ಎದೆ ಹಾಲುಣಿಸೋ ಅಮ್ಮ ಮಕ್ಕಳ ತುಟಿಗೆ ಮುತ್ತಿಟ್ಟರೆ ಲೈಂಗಿಕ ದೌರ್ಜನ್ಯವೇ? ಛಾವಿ ಮಿತ್ತಲ್ ಕೆಂಡಾಮಂಡಲ

By Suvarna NewsFirst Published Mar 18, 2023, 1:34 PM IST
Highlights

ಸಿನಿಮಾ ಮತ್ತು ಟಿವಿ ಕಲಾವಿದೆ ಛಾವಿ ಮಿತ್ತಲ್ ತನ್ನ ಮಗನ ತುಟಿಗೆ ಮುತ್ತಿಕ್ಕಿದ್ದಕ್ಕೆ ನೆಟ್ಟಿಗರು ಹಿಗ್ಗಾಮುಗ್ಗ ಝಾಡಿಸಿದ್ದರು. ಇದಕ್ಕೆ ಕೆಂಡಾಮಂಡಲ ಆಗಿರುವ ನಟಿ ಮಗುವಿಗೆ ಎದೆ ಹಾಲುಣಿಸೋ ತಾಯಿ ತುಟಿ ಮುದ್ದಿಸಿದರೆ ಅಪರಾಧ ಆಗುತ್ತಾ ಅಂತ ಸಿಟ್ಟಲ್ಲಿ ಪ್ರಶ್ನಿಸಿದ್ದಾರೆ.

ಛಾವಿ ಮಿತ್ತಲ್ ಅಂದರೆ ರೀಸೆಂಟಾಗಿ ಜರುಗಿದ ಎರಡು ವಿದ್ಯಮಾನಗಳು ನೆನಪಾಗುತ್ತವೆ. ಮೊದಲನೆಯದು ಈಕೆ ಸ್ತನ ಕ್ಯಾನ್ಸರ್ ಪೀಡಿತೆಯಾಗಿದ್ದು, ಅದರಿಂದ ಹೊರಬಂದಿದ್ದು. ಕ್ಯಾನ್ಸರ್ ಜೊತೆಗಿನ ಆಕೆಯ ಹೋರಾಟ, ಅದನ್ನು ಎದುರಿಸಿ ಹೊರಬಂದ ಬಗೆ. ಎರಡನೆಯದು ಈಕೆ ತನ್ನ ಮಗನ ತುಟಿಗಳಿಗೆ ಮುತ್ತುಕ್ಕಿದ ವೀಡಿಯೋ ವೈರಲ್‌ ಆಗಿದ್ದು. ಈಕೆ ಚೈಲ್ಡ್ ಅಬ್ಯೂಸ್ ಮಾಡ್ತಿದ್ದಾರೆ ಅಂತ ಜನ ಈಕೆಗೆ ಸೋಷಿಯಲ್ ಮೀಡಿಯಾದಲ್ಲಿ ಝಾಡಿಸಿದ್ದರು. ಈಕೆಯ ವೀಡಿಯೋಗಳನ್ನು ನೋಡಬೇಡಿ, ಈಕೆಯದು ಕೆಟ್ಟ ಮನಸ್ಥಿತಿ. ಕೆಟ್ಟ ಉದ್ದೇಶದಿಂದ ತನ್ನ ಮಗನ ತುಟಿಗೇ ಮುತ್ತಿಕ್ಕಿದ್ದಾಳೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಇದಕ್ಕೆ ವಿಶ್ವಾದ್ಯಂತ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದರು. ಆದರೆ ತನ್ನ ಬಗೆಗಿನ ಜನರ ಈ ಮನಸ್ಥಿತಿಯನ್ನು ಛಾವಿ ಪ್ರಶ್ನೆ ಮಾಡಿದ್ದಾರೆ. ತನ್ನ ಮಗುವಿನ ತುಟಿಗೆ ಮುತ್ತಿಡುವ ತಾಯಿಯ ಬಗ್ಗೆ ಹೀಗೆ ಮಾತನಾಡುವವರು ಆಕೆ ಎದೆ ಹಾಲುಣಿಸೋ ಬಗೆಗೂ ಕೆಟ್ಟದಾಗಿಯೇ ಯೋಚಿಸೋದಿಲ್ಲ ಅಂತ ಹೇಗೆ ಭಾವಿಸಬೇಕು. ನನ್ನ ತಾಯಿಯೂ ನನ್ನ ತುಟಿಗೆ ಮುತ್ತಿಡುತ್ತಿದ್ದಳು ಎಂಬ ಮಾತನ್ನು ಹೇಳಿದ್ದಾರೆ.

ಈ ಬಗ್ಗೆ ಟೈಮ್ಸ್ ನಡೆಸಿದ ಕಿರು ಸಂದರ್ಶನದಲ್ಲಿ ನಟಿ ಈ ಬಗ್ಗೆ ವಿವರ ನೀಡಿದ್ದಾರೆ.

- ಮೊದಲಿಗೆ, ನಿಮ್ಮ ಆರೋಗ್ಯ ಈಗ ಹೇಗಿದೆ?
ಮುಂದಿನ ತಿಂಗಳು ಕೊನೆಯಾದರೆ ನನಗೆ ಕ್ಯಾನ್ಸರ್ ಬಂದು ಒಂದು ವರ್ಷವಾಗುತ್ತೆ. ನಾನೀಗ ಚೆನ್ನಾಗಿದ್ದೀನಿ. ಕಂಪ್ಲೇಂಟ್ಸ್ ಏನಿಲ್ಲ. ಈಗ ಕೆಲವು ಟ್ಯಾಬ್ಲೆಟ್ಸ್ ತಗೊಳ್ಳೋದಕ್ಕಷ್ಟೇ ಇದೆ. ಮುಂದಿನ ಒಂಭತ್ತು ವರ್ಷದವರೆಗೆ ನಾನಿದನ್ನು ತಗೊಳ್ಬೇಕಿದೆ.

