ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಏಪ್ರಿಲ್ ಎರಡನೇ ವಾರದಲ್ಲಿ ನಡೆಯಲಿದ್ದು, ರಣಬೀರ್ ಪೂರ್ವಜರ ಮನೆಯಲ್ಲಿಯೇ ಮದುವೆ ನಡೆಯಲಿದೆಯಂತೆ. ಇಬ್ಬರ ಮದುವೆ 450 ಜನ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ವಿಚಾರ ಅನೇಕ ತಿಂಗಳಿಂದ ಸದ್ದು ಮಾಡುತ್ತಿದೆ. ಸ್ಟಾರ್ ಜೋಡಿ ಕಳೆದ ವರ್ಷವೇ ಹಸೆಮಣೆ ಏರಲಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಕಳೆದ ವರ್ಷ ಕಳೆದು, ಈ ವರ್ಷದ ಯುಗಾದಿ ಹಬ್ಬ ಕೂಡ ಮುಗಿಯಿತು. ಆದರೆ ಇನ್ನೂ ಸುದ್ದಿ ಹರಿದಾಡುತ್ತಲೆ ಇದೆ. ಇದೀಗ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಸುದ್ದಿ ಪ್ರಕಾರ ಅಲಿಯಾ ಮತ್ತು ರಣಬೀರ್ ಇಬ್ಬರು ಇದೆ ತಿಂಗಳು ಏಪ್ರಿಲ್ ನಲ್ಲಿ ಮದುವೆಯಾಗುತ್ತಿದೆ ಎನ್ನಲಾಗುತ್ತಿದೆ.
ಈಗಾಗಲೇ ಅಲಿಯಾ ಮತ್ತು ರಣಬೀರ್ ಮದುವೆ ಸಿದ್ಧವಾಗುತ್ತಿದ್ದು, ಅದ್ದೂರಿಯಾಗಿ ಹಣ ಮನೆ ಏರುತ್ತಿದ್ದಾರೆ. ರಣಬೀರ್ ಮತ್ತ ಅಲಿಯಾ ಸುಂದರ ಸ್ಥಳದಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೀಗ ಈ ಸ್ಟಾರ್ ಜೋಡಿ ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದೆ ಎಂದು ಪಿಂಕ್ ವಿಲ್ಲ ವರದಿ ಮಾಡಿದೆ. ಪೂರ್ವಜರ ಮನೆ ಎಂದರೆ ರಣಬೀರ್ ಕಪೂರ್ ಪೂರ್ವಜರು ಬದುಕಿ ಬಾಳಿದ ಆರ್ ಕೆ ಮನೆ. ವಿಶೇಷ ಎಂದರೆ ಇದೆ ಮನೆಯಲ್ಲಿ ರಣಬೀರ್ ತಂದೆ-ತಾಯಿ ಅಂದರೆ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಯಾಗಿದ್ದು ಸಹ ಅದೆ ಹಳೆಯ ಮನೆಯಲ್ಲಿ. ಹಾಗಾಗಿ ಅದೇ ಮನೆಯಲ್ಲಿ ರಣಬೀರ್ ಕೂಡ ಅಲಿಯಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ರಣಬೀರ್ ಮತ್ತು ಅಲಿಯಾ ಮದುವೆ ಏಪ್ರಿಲ್ ಎರಡನೇ ವಾರದಲ್ಲಿ ನಡೆಯಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಇನ್ನು ಇಬ್ಬರ ಮದುವೆ ಬರುವ ಅತಿಥಿಗಳ ಲಿಸ್ಟ್ ಕೂಡ ರೆಡಿಯಾಗಿದೆ. ಕೇವಲ 450 ಜನ ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಲಿಯಾ ಮತ್ತು ರಣಬೀರ್ ಮದುವೆ ಏಪ್ರಿಲ್ ಕೊನೆಯಲ್ಲಿ ನಿಗದಿಯಾಗಿತ್ತಂತೆ. ಆದರೆ ಅಲಿಯಾ ಭಟ್ ಕುಟುಂಬದ ಹಿರಿಯರೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಮುಂಚಿತವಾಗಿಯೇ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಮದುವೆ ಬಗ್ಗೆ ಅಳಿಯಾ ಮತ್ತು ರಣಬೀರ್ ಕಡೆಯಿಂದ ಅಧಿಕೃತ ಮಾಹಿತಿ ಇನ್ನೂ ಬಹಿರಂಗ ಪಡಿಸಬೇಕಿದೆ.
ಮೊದಲ ಬಾರಿಗೆ ಆಮೀರ್ ಖಾನ್ ಜೊತೆ ಅಲಿಯಾ ನಟನೆ; ಇಲ್ಲಿದೆ ವಿವರ
ಗರಂ ಆಗಿದ್ದ ರಣಬೀರ್
ಈ ಹಿಂದೆ ಅಲಿಯಾ ಜೊತೆ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ರಣಬೀರ್ ಗರಂ ಆಗಿದ್ದರು. ಮಾಧ್ಯಮಗಳಿಗೆ ನನ್ನ ಮದುವೆ ಬಗ್ಗೆ ಘೋಷಣೆ ಮಾಡಲು ನನಗೆ ಹುಚ್ಚುನಾಯಿ ಕಡಿದಿಲ್ಲ ಎಂದು ಹೇಳಿದ್ದರು. ಶೀಘ್ರದಲ್ಲೇ ನಡೆಯಲಿದೆ. ಈ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದ್ದರು.
RRR ತಯಾರಕರ ಬಗ್ಗೆ Alia Bhatt ಅಸಮಾಧಾನ? SS Rajamouli ಅನ್ನು unfollow ಮಾಡಿದ ನಟಿ?
ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಅಲಿಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಲಿಯಾ ಇತ್ತೀಚಿಗಷ್ಟೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸುಮಾರು 5 ವರ್ಷಗಳಿಂದ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಮೊನ್ನೆಯಷ್ಟೆ ಚಿತ್ರೀಕರಣ ಮುಗಿಸಿ ಸಂತಸ ಪಟ್ಟಿದೆ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಭಟ್ ಒಟ್ಟಿಗೆ ನಟಿಸಿದ್ದು, ಈ ಸಿನಿಮಾ ಚಿತ್ರೀಕರಣ ವೇಳೆಯೇ ಇಬ್ಬರಿಗೂ ಲವ್ ಆಗಿದ್ದು, ಇದೀಗ ಮದುವೆ ವರೆಗೂ ಬಂದಿದೆ. ಈ ಸಿನಿಮಾ ಜೊತೆಗೆ ಅಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸುತ್ತಿದ್ದಾರೆ. ಇನ್ನು ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.