ಸೆಲ್ಫಿ ಕೇಳಲು ಬಂದ ಫ್ಯಾನ್ ಫೋನ್‌ ಕಿತ್ತುಕೊಂಡ Rana Daggubati; ತಿರುಪತಿಯಲ್ಲಿ ಇದಕ್ಕೆಲ್ಲ No

Published : Sep 20, 2022, 11:54 AM IST
ಸೆಲ್ಫಿ ಕೇಳಲು ಬಂದ ಫ್ಯಾನ್ ಫೋನ್‌ ಕಿತ್ತುಕೊಂಡ Rana Daggubati; ತಿರುಪತಿಯಲ್ಲಿ ಇದಕ್ಕೆಲ್ಲ No

ಸಾರಾಂಶ

ತಿರುಪತಿ ಆವರಣದಲ್ಲಿ ಸೆಲ್ಫಿ ಕೇಳಿದ ಅಭಿಮಾನಿ ಮೊಬೈಲ್ ಕಿತ್ತುಕೊಂಡ ರಾಣಾ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್....   

ಬಹುಭಾಷಾ ನಟ, ಬಾಹುಬಲಿ ಫೇಮ್ ರಾಣಾ ದಗ್ಗುಬಾಟಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿ ರಿಯಲ್ ಸ್ಟಾರ್ ಉಪೇಂದ್ರ, ಸುದೀಪ್ ಮತ್ತು ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಅಂದ್ರೆ ಹೀಗೆ ಹಾಗೆ ಎಂದು ಹೊಗಳಿದ ರಾಣ ಕೆಲವು ದಿನಗಳ ಕಾಲ ಇಲ್ಲೇ ವಿಶ್ರಂತಿಸಿ ಈಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ವೇಳೆ ತುಂಟಾಟ ಮಾಡಿದ ಅಭಿಮಾನಿಗೆ ಚಳಿ ಬಿಡಿಸಿದ್ದಾರೆ. 

ಹೌದು! ರಾಣಾ ದಗ್ಗುಬಾಟಿ ಪತ್ನಿ ಮಹಿಕಾ ಬಾಲಾಜಿ ಮತ್ತು ಸ್ನೇಹಿತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇಗುಲದ ಆವರಣದಲ್ಲಿ ನಡೆದುಕೊಂಡು ಬರುವಾಗ ಅಭಿಮಾನಿಗಗಳು ಸೆಲ್ಫಿಗಾಗಿ ಮುಗ್ಗಿಬಿದ್ದಿದ್ದಾರೆ. ಒಂದು ಅಭಿಮಾನಿ ಮೊಬೈಲ್ ಹಿಡಿದುಕೊಂಡು ಮುಖಕ್ಕೆ ಹತ್ತಿರ ಬಂದಾಗ ರಾಣಾ ಮೊಬೈಲ್ ಕಿತ್ತುಕೊಂಡಿದ್ದಾನೆ. No selfies in a temple ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ?

ರಶ್ಮೆ ಪಂಚೆ - ಶರ್ಟ್‌ಗೆ ಕೆಂಪು ಬಣ್ಣದ ರೇಶ್ಮೆ ಶೆಲ್ಯದಲ್ಲಿ ರಾಣಾ ಕಾಣಿಸಿಕೊಂಡರೆ ಸಿಂಪಲ್ ಗೋಲ್ಡ್‌ ಬಣ್ಣ ಸೀರೆಯಲ್ಲಿ ಮಹಿಕಾ ಮಿಂಚಿದ್ದಾರೆ. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲಾಗದ ಕಾರಣ ರಾಣಾ ಸೈಡಿನಿಂದ ಫೋಟೋ ಕ್ಲಿಕ್ ಮಾಡಿ ಹೊರ ನಡೆಯಲು ದಾರಿ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆದರೂ ಸುಮ್ಮನಿರದೆ ತುಂಟಾಟ ಮಾಡಿದ ಫ್ಯಾನ್ಸ್‌ಗೆ ರಾಣಾ ಚಮಕ್ ಕೊಟ್ಟಿದ್ದಾರೆ. ಕೆಲವರು ರಾಣಾ ಹೀಗೆ ಮಾಡಬಾರದಿತ್ತು ಎನ್ನುತ್ತಾರೆ ಅದರೆ ಇನ್ನೂ ಕೆಲವರು ರಾಣಾ ಇದನ್ನು ಸೀರಿಯಸ್ ಆಗಿ ಮಾಡಿಲ್ಲ ತಮಾಷೆ ಮಾಡಿದ್ದಾರೆ ಹೀಗಾಗಿ ವಿಡಿಯೋದಲ್ಲಿ ನಕ್ಕಿದ್ದಾರೆ ಎಂದಿದ್ದಾರೆ. 

