ರಶ್ಮಿಕಾ ಪರ ನಿಂತ Gen Z ಪಾರ್ಟಿ.. ರಶ್ಮಿಕಾ ಈಸ್ ಗ್ರೇಟ್.. ಕರ್ನಾಟಕ ಕ್ರಶ್ ಟು 'ನ್ಯಾಷನಲ್ ಕ್ರಶ್' ಆಗಿದ್ದು ಸಣ್ಣ ಸಾಧನೆಯಲ್ಲ!

Published : Mar 05, 2026, 04:11 PM IST
Rashmika Mandanna Vijay Deverakonda

ಸಾರಾಂಶ

ಒಬ್ಬ ನಟಿ ತನ್ನ ಶ್ರಮದಿಂದ ಭಾರತದ ನಂಬರ್ ಒನ್ ನಟಿಯಾಗಿ ಬೆಳೆದಾಗ ಆಕೆಯನ್ನು ಪ್ರೋತ್ಸಾಹಿಸಬೇಕೇ ಹೊರತು, ಹಳೆಯ ವಿಚಾರಗಳನ್ನು ಕೆದಕಿ ಕೀಳು ಅಭಿರುಚಿಯ ಕಾಮೆಂಟ್ ಹಾಕುವುದು ಸರಿಯಲ್ಲ. ಇಡೀ ಭಾರತವೇ ಹೆಮ್ಮೆ ಪಡುವಂತೆ ಬೆಳೆದಿರುವ ಈ ಕನ್ನಡತಿ ಬಗ್ಗೆ ಜೆನ್ ಜಿ ಹೀಗ್ ಹೇಳಿದೆ ನೋಡಿ..

ಕರ್ನಾಟಕ ಕ್ರಶ್ ಟು ನ್ಯಾಷನಲ್ ಕ್ರಶ್: ರಶ್ಮಿಕಾ ಮಂದಣ್ಣ ಸಾಧನೆ ಕಂಡು ಕಿಡಿಕಾರುವವರಿಗೆ ಜೆನ್ ಜಿ ಖಡಕ್ ಉತ್ತರ!

ಬೆಂಗಳೂರು: ಕಿರಿಕ್ ಪಾರ್ಟಿಯ ಸಾನ್ವಿಯಾಗಿ ಕನ್ನಡಿಗರ ಹೃದಯ ಗೆದ್ದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಇಡೀ ಭಾರತೀಯ ಚಿತ್ರರಂಗವೇ ಕೊಂಡಾಡುವ 'ನ್ಯಾಷನಲ್ ಕ್ರಶ್'. ಆದರೆ, ಅವರು ಈ ಮಟ್ಟಕ್ಕೆ ಬೆಳೆಯುವ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಸದಾ ಟ್ರೋಲ್‌ಗಳು, ಕಿಡಿಗೇಡಿಗಳ ನೆಗೆಟಿವ್ ಕಾಮೆಂಟ್‌ಗಳ ನಡುವೆಯೂ ರಶ್ಮಿಕಾ ಸಾಧನೆಯ ಶಿಖರ ಏರುತ್ತಿದ್ದಾರೆ. ಇದೀಗ ಇಂದಿನ ಯುವ ಪೀಳಿಗೆ ಅಥವಾ ಜೆನ್ ಜಿ (Gen Z) ರಶ್ಮಿಕಾ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಅವರ ಸಾಧನೆ ಸಣ್ಣದಲ್ಲ ಎಂದು ಗುಡುಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ನಟಿಯಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಕೇವಲ ಎಂಟೇ ವರ್ಷಗಳಲ್ಲಿ ಟಾಲಿವುಡ್, ಬಾಲಿವುಡ್, ಕಾಲಿವುಡ್ ಹಾಗೂ ಮಲಯಾಳಂ ಸಿನಿಮಾರಂಗದಲ್ಲೂ ಮಿಂಚಿ 'ನ್ಯಾಷನಲ್ ಕ್ರಶ್' ಪಟ್ಟ ಪಡೆದಿದ್ದು ನಿಜಕ್ಕೂ ಅಸಾಮಾನ್ಯ ಸಾಧನೆ. ಕೊಡಗಿನ ವಿರಾಜಪೇಟೆಯೆಲ್ಲಿ ಹುಟ್ಟಿ, ಇಂದು ಗ್ಲೋಬಲ್ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಶ್ಮಿಕಾ ಇಂದಿನ ಜೆನ್‌ ಜಿ ಯುವಕ-ಯುವತಿಯರಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಹರಡುತ್ತಿರುವ ದ್ವೇಷದ ಬಗ್ಗೆ ಯುವಜನತೆ (Generation Z) ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಪ್ರೇಮದ ಬಗ್ಗೆ

