Katrina Kaif Mehandi: ಹನಿಮೂನ್‌ಗೆ ಹೋಗಿ ಮಹೆಂದಿ ಕೈಗಳನ್ನು ತೋರಿಸಿದ ಕತ್ರೀನಾ

By Suvarna News  |  First Published Dec 19, 2021, 12:33 PM IST

Katrina Kaif Wedding: ಕತ್ರೀನಾ ಕೈಫ್ ಮದುವೆಯಾಗಿ ಹನಿಮೂನ್ ಮುಗಿಸಿದ್ದಾರೆ. ಹಾಗೆ ತರಾತುರಿಯಲ್ಲಿ ಮುಂಬೈಗೆ ಮರಳಿದ್ದು ರಿಸೆಪ್ಶನ್ ತಯಾರಿಗಳನ್ನು ಮಾಡುತ್ತಿದ್ದಾರೆ. ಇದೀಗ ನಟಿ ತಮ್ಮ ಮೆಹಂದಿ ತುಂಬಿದ ಕೈಗಳನ್ನು ತೋರಿಸಿದ್ದಾರೆ


ಕತ್ರೀನಾ ಕೈಫ್ ಅವರ ಮದುವೆಗೆ ದುಬಾರಿ ಮೆಹಂದಿಯನ್ನು ಬಳಸಲಾಗಿತ್ತು. ಜಗತ್ತಿನಲ್ಲೇ ಪ್ರಸಿದ್ಧವಾದ ಮಹೆಂದಿಯಿಂದ ಕತ್ರೀನಾ ಕೈಫ್ ಕೈಗಳನ್ನು ಅಲಂಕರಿಸಲಾಗಿತ್ತು. ಬ್ಯೂಟಿಫುಲ್ ನಟಿ ಹನಿಮೂನ್ ಹೋದಲ್ಲಿಂದ ತಮ್ಮ ರಂಗಿನ ಕೈಗಳನ್ನು ತೋರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಕೈತುಂಬಾ ಮದುವೆ ಬಳೆಗಳನ್ನು ಇಟ್ಟುಕೊಂಡಿರೋ ನಟಿಯ ಕೈಯಲ್ಲಿ ಮದರಂಗಿಯ ರಂಗು ತುಂಬಿಕೊಂಡಿರೋದನ್ನು ಇಲ್ಲಿ ಕಾಣಬಹುದು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ರಾಯಲ್ ವಿವಾಹ ಎಲ್ಲೆಡೆ ಸಖತ್ ಸುದ್ದಿಯಾಗಿದೆ. ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ದಂಪತಿಗಳು ವಿವಾಹವಾದರು. ಶೀಘ್ರದಲ್ಲೇ, ಅವರು ಹನಿಮೂನ್‌ಗೆ ತೆರಳಿದರು. ಕೆಲವೇ ದಿನಗಳ ಹಿಂದೆ ಮುಂಬೈಗೆ ಮರಳಿದರು. ಅವರು ಇನ್ನೂ ತಮ್ಮ ರಜಾದಿನದ ಗಮ್ಯಸ್ಥಾನವನ್ನು ಹಂಚಿಕೊಳ್ಳದಿದ್ದರೂ, ಕತ್ರಿನಾ ತನ್ನ ಮೆಹೆಂದಿ ಧರಿಸಿರುವ ಕೈಗಳನ್ನು ಪ್ರದರ್ಶಿಸುವಾಗ ಬೀಚ್‌ನ ನೋಟವನ್ನು ಹಂಚಿಕೊಂಡಿದ್ದಾರೆ. ಬಹುಶಃ ಜೋಡಿ ಮಾಲ್ಡೀವ್ಸ್‌ನಲ್ಲಿ ಕ್ವಿಕ್ ವೆಕೇಷನ್ ಎಂಜಾಯ್ ಮಾಡಿದಂತೆ ಕಾಣುತ್ತದೆ.

Tap to resize

Latest Videos

ಕತ್ರೀನಾ ಮದುವೆಗೆ ಸೋಜತ್ ಮೆಹಂದಿ, ಇದರ ವಿಶೇಷತೆ ಗೊತ್ತೇ ?

