ಅಕ್ಷಯ್​ಗೆ ಲಕ್ಕಿಮ್ಯಾನ್​ ಆಗುವರೇ ಸಲ್ಲು ಭಾಯ್​? ಮದುವೆಯಲ್ಲಿ ಇಬ್ಬರ ಭರ್ಜರಿ ಸ್ಟೆಪ್​

By Suvarna News  |  First Published Feb 21, 2023, 12:56 PM IST

ಮದುವೆ ಸಮಾರಂಭವೊಂದರಲ್ಲಿ ನಟರಾದ ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಸಕತ್​ ಸ್ಟೆಪ್ಸ್​ ಹಾಕಿದ್ದಾರೆ. ನೆಟ್ಟಿಗರು ಏನೆನ್ನುತ್ತಿದ್ದಾರೆ?
 


ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು  ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಪಠಾಣ್​ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಯಿತು ಎನ್ನುವ ಮಾತೂ ಬಿ-ಟೌನ್​ನಲ್ಲಿ ಕೇಳಿಬರುತ್ತಿದೆ. ಇದೇ ಮಾದರಿಯನ್ನು ನಟ ಅಕ್ಷಯ್​ ಕುಮಾರ್​ ಅವರೂ ತಮ್ಮ ಮುಂಬರುವ ಚಿತ್ರ ಸೆಲ್ಫಿಗಾಗಿ ಮಾಡುತ್ತಿರುವುದಾಗಿ ಇದೇ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ತಿಂಗಳು 24ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದು ಹಾಸ್ಯ ಭರಿತ ಸಿನಿಮಾವಾಗಿದ್ದು,  ರಾಜ್ ಮೆಹ್ತಾ (Raj Mehta) ನಿರ್ದೇಶನ ಮಾಡಿದ್ದಾರೆ. ಸಲ್ಮಾನ್​ ಖಾನ್​ ತಮಗೆ ಲಕ್ಕಿ ಎಂದು ಸಾಬೀತಾಗಲಿ ಎನ್ನುವ ಕಾರಣಕ್ಕೆ ಚಿತ್ರದ ಪ್ರಮೋಷನ್​ ವೇಳೆ ಇತ್ತೀಚೆಗೆ  ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಅವರನ್ನೂ ಕರೆದಿದ್ದರು. ಇಬ್ಬರೂ ಸಖತ್ ಡಾನ್ಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿತ್ತು. ಸಲ್ಮಾನ್​ ಖಾನ್​ ನಿಜಕ್ಕೂ ಅಕ್ಷಯ್​ ಕುಮಾರ್​ ಅವರಿಗೆ ಅದೃಷ್ಟ ತಂದುಕೊಡುವರೆ ಎಂಬ ಬಗ್ಗೆ ಈಗ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ, ದೆಹಲಿಯಲ್ಲಿ ನಡೆದ ಅದ್ಧೂರಿ ಮದುವೆಯ ಸಮಾರಂಭದಲ್ಲಿ  ಈ ಜೋಡಿ ಮತ್ತೆ ಕಾಣಿಸಿಕೊಂಡಿದೆ.  ಅಕ್ಷಯ್ ಕುಮಾರ್ (Akshay Kumar) ಮತ್ತು ಸಲ್ಮಾನ್ ಖಾನ್ ಇಬ್ಬರೂ ಇದರಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಸಕತ್​ ಡಾನ್ಸ್​ ವೈರಲ್​ ಆಗುತ್ತಿದೆ. ಸಲ್ಮಾನ್ ಮತ್ತು ಅಕ್ಷಯ್ ವೇದಿಕೆಯಲ್ಲಿ ಪೂರ್ಣ ಉತ್ಸಾಹ ಮತ್ತು ಶಕ್ತಿಯೊಂದಿಗೆ ಪ್ರದರ್ಶನ ನೀಡುತ್ತಿದ್ದಾರೆ. 