ಜೆನ್ ಜಿ ಮಂದಿಯ ಪ್ರಕಾರ, "ರಶ್ಮಿಕಾ ಮಂದಣ್ಣ ಅವರ ಕನ್ನಡ ಪ್ರೇಮದ ಬಗ್ಗೆ ಮಾತನ್ನಾಡುವುದು ತಪ್ಪು. ಅವರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ, ಅಷ್ಟೇ ಅಲ್ಲದೆ ತಮ್ಮ ಪರಭಾಷಾ ಸಿನಿಮಾಗಳಿಗೂ ತಾವೇ ಡಬ್ ಮಾಡಿದ್ದಾರೆ. ವೃತ್ತಿಜೀವನದ ಬೆಳವಣಿಗೆಗಾಗಿ ಹೈದ್ರಾಬಾದ್‌ಗೆ ಶಿಫ್ಟ್ ಆದಾಗ 'ನಾನು ಹೈದ್ರಾಬಾದ್‌ನಿಂದ ಬಂದಿದ್ದೇನೆ' ಎಂದು ಹೇಳುವುದರಲ್ಲಿ ತಪ್ಪೇನಿದೆ? ಅದು ಅವರ ಕೆಲಸದ ಸ್ಥಳ." ಇನ್ನು ಸದಾ ಸುದ್ದಿಯಲ್ಲಿದ್ದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಸಂಬಂಧದ ಬಗ್ಗೆಯೂ ಈಗ ತೆರೆ ಬಿದ್ದಿದ್ದು, ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಸುಂದರ ಜೋಡಿಗೆ ಜೆನ್ ಜಿ ಯುವಜನತೆ ಮನಸಾರೆ ಶುಭಾಶಯ ಕೋರುತ್ತಿದ್ದಾರೆ.

ವಿಲನ್ ತರಹ ಬಿಂಬಿಸುವುದನ್ನು ಇಂದಿನ ಯುವಜನತೆ ವಿರೋಧಿಸುತ್ತಾರೆ

ಅತ್ಯಂತ ಪ್ರಮುಖವಾಗಿ, 2018ರಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದ ವಿಷಯದಲ್ಲಿ ರಶ್ಮಿಕಾ ಅವರನ್ನು ವಿಲನ್ ತರಹ ಬಿಂಬಿಸುವುದನ್ನು ಇಂದಿನ ಯುವಜನತೆ ವಿರೋಧಿಸುತ್ತಾರೆ. "ಅವರಿಬ್ಬರ ಮಧ್ಯೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದು, ಅದು ಅವರ ಖಾಸಗಿ ವಿಚಾರ. ಮದುವೆಯಾಗಿ ಮಕ್ಕಳಾದ ಮೇಲೂ ಅದೆಷ್ಟೋ ಜನರು ವಿಚ್ಛೇದನ ಪಡೆಯುತ್ತಾರೆ. ಆದರೆ, ರಶ್ಮಿಕಾ ಮದುವೆಗೂ ಮುನ್ನವೇ ತನಗೆ ಒಲ್ಲದ ಸಂಬಂಧದಿಂದ ಗೌರವಯುತವಾಗಿ ಹೊರಬಂದಿದ್ದಾರೆ. ಅದರಲ್ಲಿ ಅಪರಾಧವೇನಿದೆ?" ಎನ್ನುವುದು ಜೆನ್ ಜಿ ಪ್ರಶ್ನೆ.

ಒಬ್ಬ ನಟಿ ತನ್ನ ಶ್ರಮದಿಂದ ಭಾರತದ ನಂಬರ್ ಒನ್ ನಟಿಯಾಗಿ ಬೆಳೆದಾಗ ಆಕೆಯನ್ನು ಪ್ರೋತ್ಸಾಹಿಸಬೇಕೇ ಹೊರತು, ಹಳೆಯ ವಿಚಾರಗಳನ್ನು ಕೆದಕಿ ಕೀಳು ಅಭಿರುಚಿಯ ಕಾಮೆಂಟ್ ಹಾಕುವುದು ಸರಿಯಲ್ಲ. ಇಡೀ ಭಾರತವೇ ಹೆಮ್ಮೆ ಪಡುವಂತೆ ಬೆಳೆದಿರುವ ಈ ಕನ್ನಡತಿ, ತನ್ನ ವ್ಯಕ್ತಿತ್ವ ಮತ್ತು ಛಲದಿಂದ ಇಂದಿನ ಯುವಜನತೆಗೆ ನಿಜವಾದ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಯಶಸ್ಸಿನ ಓಟ ಹೀಗೆಯೇ ಮುಂದುವರಿಯಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಳೆ ಹುಡುಗಿಯ ಮುತ್ತಿನಂಥ ಕನ್ನಡಾಕ್ಷರಗಳಿಗೆ ಮಾರುಹೋದ ಕನ್ನಡಿಗರು; ಯಶ್ ಬಗ್ಗೆ ನಟಿ ಪೂಜಾ ಗಾಂಧಿಯ ಲೆಟರ್ ವೈರಲ್!
ಬಾಲಿವುಡ್‌ಗೆ ಹೋಗಿ ಕೈ ಸುಟ್ಕೊಂಡು ಬಂದ ಕನ್ನಡ ನಟಿ ಗಂಡ: ಬರೋಬ್ಬರಿ 65 ಕೋಟಿ ನಷ್ಟ!