ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವ ಆಸೆ; ನಟ ರಾಮ್ ಚರಣ್

Published : Mar 18, 2023, 01:41 PM IST
ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವ ಆಸೆ; ನಟ ರಾಮ್ ಚರಣ್

ಸಾರಾಂಶ

ಟಾಲಿವುಡ್ ಸ್ಟಾರ್ ರಾಮ್ ಚರಣ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. 

RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ನಂತರ ತೆಲುಗು ನಟ ರಾಮ್ ಚರಣ್ ಜಾಗತಿಕ ಸೂಪರ್ ಸ್ಟಾರ್ ಆಗಿದ್ದಾರೆ. RRR ಸೂಪರ್ ಸಕ್ಸಸ್ ಬಳಿಕ ರಾಮ್ ಚರಣ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ರಾಮ್ ಚರಣ್ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಕಾನ್‌ಕ್ಲೇವ್ 2023ನಲ್ಲಿ ಮಾತನಾಡಿದ ರಾಮ್ ಚರಣ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ರಾಮ್ ಚರಣ್ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಇದೀಗ ಬಯೋಪಿಕ್ ಮಾಡುವ ಬಯಕೆ ವ್ಯಕ್ತಪಡಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 

ಸಂವಾದದಲ್ಲಿ ರಾಮ್ ಚರಣ್ ಅವರಿಗೆ ಯಾವ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೀರಿ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ರಾಮ್ ಚರಣ್ ಕ್ರೀಡಾ ಆಧಾರಿತ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುವುದಾಗಿ ಹೇಳಿದರು.  'ನಾನು ಕ್ರೀಡೆಗೆ ಸಂಬಂಧಿಸಿದ ಯಾವುದಾದರೂ ಸಿನಿಮಾ ಮಾಡಲು  ಬಯಸುತ್ತೇನೆ. ಇದು ತುಂಬಾ ಸಮಯ ಹಿಡಿಯುತ್ತದೆ' ಎಂದರು. ಬಳಿಕ ವಿರಾಟ್ ಕೊಹ್ಲಿ ಆಗಿ ನಟಿಸಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಮಾಡಲಾಯಿತು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮ್ ಚರಣ್ 'ಅದ್ಭುತ. ಅವರು ಸ್ಪೂರ್ತಿದಾಯಕ ವ್ಯಕ್ತಿ. ಅವಕಾಶ ಸಿಕ್ಕರೆ  ಅದ್ಭುತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾನು ಕೂಡ ಹಾಗೆ ಕಾಣುತ್ತೇನೆ' ಎಂದು ಹೇಳಿದರು. ರಾಮ್ ಚರಣ್ ವೇದಿಕೆಯಲ್ಲಿ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಬಗ್ಗೆಯೂ ಮಾತನಾಡಿದರು.

ಆಸ್ಕರ್ ಗೆದ್ದು ಭಾರತಕ್ಕೆ ಬರುತ್ತಿದ್ದಂತೆ ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾದ ರಾಮ್ ಚರಣ್

ರಾಮ್ ಚರಣ್ ತಮ್ಮ ನೆಚ್ಚಿನ ನಟ ಯಾರು ಎಂದು ರಿವೀಲ್ ಮಾಡಿದರು. ನೆಚ್ಚಿನ ನಟ ಯಾರೆಂದು ಕೇಳಿದಾಗ ರಾಮ್ ಚರಣ್, 'ನಿಸ್ಸಂಶಯವಾಗಿ, ನನ್ನ ತಂದೆ ನನ್ನ ನೆಚ್ಚಿನ ನಟ ಆದರೆ, ನಾನು ಸಲ್ಮಾನ್ ಖಾನ್ ಎಂದು ಹೇಳುತ್ತೇನೆ' ಎಂದು ಹೇಳಿದರು. ಬಳಿಕ ತಮ್ಮ ತಂದೆ ಚಿರಂಜೀವಿ ಅವರ ಆತ್ಮೀಯ ಸ್ನೇಹಿತ ಭಾಯಿಜಾನ್ ಅವರೊಂದಿಗಿನ ಮೊದಲ ಭೇಟಿಯನ್ನು ಸಹ ಹಂಚಿಕೊಂಡರು. 

ಆಸ್ಕರ್ ಗೆದ್ದು ಭಾರತಕ್ಕೆ ವಾಪಾಸ್ ಆದ ರಾಮ್ ಚರಣ್‌ ನೋಡಲು ಮುಗಿಬಿದ್ದ ಫ್ಯಾನ್ಸ್

ರಾಮ್ ಚರಣ್ ಸದ್ಯ ತಮ್ಮ 15ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿಯಾರಾ ಮತ್ತು ರಾಮ್ ಚರಣ್ ಎರಡನೇ ಬಾರಿ ತೆರೆಮೇಲೆ ಬರುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?