Ranbir Touches Rajamouli's Feet: ಗ್ರೇಟ್ ನಿರ್ದೇಶಕನ ಆಶೀರ್ವಾದ ಪಡೆದ ಬಾಲಿವುಡ್ ನಟ!

Suvarna News   | Asianet News
Published : Dec 19, 2021, 01:03 PM IST
Ranbir Touches Rajamouli's Feet: ಗ್ರೇಟ್ ನಿರ್ದೇಶಕನ ಆಶೀರ್ವಾದ ಪಡೆದ ಬಾಲಿವುಡ್ ನಟ!

ಸಾರಾಂಶ

'ಬ್ರಹ್ಮಾಸ್ತ್ರ' ಸಿನಿಮಾ ಪ್ರಚಾರದ ವೇಳೆ ಎಸ್‌ಎಸ್‌ ರಾಜಮೌಳಿ ಕಾಲಿಗೆ ಬಿದ್ದ ಬಾಲಿವುಡ್ ಚಾಕೋಲೇಟ್ ಬಾಯ್. ಇದರ ಹಿಂದಿನ ಉದ್ದೇಶ ಹುಡುಕಿದ ನೆಟ್ಟಿಗರು... 

ಬಾಲಿವುಡ್ ಬಿಗ್ ಬಜೆಟ್ ಸಿನಿಮಾ 'ಬ್ರಹ್ಮಾಸ್ತ್ರ' (Brahmastra) ಪ್ರಮೋಷನ್ ಕಾರ್ಯಕ್ರಮದಲ್ಲಿ ಎಸ್‌ಎಸ್‌ ರಾಜಮೌಳಿ ಭಾಗಿಯಾಗಿದ್ದರು. ಈ ವೇಳೆ ರಣಬೀರ್ ಕಪೂರ್ ನಡೆದುಕೊಂಡ ರೀತಿ ನೋಡಿ ಅಲ್ಲಿದ್ದವರು ಮಾತ್ರವಲ್ಲದೆ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್‌ ಮಂದಿ ಯಾರ ಕಾಲನ್ನೂ ಮುಟ್ಟಿ ನಮಸ್ಕಾರ ಮಾಡುವುದಿಲ್ಲ. ತಮ್ಮ ಗರ್ಲ್‌ ಫ್ರೆಂಡ್‌ ದಕ್ಷಿಣ ಭಾರತೀಯ ಸಿನಿಮಾ ಒಪ್ಪಿಕೊಳ್ಳುತ್ತಿದ್ದಂತೆ, ರಣಬೀರ್‌ ಕ್ಯಾರೆಕ್ಟರ್ ಬದಲಾಗಿದೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ (Amithab Bachchan), ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಮತ್ತು ನಾಗಾರ್ಜುನ್ ಅಕ್ಕಿನೇನಿ ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಸಿನಿಮಾದ ಒಟ್ಟು ಬಜೆಟ್ 150 ಕೋಟಿ ರೂ. ಎನ್ನಲಾಗಿದೆ. ಮೊದಲ ಬಾರಿಗೆ ಈ ಒಂದು ಹಿಂದಿ ಸಿನಿಮಾವನ್ನು 7 ಮಂದಿ ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಜೋಹರ್, ಕರಣ್ ಜೋಹರ್, ರಣಬೀರ್ ಕಪೂರ್, ಅಯಾನ್ ಮುಖರ್ಜಿ, ಅಪೂರ್ವಾ ಮೆಹ್ತಾ, ನಮಿತ್ ಮಲ್ಹೋತ್ರಾ ಮತ್ತು ಮರಿಜ್ಕೆ ಡಿಸೋಜಾ ಬಂಡವಾಳ ಹಾಕಿದ್ದಾರೆ. 

ರಾಜಮೌಳಿ ಮಾತು:
'ಇಲ್ಲಿ ಬಂದು ನಾಲ್ಕು ದಕ್ಷಿಣ ಭಾಷೆಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದಕ್ಕೆ ಸಂತೋಷವಿದೆ. ಬ್ರಹ್ಮಾಸ್ತ್ರದ ಕಾನ್ಸೆಪ್ಟ್‌ ತುಂಬಾನೇ ಡಿಫರೆಂಟ್ ಆಗಿರುತ್ತದೆ. ಕಥೆ ಮತ್ತು ನಿರ್ದೇಶಕರು ತೋರಿಸಿರುವ ರೀತಿಯಲ್ಲಿಯೇ ಹೇಳಬಹುದು. ಅನೇಕ ವಿಚಾರಗಳಲ್ಲಿ ಬಾಹುಬಲಿ ಸಿನಿಮಾ ನೆನಪಾಗುತ್ತದೆ. ಲವ್ ಮತ್ತು ಪ್ಯಾಷನ್‌ ಎದ್ದು ಕಾಣಿಸುತ್ತದೆ. ನಾನು ಅಯಾನ್ ಬ್ರಹ್ಮಾಸ್ತ್ರ ಸಿನಿಮಾ ತುಂಬಾ ಸಮಯ ಕೊಟ್ಟಿರುವುದನ್ನು ನೋಡಿದ್ದೀನಿ, ಸೇಮ್ ನಾನು ಬಾಹುಬಲಿ ಸಿನಿಮಾಗೆ ಸಮಯ ಕೊಟ್ಟಂತೆ,' ಎಂದು ರಾಜಮೌಳಿ (SS Rajamouli) ಮಾತನಾಡಿದ್ದಾರೆ. 