ಅವರ ಮದುವೆಯ(Marriage) ನಂತರ, ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ ಶೆರ್ಪುರ್, ಸವಾಯಿ ಮಾಧೋಪುರದಿಂದ ಚಾಪರ್‌ನಲ್ಲಿ ಹೊರಟರು. ದಂಪತಿಗಳು ತಮ್ಮ ಹನಿಮೂನ್‌ಗಾಗಿ(Honeymoon) ಮಾಲ್ಡೀವ್ಸ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಈಗ, ಕತ್ರಿನಾ ತಮ್ಮ ಹನಿಮೂನ್ ಡೆಸ್ಟಿನೇಷನ್‌ನ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಅವರು Instagram ನಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ, ಅಭಿಮಾನಿಗಳು ಅವರ ಮೆಹೆಂದಿ ವಿನ್ಯಾಸವನ್ನು ಹತ್ತಿರದಿಂದ ನೋಡಬಹುದು. ಅವಳು ತನ್ನ ಕೈಗಳನ್ನು ಚಾಚಿ ಸಮುದ್ರ ತೀರ ಮತ್ತು ಬೀಚ್ ಅನ್ನು ಹಿನ್ನೆಲೆಯಾಗಿರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಕತ್ರಿನಾ ಸಾಂಪ್ರದಾಯಿಕ ಬಳೆಗಳನ್ನು ಧರಿಸಿದ್ದರು. ಫೋಸ್ಟ್‌ಗೆ ನಟಿ ಹೃದಯದ ಎಮೋಜಿಯೊಂದಿಗೆ ಶೀರ್ಷಿಕೆ ನೀಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Katrina Kaif (@katrinakaif)

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಡಿಸೆಂಬರ್ 12 ರಂದು ತಮ್ಮ ಮೆಹೆಂದಿ ಸಮಾರಂಭದ ಮೊದಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ತಮ್ಮ ಸಂಬಂಧಿಕರೊಂದಿಗೆ ತುಂಬಾ ಮೋಜು ಮಾಡಿದ್ದಾರೆ ಎಂದು ತೋರುತ್ತಿದೆ.

ಕತ್ರೀನಾ ಕೈ ತುಂಬಿದ ಸೋಜತ್ ಮಹೆಂದಿ

ಐಶ್ವರ್ಯಾ ರೈ ಬಚ್ಚನ್‌(Aishwarya Rai bachchan)ನಿಂದ ತೊಡಗಿ ಪ್ರಿಯಾಂಕ ಚೋಪ್ರಾ ತನಕ ಸೆಲೆಬ್ರಿಟಿ ವಧುಗಳಾಗಿದ್ದವು ತಮ್ಮ ಕೈಗಳಿಗೆ ನೈಸರ್ಗಿಕ ಮಹೆಂದಿಯ ರಂಗು ತುಂಬಿದ್ದರು. ರಾಜಸ್ಥಾನದ(Rajastham) ಪಾಲಿ ಜಿಲ್ಲೆಯಲ್ಲಿರುವ ಸೋಜತ್(Sojat) ನಗರದ ಮೆಹಂದಿಯನ್ನೇ ಆರಿಸಿಕೊಂಡಿದ್ದರು ಬಾಲಿವುಡ್ (Bollywood)ನಟಿಯರು. ಈಗ ಇದಕ್ಕೆ ನಟಿ ಕತ್ರೀನಾ ಕೈಫ್ ಕೂಡಾ ಹೊರತಲ್ಲ.

