Malayalam Movies: ವೀಕೆಂಡ್‌ನಲ್ಲಿ ಮಲಯಾಳಂನ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ನೋಡಲು ಬಯಸುವವರಿಗೆ ಇಲ್ಲಿ 9 ಅತ್ಯುತ್ತಮ ಚಿತ್ರಗಳಿವೆ. ಅಂಜಮ್ ಪಥಿರಾ, ಕೊರೊನಾ ಪೇಪರ್ಸ್‌ನಂತಹ ಸಿನಿಮಾಗಳು ನಿಮ್ಮನ್ನು ರಂಜಿಸುತ್ತವೆ.
Malayalam Thriller Movies: ನೀವು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ನೋಡಲು ಹೆಚ್ಚು ಇಷ್ಟಪಡುತ್ತೀರಾ? ಥಿಯೇಟರ್‌ಗೆ ಯಾವುದೇ ಹೊಸ ಹಾರರ್, ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಸಿನಿಮಾ ಬರುತ್ತಿಲ್ಲ ಎಂದು ಕಾಯುತ್ತಿದ್ದೀರಾ? ಹಾಗಾದ್ರೆ ಬೇಸರ ಮಾಡಿಕೊಳ್ಳಬೇಡಿ. ದಕ್ಷಿಣ ಭಾರತದ ಮಲಯಾಳಂ ಸಿನಿಮಾ ಅಂಗಳ ಇಡೀ ದೇಶವೇ ಬೆರಗಾಗುವಂತಹ ಚಿತ್ರಗಳನ್ನು ನೀಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಲಯಾಳಂ ಸಿನಿಮಾ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಈ ವೀಕೆಂಡ್‌ಗೆ ಸಿನಿಮಾ ನೋಡುವ ಪ್ಲಾನ್ ಮಾಡಿಕೊಂಡಿದ್ರೆ ಮಲಯಾಳಂ ಭಾಷೆಯ ಈ 9 ಚಿತ್ರಗಳನ್ನು ನೋಡಿ.
1.ಅಂಜಮ್ ಪಥಿರಾ (Anjaam Pathiraa)
ಮಲಯಾಳಂನ ಸೂಪರ್ ಸಸ್ಪೆನ್ಸ್ ಸಿನಿಮಾಗಳಲ್ಲಿ ಅಂಜಮ್ ಪಥಿರಾ ಸಹ ಒಂದಾಗಿದೆ. ನಿಮಗೆ ಕ್ರೈಂ ಮಿಸ್ಟರಿ ಸಿನಿಮಾಗಳನ್ನು ಇಷ್ಟಪಡ್ತಿದ್ರೆ, ಇದನ್ನು ಮಿಸ್ ಮಾಡದೇ ನೋಡಿ. ಅಂಜಮ್ ಪಥಿರಾ ಸಿನಿಮಾವನ್ನು ಸನ್ ನೆಕ್ಷ್ಟ್ ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದಾಗಿದೆ. ಹಿಂದಿಯಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
2.ಕೊರೊನಾ ಪೇಪರ್ಸ್ (Corona Papers)
ಕೊರೊನಾ ಪೇಪರ್ಸ್ ಸಸ್ಪೆನ್ಸ್‌ಗಳಿಂದ ತುಂಬಿರುವ ಸಿನಿಮಾ ಆಗಿದೆ. ಈ ಚಿತ್ರದ ಕಥೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
3.ಗೋಲಂ (Golam)
ಮಲಯಾಳಂನ ಮತ್ತೊಂದು ಅದ್ಭುತ ಸಿನಿಮಾವೇ ಗೋಲಂ. ಚಿತ್ರದ ಒಂದೊಂದು ದೃಶ್ಯವೂ ಪರದೆ ಮೇಲೆ ಅಚ್ಚುಕಟ್ಟಾಗಿ ತೋರಸಲಾಗಿದೆ. ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದ್ದು, ಕನ್ನಡ, ಹಿಂದಿ, ತೆಲಗು ಭಾಷೆಗಳಲ್ಲಿ ಲಭ್ಯವಿದೆ.
