'ಸುಂದರಿಯರ ಬಗ್ಗೆ ಕಾಮೆಂಟ್ ಮಾಡೋದನ್ನ ನಾನು ನಿಲ್ಲಿಸಲ್ಲ ಎಂದ ಆರ್‌ಜಿವಿ ಕಿಯಾರಾ ಬಗೆಗಿನ ಟ್ವೀಟ್ ಡಿಲೀಟ್ ಮಾಡಿದ್ದೇಕೆ ..?

Published : Mar 05, 2026, 07:30 PM IST
Ram Gopal Varma

ಸಾರಾಂಶ

ಕೆಲವು ದಿನಗಳ ಹಿಂದೆ ಬಿಡುಗಡೆಯಾದ 'ವಾರ್ 2' ಚಿತ್ರದ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿ ಸ್ವಿಮ್‌ಸ್ಯೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯಕ್ಕೆ ಪ್ರತಿಕ್ರಿಯಿಸಿದ್ದ ರಾಮ್ ಗೋಪಾಲ್ ವರ್ಮಾ, ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಸುಂದರಿಯರ ಬಗ್ಗೆ ಕಾಮೆಂಟ್ ಮಾಡುವುದನ್ನು ನಾನು ನಿಲ್ಲಿಸಲ್ಲ: ಕಿಯಾರಾ ಅಡ್ವಾಣಿ ಟ್ವೀಟ್ ವಿವಾದಕ್ಕೆ ಆರ್‌ಜಿವಿ ಖಡಕ್ ಪ್ರತಿಕ್ರಿಯೆ!

ಮುಂಬೈ: ಬಾಲಿವುಡ್‌ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಯಾವಾಗಲೂ ತಮ್ಮ ನೇರ ನುಡಿಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಚಿತ್ರರಂಗದ ಸುಂದರ ನಟಿಯರ ಬಗ್ಗೆ ಅವರು ನೀಡುವ ಕಾಮೆಂಟ್‌ಗಳು ಹಲವು ಬಾರಿ ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಕೆಲವರು ಇದನ್ನು 'ಅಸಭ್ಯ' ಎಂದು ಕರೆದರೆ, ವರ್ಮಾ ಮಾತ್ರ ತಾವು 'ನೇರಾನೇರ' ವ್ಯಕ್ತಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ ಅವರ ಬಗ್ಗೆ ಮಾಡಿದ್ದ ವಿವಾದಾತ್ಮಕ ಟ್ವೀಟ್ ಮತ್ತು ಅದನ್ನು ಡಿಲೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಜಿವಿ ಈಗ ಮೌನ ಮುರಿದಿದ್ದಾರೆ.

ಕೆಲವು ದಿನಗಳ ಹಿಂದೆ ಬಿಡುಗಡೆಯಾದ 'ವಾರ್ 2' ಚಿತ್ರದ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿ ಸ್ವಿಮ್‌ಸ್ಯೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯಕ್ಕೆ ಪ್ರತಿಕ್ರಿಯಿಸಿದ್ದ ರಾಮ್ ಗೋಪಾಲ್ ವರ್ಮಾ, ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ವರ್ಮಾ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನಾನು ಆ ಟ್ವೀಟ್‌ನಲ್ಲಿ ಏನು ಬರೆದಿದ್ದೆ ಎಂಬುದು ಈಗ ನೆನಪಿಲ್ಲ. ಯಾಕೆಂದರೆ ನಾನು ಪ್ರತಿದಿನ ಹಲವಾರು ಟ್ವೀಟ್‌ಗಳನ್ನು ಮಾಡುತ್ತಿರುತ್ತೇನೆ" ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಪರೋಕ್ಷ ಪ್ರಶಂಸೆ

