
ರಾಮ್ ಚರಣ್ ತೇಜ ಎಂದರೆ ರಾಮನ ಭಕ್ತ ಹನುಮಂತ ಎಂದರ್ಥ ಎಂದು ಸ್ವತಃ ನಟ ರಾಮ್ ಚರಣ್ ತೇಜ ಅವರೇ ಈ ಹಿಂದೆ ಹೇಳಿದ್ದರು. ಸಿನಿಮಾದಲ್ಲಿ ಬ್ಯುಸಿ ಇರುವ ಈ ನಟ ಆಗಾಗ ಅಯ್ಯಪ್ಪ ಸ್ವಾಮಿ ಮಾಲೆ, ಆಂಜನೇಯ ಸ್ವಾಮಿ ಮಾಲೆ ಎಂದು ವ್ರತ ಮಾಡುತ್ತಾರೆ. ಇದರ ಹಿಂದಿನ ಕಾರಣ ಏನು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಈ ಹಿಂದೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸ್ವಂತ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಅವರ ಏಕೈಕ ಪುತ್ರ ರಾಮ್ ಚರಣ್ ತೇಜ ಅವರನ್ನು ಪವನ್ ಕಲ್ಯಾಣ್ ಹೊಗಳಿದ್ದಾರೆ. ಸಂಬಂಧದಲ್ಲಿ ರಾಮ್‌ಗೆ ಪವನ್ ಕಲ್ಯಾಣ್ ಅವರು ಚಿಕ್ಕಪ್ಪ ಆಗಬೇಕು. ಆದರೆ ಅವರು ಸ್ವಂತ ತಮ್ಮನ ಥರ ನೋಡ್ತಾರಂತೆ.
“ನನ್ನ ತಂದೆ ಏನು ನೆನಪಿಟ್ಟುಕೊಂಡು ಇವನಿಗೆ ರಾಮ್ ಚರಣ್ ತೇಜ ಎಂದು ಹೆಸರು ಇಟ್ಟರೋ ಏನೋ! ವರ್ಷದಲ್ಲಿ 100 ದಿನ ಆಂಜನೇಯ ಸ್ವಾಮಿ ಮಾಲಾ ಅಂತ ಹೇಳ್ತಾನೆ, ಅಯ್ಯಪ್ಪ ಸ್ವಾಮಿ ಮಾಲೆ ಅಂತಾರೆ. ಎಲ್ಲರ ಜೊತೆ ಗೌರವದಿಂದ ಇರುತ್ತಾನೆ, ತೆಲುಗಿನಲ್ಲಿ ಎಲ್ಲ ಹೀರೋಗಳಿಗೂ ಫ್ರೆಂಡ್ ಆಗಿದ್ದಾನೆ. ಅವಶ್ಯಕತೆ ಇದ್ದಾಗ ಮಾತ್ರ ಅವನು ಸೂಟ್ ಬೂಟ್ ಹಾಕ್ತಾನೆ, ಉಳಿದ ದಿನವೆಲ್ಲವೂ ಕೂಡ ಚಪ್ಪಲಿಯಲ್ಲೇ ಇರುತ್ತಾನೆ” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಯಾಕೆ ಹೀಗೆ ಮಾಡ್ತೀಯಾ ಎಂದು ನಾನು ಅವನಿಗೆ ಕೇಳಿದೆ. ಆಗ ಅವನು ನನ್ನ ಜವಾಬ್ದಾರಿಯನ್ನು ನೆನಪಿಸಿಕೊಳ್ಳಲು, ಅಹಂಕಾರ ಬರಬಾರದು ಎಂದು ಹೀಗೆ ಮಾಡ್ತೀನಿ ಎಂದು ಹೇಳಿದ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.
ಚಿರಂಜೀವಿ ಅವರಿಗೆ ಮೂವರು ಮಕ್ಕಳು, ಅವರಲ್ಲಿ ಒಬ್ಬ ಮಗನೇ ರಾಮ್ ಚರಣ್ ತೇಜ. ಇವರಿಗೆ ಒಟ್ಟೂ 1650 ಕೋಟಿ ರೂಪಾಯಿ ಆಸ್ತಿ ಇದೆ. ಪತ್ನಿ ಉಪಾಸನಾ ಕೊನಿಡೆಲ ಅವರ ತಂದೆ ಮನೆಯಲ್ಲಿ ಸಿಕ್ಕಾಪಟ್ಟೆ ಆಸ್ತಿ ( ಅಪೋಲೋ ಸಮೂಹಸಂಸ್ಥೆಗಳ ಮಾಲೀಕರು ) ಇರುವುದರಿಂದ ರಾಮ್ ಚರಣ್ ಹಾಗೂ ಉಪಾಸನಾ ಆಸ್ತಿ ಮೊತ್ತವೇ 2500 ಕೋಟಿ ರೂಪಾಯಿ ಇದೆ.
ಉಪಾಸನಾ ಹಾಗೂ ಚರಣ್‌ಗೆ ಒಟ್ಟೂ ಮೂವರು ಮಕ್ಕಳಿವೆ. ಮೊದಲು ಮಗಳು ಹುಟ್ಟಿದ್ದು ಕ್ಲಿಂಕಾರಾ ಎಂದು ಹೆಸರು ಇಟ್ಟಿದ್ದಾರೆ. ಆ ಬಳಿಕ ಅವಳಿ ಮಕ್ಕಳು ಹುಟ್ಟಿದ್ದು, ಒಂದು ಗಂಡು, ಒಂದು ಹೆಣ್ಣು ಹುಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.