4.ಜೋಸೆಫ್ (Joseph)
ಥ್ರಿಲ್ಲರ್ ಕಥೆಯನ್ನು ಹೊಂದಿರುವ ಜೋಸೆಫ್ ನಿಮ್ಮನ್ನು ಪ್ರತಿಕ್ಷಣಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಚಿತ್ರದ ಪ್ರತಿಯೊಂದು ಪಾತ್ರಗಳು ಸುಂದರವಾಗಿ ಮೂಡಿಬಂದಿದ್ದು, ಕಥೆ ನಿಮಗೆ ಎಲ್ಲಿಯೂ ಬೇಸರವನ್ನುಂಟು ಮಾಡುವುದಿಲ್ಲ. ಈ ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಭೂತದ ಬಂಗ್ಲೆ, ರಾಣಿಯ ಆತ್ಮ; ಭಯಕ್ಕೂ ಭಯ ಹುಟ್ಟಿಸೋ ಲೇಡಿ ಓರಿಯೆಂಟೆಡ್ ಹಾರರ್ ಸಿನಿಮಾ
5.ಕಾಸರಗೋಲ್ಡ್ (Kasargold)
ಇದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಿಶ್ರಿತ ಕಥೆಯನ್ನು ಹೊಂದಿರುವ ಸಿನಿಮಾ ಆಗಿದೆ. ಈ ರೀತಿಯೂ ನಡೆಯುತ್ತಾ ಅನ್ನೋ ಪ್ರಶ್ನೆ ನೋಡುಗರಲ್ಲಿ ಮೂಡಿಸುತ್ತದೆ. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿ ಆನಂದಿಸಬಹುದು.
6.ಕುರುಥಿ (Kuruthi)
ಮನು ವಾರಿಯರ್ ನಿರ್ದೇಶನದ ಕುರುಥಿ ಸಿನಿಮಾದಲ್ಲಿ 2021ರಲ್ಲಿ ಬಿಡುಗಡೆಯಾಗಿತ್ತು. ಪೃಥ್ವಿರಾಜ್ ಸುಕುಮಾರನ್, ರೋಷನ್ ಮ್ಯಾಥಿಯೂ, ಮುರಳಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 7.5 ರೇಟಿಂಗ್ ಇರೋ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!
7.ಅಪರೇಷನ್ ಜಾವಾ (Operation Java)
ಆಪರೇಷನ್ ಜಾವಾ' ಒಂದು ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಕೊನೆಯವರೆಗೂ ನಿಮ್ಮನ್ನು ತನ್ನ ಹಿಡಿತದಲ್ಲಿಯೇ ಇರಿಸಿಕೊಳ್ಳವಂಯ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿನ ಕೆಲ ಸನ್ನಿವೇಶಗಳು ನಿಮ್ಮ ಹೃದಯಬಡಿತವನ್ನು ಹೆಚ್ಚಿಸುತ್ತವೆ. ಜಿ5ನಲ್ಲಿ ಈ ಸಿನಿಮಾ ನೋಡಿ.
8.ಪುಲಿಮಾಡಾ (Pulimada)
'ಪುಲಿಮಾಡ' ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ ಗಳಿಂದ ತುಂಬಿರುವ ಸಿನಿಮಾವಾಗಿದೆ. ಚಿತ್ರದ ಮೇಕಿಂಗ್ ಪ್ರೇಕ್ಷಕರನ್ನು ಪ್ರತಿ ಕ್ಷಣವೂ ಸೆರೆಹಿಡಿಯುತ್ತದೆ. ಈ ಚಿತ್ರದಲ್ಲಿ ನಿಮಗೆ ಒಂದು ಕುತೂಹಲಕಾರಿ ಕಥೆ ಸಿಗುತ್ತದೆ. ನೀವು ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
9.ಟರ್ಬೊ (Turbo)
ಸ್ಪೀಡ್ ಮತ್ತು ರೋಮಾಂಚಕ ಸಿನಿಮಾ ನೋಡಲು ಇಷ್ಟಪಡುತ್ತಿದ್ರೆ ಟರ್ಬೊ ನೋಡಲೇಬೇಕು. 2024ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಮಮ್ಮೂಟಿ, ಅಂಜನಾ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಈ ಸಿನಿಮಾವನ್ನು ನೀವು SonyLivನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!