಂತದ ಅಗ್ರಗಣ್ಯ ಪ್ರವರ್ತಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರಾಂತಿಕಾರಿ ಗ್ರೂಪ್ ಇಂಡಿಯಾ ಹೌಸ್ ಜೊತೆಗಿನ ಅವರ ಸಂಪರ್ಕಕ್ಕಾಗಿ ಅವರನ್ನು 1910ರಲ್ಲಿ ಬಂಧಿಸಲಾಯಿತು. ಬಳಿಕ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜೈಲಿನಲ್ಲಿ ಬಂಧಿಸಲಾಯಿತು. ನಂತರ ರತ್ನಗಿರಿಗೆ ಸ್ಥಳಾಂತರಿಸಲಾಯಿತು ಈ ಎಲ್ಲಾ ಘಟನೆಗಳು ಬಯೋಪಿಕ್ ನಲ್ಲಿ ಇರಲಿದೆ.