ವಿವಾಹಿತರಾಗಲಿರೋ ಕತ್ರೀನಾ ಹಾಗೂ ವಿಕ್ಕಿ ಜೋಡಿಗೂ ಸೋಜತ್ ಮೆಹಂದಿ ರಂಗು ತುಂಬಲಿದೆ. ಸೋಜತ್‌ನಿಂದ 20 ಕೆಜಿ ಹಾಗೂ 400 ಕೋನ್‌ಗಳನ್ನು ಮದುವೆಯ ಮೆಹಂದಿ ಶಾಸ್ತ್ರಕ್ಕಾಗಿ ಕಳುಹಿಸಿಕೊಡಲಾಗಿದೆ. ಸೋಜತ್ ಮಹೆಂದಿ ಏಕೆ ಸ್ಪೆಷಲ್ ಎಂದು ಕೇಳಿದರೆ ಇದನ್ನು ನೈಸರ್ಗಿಕವಾಗಿ ತಯಾರಿಸುವುದೆ ಇದರ ವಿಶೇಷತೆ. ಹಾಗೆಯೇ ಇದಕ್ಕೆ ಪ್ರಾದೇಶಿಕ ಪ್ರಾಮುಖ್ಯತೆಯೂ ಇದೆ.

ಹೆನ್ನಾ ಗಿಡದ ಎಲೆಗಳು Lawsonia inermis ಎಂದು ಕರೆಯಲ್ಪಡುತ್ತವೆ. ಇದನ್ನು ಕೈಯಲ್ಲೇ ಆರಿಸಿಕೊಯ್ಯಲಾಗುತ್ತದೆ. ಒಳ್ಳೆಯ ಎಲೆಗಳನ್ನು ಆರಿಸಿಡುತ್ತಾರೆ. ನಂತರ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡುತ್ತಾರೆ. ಇದಕ್ಕೆ ನೀಲಗಿರಿ ಹಾಗೂ ಲವಂಗ ತೈಲವನ್ನು ಸೇರಿಸಿ ಪೇಸ್ಟ್ ಮಾಡಲಾಗುತ್ತದೆ. ಇದೇ ಹೆನ್ನಾವನ್ನು ಪಾಕಿಸ್ತಾನ ಹಾಗೂ ಪಾಶ್ಚಿಮಾತ್ಯ ಏಷ್ಯನ್ ರಾಷ್ಟ್ರಗಳಲ್ಲಿ ಬೆಳೆಯುತ್ತಾರಾದರೂ ಸೋಜತ್ ಮೆಹಂದಿಯ ಬಣ್ಣ ಭಿನ್ನವಾಗಿರುತ್ತದೆ. ಇದು ಮೆಹಂದಿ ಬೆಳೆಯುವ ಸೋಜತ್‌ನ ಮಣ್ಣಿನ ಗುಣ. ಸೋಜತ್ ಮಹೆಂದಿಯನ್ನು ಸುಮಾರು 100ಕ್ಕೂ ಹೆಚ್ಚು ದೇಶಕ್ಕೆ ಕಳುಹಿಸಲಾಗುತ್ತದೆ.

ಕತ್ರೀನಾ ಕೈಫ್ ಮದುವೆಗೆ ಮೆಹಂದಿ ಆರ್ಡರ್ ಪಡೆದ ನಿತೇಶ್ ಅಗರ್ವಾಲ್ ಅವರ ನ್ಯಾಚುರಲ್ ಹರ್ಬಲ್ಸ್ ಸೋಜತ್ ಕಂಪನಿ ತಮಗೆ 20 ಕೆಜಿ ಮೆಹಂದಿ ಹುಡಿ ಹಾಗೂ 400 ಕೋನ್‌ಗಳಿಗೆ ಆರ್ಡರ್ ಬಂದಿದೆ. ಇದು ನಮ್ಮ ಕಂಪನಿಗೆ ಹಾಗೂ ಸೋಜತ್‌ಗೆ ಹೆಮ್ಮೆ ಎಂದಿದ್ದಾರೆ. ಇದು ದೊಡ್ಡ ಆರ್ಡರ್ ಆಗಿದ್ದರೂ ಇದಕ್ಕೆ ಹಣವನ್ನು ಪಡೆದಿಲ್ಲ. ಇದನ್ನು ವಧುವಾಗಲಿರೋ ಕತ್ರೀನಾಗೆ ವಿವಾಹ ಉಡುಗೊರೆಯಾಗಿ ಕಳುಹಿಸಿ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

click me!