- ನೀವು ನಿಮ್ಮ ಮಗನ ತುಟಿ ಚುಂಬಿಸಿದ್ದಕ್ಕೆ ನೆಟ್ಟಿಗರು ಚೈಲ್ಡ್ ಅಬ್ಯೂಸ್ ಅಂತಿದ್ದಾರೆ?
ನನಗೆ ಈ ಬಗೆಗಿನ ಯೋಚನೆಗಳನ್ನು ನೋಡಿದರೆ ಅಚ್ಚರಿ ಆಗುತ್ತೆ. ನನ್ನ ತಾಯಿ ನನ್ನ ತುಟಿಗೆ ಮುತ್ತಿಡುತ್ತಿದ್ದರು. ಅದು ಪರ್ಫೆಕ್ಟ್‌ಲೀ ನಾರ್ಮಲ್. ನಿಮ್ಮ ಮಗುವನ್ನು ನೀವು ಪ್ರೀತಿಸೋದನ್ನು ಪದಗಳಲ್ಲಿ ಹಿಡಿದಿಡಲಾಗದು. ಯಾವ ತಾಯಿಯಾದರೂ ತನ್ನ ಮಗುವಿಗೆ ಎದೆಹಾಲುಣಿಸೋದನ್ನು ಬೇರೆ ಥರ ಅರ್ಥ ಮಾಡಿಕೊಳ್ಳೋಕೆ ಸಾಧ್ಯನಾ? ಈ ಇಶ್ಯೂಗೆ ನನ್ನ ಪ್ರತಿಕ್ರಿಯೆ ಅಂದರೆ ನನ್ನ ಮಕ್ಕಳಿಗೆ ಮುತ್ತಿಡೋ ಇನ್ನೊಂದಿಷ್ಟು ಫೋಟೋಗಳನ್ನು ಅಪ್‌ಲೋಡ್ ಮಾಡೋದು.

ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ

- ನಿಮ್ಮ ಪತಿ ಮೋಹಿತ್ ಹುಸೈನ್ ಈ ಪ್ರಕರಣವನ್ನು ಹೇಗೆ ತಗೊಂಡಿದ್ದಾರೆ?
ಹೊರಗಿನವರು ಏನೋ ಹೇಳಿದ್ದಕ್ಕೆಲ್ಲ ಮೋಹಿತ್ ರಿಯಾಕ್ಟ್ ಆಗಲ್ಲ. ಆದರೆ ಕೆಲವೊಮ್ಮೆ ಆತ ಕೇಳ್ತಾನೆ, ನಿನ್ನ ಬಗ್ಗೆ ಹೀಗೆಲ್ಲ ಹಾರ್ಶ್ ಆಗಿ ಬರೀತಿದ್ದಾರಲ್ಲ, ನೀನಿದನ್ನ ಹೇಗೆ ತಗೊಂಡಿದ್ದಿ? ನೋವನುಭವಿಸಿಲ್ಲ ತಾನೆ ಅಂತ.

ನೀವು ನಿಮ್ಮ ಪತಿ ಮೋಹಿತ್‌ಗೆ ಕಿಸ್ ಮಾಡಿದ್ದೂ ಟ್ರೋಲ್ ಆಗಿತ್ತು?
ಹೌದಾ? (ನಗು). ಈ ಜನರಿಗೆ ಪ್ರತಿಯೊಂದು ವಿಷ್ಯವೂ ಸಮಸ್ಯೆಯಂತೆಯೇ ಕಾಣುತ್ತದೆ. ನೀವು ನಿಮ್ಮ ಗಂಡನಿಗೆ ಕಿಸ್ ಮಾಡಿದ್ರೆ ಅವ್ರಿಗೇನು, ಮಾಡದಿದ್ರೆ ಅವರಿಗೇನು? ಅಥವಾ ನಾನು ನನ್ನ ಮಗುವನ್ನು ಮುದ್ದಿಸಿದರೂ ಮುದ್ದಿಸದಿದ್ದರೂ ಅವರಿಗೇನು? ನಾನು ನನ್ನ ಮಗನನ್ನು ಕೆಟ್ಟ ದೃಷ್ಟಿಯಿಂದ ನೋಡ್ತಿದ್ದೀನಿ ಅಂತೆಲ್ಲ ಹೇಳ್ತಾರೆ. ನಾನು ಮಗನಿಗೆ ಇದನ್ನೆಲ್ಲ ಇಗ್ನೋರ್ ಮಾಡು ಅಂತ ಹೇಳ್ತೀನಿ. ಆದರೆ ನನ್ನ ಮಗಳು ಈಗ ಬೆಳೆಯುತ್ತಿರುವ ಹುಡುಗಿ. ಅವಳ ಸೂಕ್ಷ್ಮ ಮನಸ್ಥಿತಿ ಇದಕ್ಕೆ ಹೇಗೆ ರಿಯಾಕ್ಟ್ ಮಾಡುತ್ತೋ ಅನ್ನೋ ಆತಂಕ ಇದೆ.

ಗಾಯಕಿ ಆಗ್ಬೇಕಿತ್ತು ಅಗಲಿಲ್ಲ, HR ಆಸೆ ಇತ್ತು ಅಗಲಿಲ್ಲ; ತಪ್ಪು ದಾರಿಯಲ್ಲಿದ್ದು ಅಕ್ಟಿಂಗ್ ಅವಕಾಶ ಪಡೆದ 'ಕನ್ನಡತಿ' ರಂಜನಿ

click me!