
ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2) ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಏಪ್ರಿಲ್ 14ರಂದು(April 14th) ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಅಲ್ಲದೆ ಚಿತ್ರದಿಂದ ಬಂದ ಮೊದಲು ಹಾಡು ತೂಫಾನ್ ಕೂಡ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಏಪ್ರಿಲ್ 6ರಂದು ಬಿಡುಗಡೆಯಾದ ಗಗನ ನೀ ಹಾಡು ಕೂಡ ಅಭಿಮಾನಿಗಳ ಹೃದಯಗೆದ್ದಿದೆ. ಈ ನಡುವೆ ಸಿನಿಮಾತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಉತ್ತರ ಭಾರತದಲ್ಲಿ ಸಿನಿಮಾತಂಡ ಬೀಡಿಬಿಟ್ಟಿದ್ದು ಪ್ರಮೋಷನ್ ಅಬ್ಬರದ ಪ್ರಮೋಷನ್ ಮಾಡುತ್ತಿದೆ. ಈ ನಡುವೆ ಕೆಜಿಎಫ್-2 ಸಿನಿಮಾದ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. ವಿದೇಶಗಳಲ್ಲಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು ದಾಖಲೆಯ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿತ್ತು. ಈ ಬಗ್ಗೆ ಸಿನಿಮಾತಂಡ ಮಾಹಿತಿ ಹಂಚಿಕೊಂಡಿತ್ತು. ಇದೀಗ ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದು ಈ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಿದೆ.
ಕೆಜಿಎಫ್ 2 ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ನಾಳೆಯಿಂದ ಅಂದರೆ ಏಪ್ರಿಲ್ 7ರಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಘೋಷಿಸಿದೆ. 'ಬುಕ್ ಮೈಶೋ ಮತ್ತು ಪೇಟಿಎಂ ಮೂಲಕ ನಾಳೆಯಿಂದ (ಏಪ್ರಿಲ್ 07) ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ಕೆಜಿಎಫ್-2 ಅಡ್ವಾನ್ಸ್ ಬುಕ್ಕಿಂಗ್ ಲಭ್ಯವಿರುತ್ತವೆ' (advance booking open from april 7th)ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.
KGF 2: ಬಿಡುಗಡೆ ಆಯ್ತು 'ಗಗನ ನೀ, ಭುವನ ನೀ..' ಹಾಡು; ಹೇಗಿದೆ ನೋಡಿ
ಸದ್ಯ ವಿದೇಶಗಳಲ್ಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗುತ್ತಿದೆ. ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ವಿದೇಶಗಳಲ್ಲಿ ಈಗಾಗಲೇ ದಾಖಲೆ ಬುಕ್ಕಿಂಗ್ ಆಗಿದೆ. ಎಲ್ಲಾ ಕಡೆ ಪ್ರಾರಂಭವಾಗುತ್ತಿದೆ ಆದರೆ ಕರ್ನಾಟಕದಲ್ಲಿ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಕೆಜಿಎಫ್-2 ನೋಡಲು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳು ಇದೀಗ ಅಡ್ವಾನ್ಸ್ ಬುಕ್ಕಿಂಗ್ ಯಾವಾಗ ಎಂದು ಪ್ರಶ್ನೆಮಾಡುತ್ತಿದ್ದಾರೆ. ಅಂದಹಾಗೆ ಸದ್ಯದಲ್ಲೇ ಸಿನಿಮಾತಂಡ ಕರ್ನಾಟಕದ ಮುಂಗಡ ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?
ವಿಶ್ವದಾದ್ಯಂತ ತೆರೆಗೆ ಬರುತ್ತಿರುವ ಕೆಜಿಎಫ್-2 ಸಿನಿಮಾ ನೋಡಲು ಕೋಟ್ಯಂತರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆ ಗಳಿಗೆ ತೆರೆ ಬೀಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.