ರಣಬೀರ್​ ಕಪೂರ್​- ರಶ್ಮಿಕಾ ಬೆಡ್​ರೂಮ್​ ಸೀನ್​ ಲೀಕ್​: ಇನ್ನೇನ್​ ಉಳಿಸಿದ್ಯಪ್ಪಾ ಎಂದು ಕೇಳಿದ ಫ್ಯಾನ್ಸ್​

By Suvarna News  |  First Published Dec 3, 2023, 3:55 PM IST

ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅಭಿನಯದ ಅನಿಮಲ್​ ಚಿತ್ರದಲ್ಲಿ ಕತ್ತರಿ ಬಿದ್ದಿದ್ದ ಕೆಲವೊಂದು ಬೆಡ್​ರೂಮ್​  ಸೀನ್​ಗಳು ಲೀಕ್​  ಆಗಿವೆ. ಇದನ್ನು ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ.
 


 ನಟ ರಣಬೀರ್‌ ಕಪೂರ್‌ (Ranbir Kapoor)  ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಇದೇ 1ರಂದು ಬಿಡುಗಡೆಯಾಗಿದ್ದು, ಭಾರಿ  ಸದ್ದು ಮಾಡುತ್ತಿದೆ.  ಚಿತ್ರ ಬಿಡುಗಡೆಯಾಗಿ ಮೂರೇ ದಿನದಲ್ಲಿ 230 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದರ ಟ್ರೇಲರ್​ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದಾಗಲೇ ಭಾರಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ,   ಅನಿಮಲ್​ (Animal) ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​ ಮತ್ತು ಬ್ರಹ್ಮಾಸ್ತ್ರದ ದಾಖಲೆಗಳನ್ನು ಮುರಿದು ಹಾಕಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದ್ದು, ಇಲ್ಲಿಯ ಸ್ಕ್ರೀನಿಂಗ್​ಗೆ ಸಂಬಂಧಿಸಿದಂತೆ ಅನಿಮಲ್​ ದಾಖಲೆ ಬರೆದಿದೆ.  ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ರಶ್ಮಿಕಾ ತೆಲುಗಿನಲ್ಲಿ ಫೆಮಿಲಿಯರ್ ಆಗಿರುವುದರಿಂದ ತೆಲುಗಿನಲ್ಲಿ ತಮಿಳಿಗಿಂತ ಅಧಿಕ ಟಿಕೆಟ್ ಸೇಲ್ ಆಗಿದೆ. ಹಿಂದಿಯಲ್ಲಿಯೂ ಒಳ್ಳೆಯ ರೀತಿಯಲ್ಲಿ ಟಿಕೆಟ್​ ಮಾರಾಟವಾಗಿದೆ.  ಪ್ಯಾನ್ ಇಂಡಿಯಾ ಸಿನಿಮಾವನ್ನು ಕಬೀರ್ ಸಿಂಗ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ  ಅನಿಲ್ ಕಪೂರ್, ಬಾಬಿ ಡಿಯೋಲ್,  ತೃಪ್ತಿ ದಿಮ್ರಿಯೂ ನಟಿಸಿದ್ದಾರೆ.  ಭೂಷಣ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಅವರ ಟಿ ಸಿರೀಸ್ ಈ ಸಿನಿಮಾವನ್ನು ನಿರ್ಮಿಸಿದೆ.  ಸಿನಿಮಾ ಹಿಂದಿ, ತಮಿಳು, ಕನ್ನಡ, ಮಲಯಾಳದಲ್ಲಿ ರಿಲೀಸ್ ಆಗಿದೆ.

ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದೆ. ಕತ್ತರಿ ಹಾಕಿದ  ಮೇಲಷ್ಟೇ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮೊದಲು ರಿಲೀಸ್​ ಆಗಿದ್ದ ಹಾಡೊಂದು ಹಲ್​ಚಲ್​ ಸೃಷ್ಟಿಸಿತ್ತು. ಅದರಲ್ಲಿ  ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಲಿಪ್​ಲಾಕ್​ ಸೀನ್​ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು.  .  ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​  ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್​ ಆಗುತ್ತಲೇ ಇದೆ.  ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ಆದರೆ ಇಂಥ ದೃಶ್ಯಗಳು ಚಿತ್ರಗಳಲ್ಲಿ ಹೇರಳವಾಗಿರುವ ಕಾರಣ ಎಲ್ಲಾ ದೃಶ್ಯಗಳನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಟ್​ ಮಾಡುವಂತೆ ಆದೇಶಿಸಿದೆ. ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ ಹೇರಳವಾಗಿರುವ ಕಾರಣ, ಅಡಲ್ಟ್​ ಸರ್ಟಿಫಿಕೇಟ್​ (A Certificate) ನೀಡಲಾಗಿದ್ದರೂ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮಂಡಳಿ ನಿರ್ದೇಶಿಸಿತ್ತು.