ರಾಜಮೌಳಿ ವೇದಿಕೆ ಮೇಲೆ ಆಗಮಿಸುದ್ದಂತೆ ಅಲ್ಲಿದ್ದ ರಣಬೀರ್ ಕಪೂರ್ (Ranbir Kapoor) ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಲಿಯಾ ರೀತಿ ಅವಕಾಶ ಪಡೆಯಲು ರಣಬೀರ್ ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ, ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

Alia Bhatt Tweets In Kannada: ಕನ್ನಡದಲ್ಲಿ ಟ್ವೀಟ್ ಮಾಡಿದ ಆಲಿಯಾ, ವಿಷಯವೇನು ?

'ಆಯಾನ್‌ ಜೊತೆ ಕೆಲಸ ಮಾಡುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಬ್ರಹ್ಮಾಸ್ತ್ರ ತಂಡದಲ್ಲಿ ಎಲ್ಲರೂ ತುಂಬಾನೇ ಟ್ಯಾಲೆಂಟೆಡ್. ಇದು ಕಾಂಬಿನೇಷನ್ ಆಫ್ Ancient ಮತ್ತು ಮಾಡ್ರನ್ ಇಂಡಿಯಾದ ಕಥೆಯುಳ್ಳ ಸಿನಿಮಾ. ಈ ಕಾರ್ಯಕ್ರಮ ರಾಜಮೌಳಿ ಬಂದಿರುವುದು ಇನ್ನೂ ಸಂತೋಷ ತಂದುಕೊಟ್ಟಿದೆ. ಅಭಿಮಾನಿಗಳ ಮುಂದೆ ನಮ್ಮ ಸಿನಿಮಾ 2022ರಲ್ಲಿ ಬಿಡುಗಡೆ ಆಗಲಿದೆ,' ಎಂದು ನಾಗಾರ್ಜುನ ಅಕ್ಕಿನೇನಿ ಹೇಳಿದ್ದಾರೆ. 

ಕರಣ್ ಜೋಹಾರ್ ಮಾತು:
'ಬ್ರಹ್ಮಾಸ್ತ್ರ ಒಂದು Ambitious ಮತ್ತು visionary ಪ್ರಾಜೆಕ್ಟ್‌. ಇದು ನಿರ್ದೇಶಕ ಆಯಾನ್ ಅವರ ಮಗು, ಅವರು ಆರಂಭದಿಂದ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಈ ಸಿನಿಮಾ ಔಟ್‌ಕಮ್ ಅದ್ಭುತವಾಗಿದೆ. ಬಾಹುಬಲಿ ಸಿನಿಮಾ ಕೋಟಿ ಲಾಭ ಮಾಡುವುದಲ್ಲದೆ, ಬೇರೆ ಬೇರೆ ಭಾಷೆಗಳಲ್ಲಿ ಮತ್ತು ನ್ಯಾಷನಲ್ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಈ ಕಾರ್ಯಕ್ರಮವನ್ನು ನಾನು ರಾಜಮೌಳಿ ಗಾರು ಜೊತೆ ಮಾಡುತ್ತಿರುವುದು ನಮ್ಮ ಹೆಮ್ಮೆ. ಅವರು ಆಗಮಿಸಿದ ಬಳಿಕ ನನ್ನ ಶಕ್ತಿ ನಮ್ಮ ಕಾನ್ಫಿಡೆನ್ಸ್ ಹೆಚ್ಚಾಗಿದೆ,' ಎಂದು ನಿರ್ದೇಶಕ ಕರಣ್ ಜೋಹಾರ್ (Karan Johar) ಮಾತನಾಡಿದ್ದಾರೆ. 

Brahmastra Event: ಆಲಿಯಾ - ರಣಬೀರ್ ಕಪೂರ್ ರೊಮ್ಯಾಂಟಿಕ್‌ ಮೂಮೆಂಟ್ಸ್‌!

ಆಯಾನ್ ಕನಸು:
'ವರ್ಷಗಳಿಂದ ನಾನು ಬ್ರಹ್ಮಾಸ್ತ್ರ ಸಿನಿಮಾವನ್ನು ತಯಾರಿ ಮಾಡಿಕೊಂಡು ಬರುತ್ತಿದ್ದೆ. ಇದೊಂದು ambitious trilogy ಆಗಿದ್ದು, ಇದರ ಜರ್ನಿ ಸಾಮಾನ್ಯವಾಗಿರಲಿಲ್ಲ. ನಾನು ಈ ಸಿನಿಮಾಗಾಗಿ ಎಲ್ಲವನ್ನೂ ನೀಡಿರುವೆ, ನನ್ನ ಇಡೀ ಮನಸ್ಸು ಮತ್ತು ಕನಸು ಈ ಸಿನಿಮಾದ ಮೇಲಿದೆ. ಎಸ್‌ಎಸ್‌ ರಾಜಮೌಳಿ ಅವರು ನನ್ನ ಮೆಂಟರ್‌. ಅವರ ಬಾಹುಬಲಿ ಸಿನಿಮಾವೇ ನನಗೆ ಸ್ಫೂರ್ತಿ ನೀಡಿ. ನನ್ನ ಈ ಕನಸು ಹುಟ್ಟಿಕೊಂಡು ಬ್ರಹ್ಮಾಸ್ತ್ರ ಎಂದು ಹೆಸರು ಪಡೆದುಕೊಂಡಿದೆ,' ಎಂದು ನಿರ್ದೇಶಕರು ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?