ತಮ್ಮ ನಿಲುವನ್ನು ಸಮರ್ಥಿಸಿಕೊಂಡ ವರ್ಮಾ, "ಒಂದು ಸಿನಿಮಾದ ಟೀಸರ್‌ನಲ್ಲಿ ಸುಂದರ ಹುಡುಗಿಯನ್ನು ಬಿಕಿನಿಯಲ್ಲಿ ತೋರಿಸುವುದೇ ಜನರ ಗಮನ ಸೆಳೆಯಲು ಮತ್ತು ಅವರಿಂದ ಪ್ರತಿಕ್ರಿಯೆ ಪಡೆಯಲು. ನಾನು ನೀಡಿದ ಕಾಮೆಂಟ್ ಒಂದು ರೀತಿಯ 'ಪರೋಕ್ಷ ಪ್ರಶಂಸೆ' (Backhanded compliment) ಅಷ್ಟೇ. ನಟಿಯರ ಸೌಂದರ್ಯದ ಬಗ್ಗೆ ಮಾತನಾಡುವುದು ನನಗೆ ಹೊಸದೇನಲ್ಲ. 'ರಂಗೀಲಾ' ಚಿತ್ರದ ಸಮಯದಿಂದಲೂ ನಾನು ಸುಂದರಿಯರ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ ಬಂದಿದ್ದೇನೆ. ಶ್ರೀದೇವಿ ಅವರ ಬಗ್ಗೆಯೂ ನಾನು ಅಷ್ಟೇ ಬಹಿರಂಗವಾಗಿ ಹೊಗಳಿದ್ದೆ. ಸುಂದರ ನಟಿಯರ ಬಗ್ಗೆ ನನ್ನ ಅನಿಸಿಕೆಯನ್ನು ಎಂದಿಗೂ ಮುಚ್ಚಿಡುವುದಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.

ಯಾರಿಗಾಗಿಯೂ ಬದಲಾಯಿಸಿಕೊಳ್ಳುವುದಿಲ್ಲ

ಇನ್ನು ಸೋಶಿಯಲ್ ಮೀಡಿಯಾದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಅವರು, "ನಾನು ಏನಿದ್ದೇನೋ ಹಾಗೆಯೇ ಇರುತ್ತೇನೆ. ನನ್ನ ವ್ಯಕ್ತಿತ್ವವನ್ನು ಅಥವಾ ನನ್ನ ಆಲೋಚನೆಗಳನ್ನು ವ್ಯಕ್ತಪಡಿಸುವ ರೀತಿಯನ್ನು ಯಾರಿಗಾಗಿಯೂ ಬದಲಾಯಿಸಿಕೊಳ್ಳುವುದಿಲ್ಲ. ನನ್ನ ಸಿನಿಮಾಗಳು ಭಿನ್ನವಾಗಿರಬಹುದು, ಆದರೆ ನಾನು ಮಾತ್ರ ಬದಲಾಗಲ್ಲ" ಎಂದಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ ಬಗ್ಗೆ ಕೇಳಿದಾಗ, "ನಾನು ಸಾಮಾನ್ಯವಾಗಿ ಟ್ವೀಟ್ ಡಿಲೀಟ್ ಮಾಡುವುದಿಲ್ಲ, ಅಂದು ಯಾಕೆ ಮಾಡಿದೆ ಎಂಬುದು ಈಗ ನೆನಪಿಲ್ಲ" ಎಂದು ನಕ್ಕಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ 'ವಾರ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಕಿಯಾರಾ ಅಡ್ವಾಣಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಆರ್‌ಜಿವಿ ನೀಡಿರುವ ಈ ಹೇಳಿಕೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ನಿರ್ದೇಶಕರಾಗಿ ನಟಿಯರ ಬಗ್ಗೆ ಇಂತಹ ಕಾಮೆಂಟ್ ಮಾಡುವುದು ಸರಿಯೇ ಎಂಬ ಪ್ರಶ್ನೆ ಮತ್ತೆ ಕಾಡತೊಡಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ಅವರ 40 ವರ್ಷದ ಕೆರಿಯರ್‌ನ ಕಪ್ಪುಚುಕ್ಕೆ ಈ ಸಿನಿಮಾ: 100 ಕೋಟಿ ಹಾಕಿ ವಾರದಲ್ಲೇ ಎತ್ತಂಗಡಿ!
Pawan Kalyan: ಪವರ್ ಸ್ಟಾರ್‌ಗೆ ಚಿತ್ರರಂಗದಲ್ಲಿರುವ ಆ ಮೂವರು ಆಪ್ತ ಸ್ನೇಹಿತರು ಇವರೇನಾ?