 

ದಾಂಪತ್ಯದಲ್ಲಿ ಬಿರುಕು?

 ರಾಣಾದಗ್ಗುಬಾಟಿ ದಾಂಪತ್ಯದಲ್ಲಿ ಏನು ಸರಿಯಿಲ್ಲ ಎನ್ನುವ ಗುಸುಗುಸು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅಂದಹಾಗೆ ರಾಣಾ ದಗ್ಗುಬಾಟಿ ಪ್ರೇಯಸಿ ಮಿಹಿಕಾ ಬಜಾಜ್ ಜೊತೆ ಹಸೆಮಣೆ ಏರಿ ಭರ್ತಿ ಎರಡು ವರ್ಷ ತುಂಬಿದೆ. ಈ ನಡುವೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಎಲ್ಲಿಯೂ ರಾಣಾ ಅಥವಾ ಅವರ ಪತ್ನಿ ಪ್ರತಿಕ್ರಿಯೆ ನೀಡಿರಲಿಲ್ಲ. ರಾಣಾ ಇನ್ಸ್ಟಾಗ್ರಾಮ್ ನಲ್ಲಿ ಎಲ್ಲಾ ಪೋಸ್ಟ್ ಗಳನ್ನು  ಡಿಲೀಟ್ ಮಾಡಿದ್ದಾರೆ. ಹಾಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವ ಸುದ್ದಿ ಮತ್ತಷ್ಟು ಜೋರಾಯಿತು. ಆದರೀಗ ರಾಣಾ ಪತ್ನಿ ಮಿಹಿಕಾ ಸಾಮಾಜಿಕ ಜಾಲತಾಣದಲ್ಲಿ ಪತಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.

ರಾಣಾ ದಗ್ಗುಬಾಟಿ ಹಳೆಯ ಅಫೇರ್ಸ್‌ ಬಗ್ಗೆ ಮಿಹಿಕಾ ರಿಯಾಕ್ಷನ್ ಇದು

400 ಬುಡಕಟ್ಟು ಕುಟುಂಬಗಳಿಗೆ ನೆರವಾದ ರಾಣಾ:

ಲಾಕ್‌ಡೌನ್‌ ಸಡಿಲಿಕೆ ಆಯ್ತು, ಚಿತ್ರರಂಗದ ಚಟುವಟಿಕೆಗಳು ಸುಧಾರಿಸಿಕೊಳ್ಳುತ್ತಿವೆ ಎನ್ನುವಷ್ಟರಲ್ಲಿ ಮತ್ತೊಂದು ಲಾಕ್‌ಡೌನ್‌ ಘೋಷಣೆ ಆಗಿತ್ತು. ಈ ಲಾಕ್‌ಡೌನ್‌‌ನಿಂದ ಅನೇಕರಿಗೆ ಪೆಟ್ಟು ಬಿದ್ದಿದೆ. ಅದರಲ್ಲೂ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಸುಮಾರು 400 ಕುಟುಂಬಗಳು ಸಂಕಷ್ಟ ಎದುರಿಸುತ್ತಿದೆ. ಈ ಕುಟುಂಬಗಳಿಗೆ ನೆರವಾಗಿ ರಾಣಾ ನಿಂತಿದ್ದಾರೆ. ಪಾಲ ರೇಗಡಿ, ಅಡ್ಡಾಲ ತಿಮ್ಮಾಪುರ, ಕಾಹಿ ತಾಂಡಾ, ಗಗನ್ ಪೇಟ್ ಇನ್ನೂ ಹಲವು ಹಳ್ಳಿಗಳಿಗೆ ರಾಣಾ ದಗ್ಗುಬಾಟಿ ತಂಡ ಉಚಿತ ದಿನಸಿ ಮತ್ತು ಔಷಧಿ ವಿತರಣೆ ಮಾಡಿದ್ದಾರೆ. ರಾಣಾ  ಇತ್ತೀಚಿಗೆ ಅಭಿನಯಿಸಿದ  'ಅರಣ್ಯ' ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ರಾಣಾ ಬುಡಕಟ್ಟು ಜನರಿಗಾಗಿ ಈ ಸೇವಾಕಾರ್ಯ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?