ರಣಬೀರ್‌ ಜೊತೆ ಶೂಟಿಂಗ್‌ ಸೆಟ್‌ಗೆ ಬಂದ ಅಮ್ಮ ನೀತು ಕಪೂರ್

Published : Apr 06, 2022, 07:59 PM IST
ರಣಬೀರ್‌ ಜೊತೆ ಶೂಟಿಂಗ್‌ ಸೆಟ್‌ಗೆ ಬಂದ ಅಮ್ಮ ನೀತು ಕಪೂರ್

ಸಾರಾಂಶ

ರಣಬೀರ್‌ ಕಪೂರ್‌ ಆಲಿಯಾ ಮದುವೆ ಪುತ್ರನೊಂದಿಗೆ ಶೂಟ್‌ನಲ್ಲಿ ಭಾಗಿಯಾದ ನೀತು ಕಪೂರ್

ಬಾಲಿವುಡ್‌ ಜೋಡಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಮದುವೆಯ ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಮದುವೆಗೆ ಈಗಾಗಲೇ ಸಿದ್ಧತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ರಣಬೀರ್ ತಾಯಿ ನೀತು ಕಪೂರ್  ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೆಳತಿ ಆಲಿಯಾ ಭಟ್ ಅವರೊಂದಿಗಿನ ರಣ್‌ಬೀರ್‌ ಮದುವೆಯ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ಮಧ್ಯೆ, ರಣಬೀರ್ ಕಪೂರ್ ಅವರು ತಮ್ಮ ತಾಯಿ ನೀತು ಕಪೂರ್ ಅವರೊಂದಿಗೆ ಮುಂಬೈನಲ್ಲಿ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಅವರಿಬ್ಬರು ಜೊತೆಗಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ನೀತು ಬುಧವಾರ ತನ್ನ ಮಗ ರಣಬೀರ್ ಜೊತೆಗಿನ ಕೆಲಸದ ಸಂದರ್ಭದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ  ಫೋಟೋಗೆ ನಗುತ್ತಾ ಫೋಸ್ ಕೊಟ್ಟಿದ್ದಾರೆ. ಅವರ ಹಿಂದೆ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ನನ್ನ ಜಾನೆ ಜಿಗರ್ (ಹೃದಯ ಬಡಿತ) ಜೊತೆಗೆ ಜಾಹೀರಾತು ಶೂಟ್ ಎಂದು ನೀತು ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ತಾಯಿ ಮತ್ತು ಮಗನ ಈ ಸಿಹಿ ಚಿತ್ರಕ್ಕೆ ರಿದ್ಧಿಮಾ ಕಪೂರ್ ಶಾನಿ (Riddhima Kapoor Shani), ದಿಯಾ ಮಿರ್ಜಾ ( Dia Mirza), ಸೋನಿ ರಜ್ದಾನ್ (Soni Razdan), ಸಬಾ ಅಲಿ ಖಾನ್ (Saba Ali Khan)ಮತ್ತು ಇತರರು ಪ್ರತಿಕ್ರಿಯಿಸಿದ್ದಾರೆ.

 

ಇತ್ತ ರಣಬೀರ್ ಆಲಿಯಾ  ಮದುವೆ ಏಪ್ರಿಲ್ 14 ರಂದು ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಈ ಜೋಡಿಯಾಗಲಿ ಅಥವಾ ಕುಟುಂಬದವರಾಗಲಿ ಖಚಿತಪಡಿಸಿಲ್ಲ. 2020ರಲ್ಲಿ ರಣಬೀರ್ ಅವರಿಗೆ ಕೋವಿಡ್‌ ಬರದಿದ್ದರೆ ಆ ವರ್ಷವೇ ಇವರಿಬ್ಬರ ವಿಹಾ ನಡೆಯುತ್ತಿತ್ತು. ಆಲಿಯಾ ಮತ್ತು ರಣಬೀರ್ ತಾವಿಬ್ಬರೂ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಬ್ರಹ್ಮಾಸ್ತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ ಮತ್ತು ಈ ವರ್ಷದ  ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಣಬೀರ್ ಶಿವನ ಪಾತ್ರದಲ್ಲಿ ನಟಿಸಿದ್ದು, ಆಲಿಯಾಗೆ  ಇಶಾ ಪಾತ್ರವಿದೆ. ಈ ಸಾಹಸಮಯ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ರಿವೀಲ್ ಆಗಿದೆ.

Ranbir Kapoor ಮಾಜಿ ಗೆಳತಿಯ ಪತಿ Alia Bhatt ಅವರ ಕ್ಲೋಸ್‌ ಫ್ರೆಂಡ್‌!

ಮತ್ತೊಂದು ಅದ್ದೂರಿ ಮದುವೆಗೆ ಬಾಲಿವುಡ್ ಸಿದ್ಧವಾಗಿದೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಏಪ್ರಿಲ್ ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಮದುವೆ ದಿನಾಂಕ ಬಹಿರಂಗವಾಗಿರಲಿಲ್ಲ.ಇದೀಗ ಅಲಿಯಾ-ರಣಬೀರ್ ವಿವಾಹ ದಿನಾಂಕ ರಿವೀಲ್ ಆಗಿದ್ದು, ಏಪ್ರಿಲ್ 13 ರಿಂದ 17ರ ವರೆಗೂ ಮದುವೆ ಸಮಾರಂಭ ನಡೆಯಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಗ್ರ್ಯಾಂಡ್ ಮದುವೆ ಬಳಿಕ ಮತ್ತೊಂದು ತಾರಾಜೋಡಿಯ ಮದುವೆಗೆ ಬಾಲಿವುಡ್ ಸಿದ್ಧವಾಗುತ್ತಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್(Ranbir Kapoor and Alia Bhatt). ಇಬ್ಬರ ಮದುವೆ ವಿಚಾರ ಅನೇಕ ತಿಂಗಳಿಂದ ಸದ್ದು ಮಾಡುತ್ತಿದೆ. ಸ್ಟಾರ್ ಜೋಡಿ ಕಳೆದ ವರ್ಷವೇ ಹಸೆಮಣೆ ಏರಲಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಮದುವೆ ಮುಂದೂಡಿದ್ದರು. ಇದೀಗ ಮದುವೆಗೆ ಸಮಯ ಕೂಡಿ ಬಂದಿದೆ. ಈಗಾಗಲೇ ಅಲಿಯಾ ಮತ್ತು ರಣಬೀರ್ ಇಬ್ಬರು ಇದೆ ತಿಂಗಳು ಏಪ್ರಿಲ್ ನಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ ದಿನಾಂಕ ಬಹಿರಂಗವಾಗಿರಲಿಲ್ಲ. ಇದೀಗ ಅಲಿಯಾ ಮದುವೆ ದಿನಾಂಕ ರಿವೀಲ್ ಆಗಿದೆ.

ಕೊನೆಗೂ ಬಹಿರಂಗವಾಯ್ತು ರಣಬೀರ್ - ಅಲಿಯಾ ಮದುವೆ ದಿನಾಂಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?