ನಟಿ ತ್ರಿಷಾ ಮತ್ತೆ ದಳಪತಿ ವಿಜಯ್ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ತ್ರಿಷಾ ಮತ್ತು ವಿಜಯ್ ತಮಿಳು ಸಿನಿಮಾರಂಗದ ಸೂಪರ್ ಹಿಟ್ ಜೋಡಿ. ಈಗಾಗಲೇ 4 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಈ ಜೋಡಿ 5ನೇ ಬಾರಿ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸೌತ್ ಸುಂದರಿ ತ್ರಿಷಾ ಸದ್ಯ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಪ್ರಮೋಷನ್ ಕಾರ್ಯ ಜೋರಾಗಿ ನಡೆಯುತ್ತಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದೊಡ್ಡ ತಾರಾಬಳಗ ಇರುವ ಈ ಸಿನಿಮಾಗೆ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ, ತ್ರಿಷಾ, ಜಯಂ ರವಿ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಇದೀಗ ಸಿನಿಮಾತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ಸಮಯದಲ್ಲಿ ತ್ರಿಷಾ ಕಡೆಯಿಂದ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ಹೌದು, ನಟಿ ತ್ರಿಷಾ ಮತ್ತೆ ದಳಪತಿ ವಿಜಯ್ ಜೊತೆ ನಟಿಸುತ್ತಾರೆ ಎನ್ನುವ ಸುಳಿವು ನೀಡಿದ್ದಾರೆ.
ತ್ರಿಷಾ ಮತ್ತು ವಿಜಯ್ ತಮಿಳು ಸಿನಿಮಾರಂಗದ ಸೂಪರ್ ಹಿಟ್ ಜೋಡಿ. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿದೆ. ಇಬ್ಬರೂ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಭಾಗಿಯಾಗಿದ್ದ ತ್ರಿಷಾಗೆ ವಿಜಯ್ ಜೊತೆ ನಟಿಸುವ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ತ್ರಿಷಾ ಜಾಣತನದಿಂದ ನುಣುಚಿಕೊಂಡಿದ್ದಾರೆ. ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್ ಕಾಂಬಿನೇಷನ್ ನಲ್ಲಿ ಬರ್ತಿರುವ ದಳಪತಿ 67 ಸಿನಿಮಾದಲ್ಲಿ ನಟಿಯುತ್ತಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ತ್ರಿಷಾ ಈ ಬಗ್ಗೆ ಈಗ ಮಾತನಾಡುವುದು ಬೇಡ, ಪೊನ್ನಿಯನ್ ಸೆಲ್ವನ್ ಬಗ್ಗೆ ಮಾತಾಡೋಣ ಎಂದು ಹೇಳಿದರು. ಈ ಮೂಲಕ ವಿಜಯ್ ಜೊತೆ ನಟಿಸುವುದನ್ನು ಒಪ್ಪಿಕೊಂಡಿಲ್ಲ ಈ ಸುದ್ದಿಯನ್ನು ತಳ್ಳಿಯೂ ಹಾಕಿಲ್ಲ. ಹಾಗಾಗಿ ವಿಜಯ್ ಜೊತೆ ನಟಿಸುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು.
ರಾಜಕೀಯ ಕಡೆ ತ್ರಿಷಾ ಒಲವು; 'ಪವರ್' ನಟಿಗೆ ದಳಪತಿ ವಿಜಯ್ ಬೆಂಬಲ?
ದಳಪತಿ ವಿಜಯ್ ಸದ್ಯ ವರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಳಿಕ ವಿಜಯ್ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ವರ್ಷದ ಕೊನೆಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ತ್ರಿಷಾ ನಾಯಕಿ ಎನ್ನಲಾಗುತ್ತಿದೆ. ಈ ವದಂತಿ ನಡುವೆ ತ್ರಿಷಾ ಪ್ರತಿಕ್ರಿಯೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
KGF ನಂತರ ತಿರುಗಿದ ಸಂಜಯ್‌ದತ್ ಲಕ್; ತಲಪತಿ ಜೊತೆ ಮುಂದಿನ ಚಿತ್ರ?
ಒಂದುವೇಳೆ ತ್ರಿಷಾ ಮತ್ತು ವಿಜಯ್ ಮತ್ತೆ ಒಂದಾದರೆ ಬರೋಬ್ಬರಿ 14 ವರ್ಷಗಳ ಬಳಿಕ ಒಟ್ಟಿಗೆ ಸಿನಿಮಾ ಮಾಡಿದಂತೆ ಆಗುತ್ತದೆ. ವಿಜಯ್ ಮತ್ತು ತ್ರಿಷಾ ಇಬ್ಬರದ್ದು ಹಿಟ್ ಕಾಂಬಿನೇಷನ್. ಇಬ್ಬರು ಅನೇಕ ಎವರ್ ಗ್ರೀನ್ ಸಿನಿಮಾಗಳನ್ನು ನೀಡಿದ್ದಾರೆ. ಗಿಲ್ಲಿ ಸಿನಿಮಾದಲ್ಲಿ ಮೊದಲು ವಿಜಯ್ ಮತ್ತ ತ್ರಿಷಾ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇಬ್ಬರಿಗೂ ಸಿನಿಮಾರಂಗದಲ್ಲಿ ದೊಡ್ಡ ಬ್ರೇಕ್ ಕೂಡ ಸಿಕ್ಕಿತ್ತು. ಬಳಿಕ ಈ ಜೋಡಿ ಆದಿ, ತಿರುಪತಿ, ಕುರುವಿ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರು. ಕುರುವಿ ಸಿನಿಮಾ 2008ರಲ್ಲಿ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾ ಸೋಲು ಕಂಡಿತ್ತು. ಇದೀಗ ದಳಪತಿ 67 ಸಿನಿಮಾಗೆ ನಾಯಕಿಯಾಗುವ ಮೂಲಕ 5ನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.