ಸಲ್ಮಾನ್ ಖಾನ್ ಸರಳವಾದ ಕಪ್ಪು ಶರ್ಟ್ ಮತ್ತು ಪ್ಯಾಂಟ್ ಆರಿಸಿಕೊಂಡರೆ,  ಅಕ್ಷಯ್ ಹೊಳೆಯುವ ಕುರ್ತಾ ಧರಿಸಿದ್ದಾರೆ. ಅಕ್ಷಯ್ ವೇದಿಕೆಯಲ್ಲಿ ಮೈನ್ ಕಿಲಾಡಿ ತು ಅನಾರಿ ಎಂಬ ಸೆಲ್ಫಿ ಹಾಡಿಗೆ ನೃತ್ಯ ಮಾಡಿದರೆ, ಸಲ್ಮಾನ್ ಖಾನ್​, ತಮ್ಮ  ದಬಾಂಗ್ 3 (Dabang-3) ಚಿತ್ರದ ಮುನ್ನಾ ಬದ್ನಾಮ್ ಹುವಾವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಅಂದಹಾಗೆ, ಬಾಲಿವುಡ್‌ನ 'ಖಿಲಾಡಿ ಕುಮಾರ್' ಮನರಂಜನೆಯ  ರಾಜ ಎಂದೇ ಹೆಸರಾಗಿದ್ದಾರೆ.   55 ನೇ ವಯಸ್ಸಿನಲ್ಲಿಯೂ  ಅಕ್ಷಯ್ ಜನರ ಹೃದಯವನ್ನು ಹೇಗೆ ಗೆಲ್ಲಬೇಕು ಎಂದು ತಿಳಿದಿದ್ದಾರೆ ಮತ್ತು ಹೀಗಾಗಿ, ಅವರು ಮದುವೆ ಅಥವಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರದರ್ಶನ ನೀಡಿದಾಗ, ಅವರು ವಿಧಿಸುವ ಮೊತ್ತ  2.5 ಕೋಟಿ ರೂ. ಇನ್ನು ಸಲ್ಮಾನ್ ಖಾನ್, ಬಾಲಿವುಡ್‌ನ ಭಾಯಿಜಾನ್.  ಡೌನ್ ಟು ಅರ್ಥ್ ಸ್ವಭಾವ ಮತ್ತು ವರ್ಚಸ್ವಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಸಲ್ಮಾನ್  ಮದುವೆ ಅಥವಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ನೃತ್ಯ ಪ್ರದರ್ಶನಕ್ಕೆ 2 ಕೋಟಿ ರೂಪಾಯಿ. 

Tap to resize

Latest Videos

Marriage Fees: ಮದುವೆ, ಪಾರ್ಟಿಗಳಿಗೆ ಈ ತಾರೆಯರು ಪಡೆಯೋ ದುಡ್ಡು ಎಷ್ಟು ಗೊತ್ತಾ?

ಈ ಕಾರ್ಯಕ್ರಮಕ್ಕೆ ನಟರು ಎಷ್ಟು ಶುಲ್ಕ ವಿಧಿಸಿದ್ದಾರೋ ತಿಳಿದಿಲ್ಲ. ಒಟ್ಟಿನಲ್ಲಿ ಇವರ ನೃತ್ಯದ ಹವಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜೋರಾಗಿ ವೈರಲ್​ ಆಗುತ್ತಿದೆ. ಈ ಜೋಡಿಗೆ  ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಒಬ್ಬ ಅಭಿಮಾನಿ, 'ಇದು ಪ್ರಶಸ್ತಿ ಸಮಾರಂಭದಂತೆ ಕಾಣಿಸುತ್ತಿದೆ' ಎಂದು ಬರೆದಿದ್ದರೆ, ಅದಕ್ಕೆ ಇನ್ನೊಬ್ಬ ತರ್ಲೆ ನೆಟ್ಟಿಗ, ಇದು ಮದುವೆ ಸಮಾರಂಭ. ಮದುವೆಯೆನ್ನೋದು ಒಂಥರಾ ಅವಾರ್ಡ್​ ಇದ್ದಹಾಗೆ. ಆದರೆ ಎಲ್ಲವೂ ಸರಿಯಾಗಬೇಕು ಅಷ್ಟೇ' ಎಂದಿದ್ದಾರೆ. ಇನ್ನೋರ್ವ ಸಲ್ಲು ಭಾಯಿ ಡಾನ್ಸ್​ಗೆ ಮರುಳಾಗಿ ಈ ಮದುವೆ ಮನೆಯಲ್ಲಾದರೂ ಯಾರಾದರೊಬ್ಬಳು ಸಿಗಲಪ್ಪಾ ಎಂದು ಕಾಲೆಳೆದಿದ್ದಾರೆ. 

ಇನ್ನು ಸೆಲ್ಫಿ ಚಿತ್ರದ ಬಗ್ಗೆ ಹೇಳುವುದಾದರೆ, ಇದು2019 ರ ಮಲಯಾಳಂ ಹಾಸ್ಯ ನಾಟಕ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್, ಸೆಲ್ಫಿಯಲ್ಲಿ (Selfie) ನುಶ್ರತ್ ಭರುಚ್ಚ ಮತ್ತು ಡಯಾನಾ ಪೆಂಟಿ ಕೂಡ ನಟಿಸಿದ್ದಾರೆ. ರಾಜ್ ಮೆಹ್ತಾ ನಿರ್ದೇಶನದ ಇದು ಫೆಬ್ರವರಿ 24 ರಂದು ಥಿಯೇಟರ್‌ಗಳಿಗೆ ಬರಲಿದೆ. ಮತ್ತೊಂದೆಡೆ, ಸಲ್ಮಾನ್ ಖಾನ್  ಕಿಸಿ ಕಾ ಭಾಯ್, ಕಿಸಿ ಕಾ ಜಾನ್ ನಲ್ಲಿ ನಟಿಸಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ ಮತ್ತು ಶೆಹನಾಜ್ ಗಿಲ್ ಸೇರಿದಂತೆ ಇತರ ತಾರಾಬಲವಿದೆ.

Rajinikanth: ಅಬ್ಬಬ್ಬಾ! ಮಗಳ ಚಿತ್ರಕ್ಕೂ ರಜನಿಕಾಂತ್​ ಈ ಪರಿ ಸಂಭಾವನೆನಾ?

 

 

click me!