Tap to resize

Latest Videos

ಹಸಿಬಿಸಿ ದೃಶ್ಯ ಮುಗಿಸಿದ ಮೇಲಾದ್ರೂ ಮಗಳು ನೆನಪಾದ್ಲಾ ಎಂದು ರಣಬೀರ್‌ ಕಪೂರ್‌ ಕಾಲೆಳೆದ ನೆಟ್ಟಿಗರು

ಆದರೆ ಇದೀಗ ಕೆಲವು ಹಸಿಬಿಸಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಇದನ್ನು ನೋಡಿ ಆಲಿಯಾ ಭಟ್​ ಪತಿ ರಣಬೀರ್​ ಕಪೂರ್​ಗೆ ಫ್ಯಾನ್ಸ್​ ಇನ್ನೇನು ಬಾಕಿ ಉಳಿಸಿದ್ಯಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ!  ಮತ್ತೆ ಕೆಲವರು ಇದೇ ಕಾರಣಕ್ಕೆ ರಶ್ಮಿಕಾರನ್ನು ನೋಡಿ ಆಲಿಯಾ ಭಟ್​ ಉರಿದುಕೊಂಡಿರುವುದು ಎಂದು ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ,  ಅನಿಮಲ್‌ ಚಿತ್ರ ಭರ್ಜರಿ ಓಡುತ್ತಿರುವ ನಡುವೆಯೇ, ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್‌ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ತಬ್ಬಿಕೊಂಡಿದ್ದಾರೆ. ಆದರೆ ರಶ್ಮಿಕಾ ಆಲಿಯಾ ಅವರನ್ನು ಸರಿಯಾಗಿ ಹಗ್‌ ಮಾಡದೇ ಇರುವುದು ಗಮನ ಸೆಳೆದರೆ, ಅದೇ ಇನ್ನೊಂದೆಡೆ ಆಲಿಯಾ ಭಟ್‌ ರಶ್ಮಿಕಾರನ್ನು ನೋಡಿ ಅಸಡ್ಡೆಯಿಂದ ಹಗ್‌ ಮಾಡಿರುವುದನ್ನು ನೋಡಬಹುದು. 


ಮಾತ್ರವಲ್ಲದೇ ನಗಬೇಕಲ್ಲಾ ಎಂದು ಸೊಟ್ಟಮೂತಿ ಮಾಡಿಕೊಂಡು ಆಲಿಯಾ ನಕ್ಕು, ಹಗ್‌ ಮಾಡಿಕೊಂಡಂತೆ ನಾಟಕ ಮಾಡಿ ಅತ್ತ ಹೋಗಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.  ಇದೀಗ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣನವರ ಈ ಬೆಡ್​ರೂಮ್​ ಸೀನ್​ ನೋಡಿದ ಮೇಲೆ ಫ್ಯಾನ್ಸ್​, ಆಲಿಯಾ ಭಟ್​ ಯಾಕೆ ಹಾಗೆ ಮಾಡಿದ್ಲು ಅಂತ ಗೊತ್ತಾಯ್ತು ಬಿಡಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಡೀಪ್​ಫೇಕ್​ ರಶ್ಮಿಕಾಗೆ ಇದರ ಮುಂದೆ ಯಾವ ಲೆಕ್ಕ ಎನ್ನುತ್ತಿದ್ದಾರೆ. 

ರಶ್ಮಿಕಾ ಹಗ್‌ ಮಾಡ ಬಂದಾಗ ಆಲಿಯಾ ಭಟ್‌ ಹೀಗ್‌ ಮಾಡೋದಾ? ಅವಳೇನು ಸವತಿನಾ ಕೇಳಿದ ನೆಟ್ಟಿಗರು!

I Knew It, Just Things🙂 pic.twitter.com/wVkU0JNgyu

— Sakil Rahman SRK (@Sakil_Rahmanz)
click me!